ಲಖನೌ (ಉತ್ತರ ಪ್ರದೇಶ): ಸೀಮಾ ಗುಲಾಮ್ ಹೈದರ್ ಪಾಕಿಸ್ತಾನದಿಂದ ರಹಸ್ಯವಾಗಿ ಪ್ರೇಮಿ ಸಚಿನ್ ಮೀನಾಗಾಗಿ ಬಂದಿದ್ದಾರೆ. ರಾಜಸ್ಥಾನದ ಅಲ್ವಾರ್‌ನ ಅಂಜು ಪ್ರವಾಸಿ ವೀಸಾದಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾಗೆ ಹೋಗಿದ್ದರು. ಸೀಮಾ ಹಾಗೂ ಅಂಜು ಅವರಂತೆ ಉಜ್ಮಾ ಅವರು ತಮ್ಮ ಪ್ರೇಮಿಯನ್ನು ಭೇಟಿ ಮಾಡಲು ಇಬ್ಬರು ಮಕ್ಕಳೊಂದಿಗೆ ಪ್ರವಾಸಿ ವೀಸಾದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ನಂತರ ವೀಸಾ ಇಲ್ಲದೇ 15 ವರ್ಷಗಳ ಕಾಲ ಲಖನೌದಲ್ಲಿ ವಾಸಿಸುತ್ತಿದ್ದರು. ಉಜ್ಮಾ ಯಾರು ಮತ್ತು ಆಕೆಯನ್ನು ಹೇಗೆ ಹಿಡಿಯಲಾಯಿತು ಎಂಬುದರ ತಿಳಿಯೋದಾದರೆ,
ಪೊಲೀಸರಿಗೆ ಲಭಿಸಿತ್ತು ಗುಪ್ತಚರ ಮಾಹಿತಿ: 14 ಡಿಸೆಂಬರ್ 2019ರಂದು, ಸ್ಥಳೀಯ ಗುಪ್ತಚರ ಘಟಕ (LIU) ಚಿನ್ಹಾಟ್ ಪೊಲೀಸರಿಗೆ ಪಾಕಿಸ್ತಾನಿ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಜಗ್ಗೌರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿ ನೀಡಿತ್ತು. ಮಾಹಿತಿ ಪಡೆದ ಚಿನ್ಹತ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡ ಆಗಿನ ಇನ್ಸ್‌ಪೆಕ್ಟರ್ ಸಂಜಯ್ ಯಾದವ್ ಅವರು ತಮ್ಮ ತಂಡವನ್ನು ರಚಿಸಿಕೊಂಡು ಜಗ್ಗೌರ್‌ನ ಸಲಾಲ್ ಅಬ್ದುಲ್ ನಾಸಿರ್ ಅವರ ಮನೆಗೆ ತಲುಪಿದರು. ವಿಚಾರಿಸಿದಾಗ ನಾಸಿರ್‌ನ ಪತ್ನಿ ಉಜ್ಮಾ ಪಾಕಿಸ್ತಾನದ ನಿವಾಸಿಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಉಜ್ಮಾ ಅವರು 1996 ರಲ್ಲಿ ನಾಸಿರ್ ಅವರನ್ನು ವಿವಾಹವಾದರು. ಇದರ ನಂತರ, ಅವರ ಇಬ್ಬರು ಹೆಣ್ಣುಮಕ್ಕಳಾದ ಮೆಹಕ್ ಮತ್ತು ಮನಹಿಲ್ ಕಿದ್ವಾಯಿ ಜನಿಸಿದರು. ಇಲ್ಲಿಯವರೆಗೂ ಚೆನ್ನಾಗಿಯೇ ಇತ್ತು. ಆದರೆ, ಇನ್ಸ್‌ಪೆಕ್ಟರ್ ಸಂಜಯ್ ಯಾದವ್ ಅವರು, ಉಜ್ಮಾಳ ವೀಸಾ ಕೇಳಿದರು. ಬಳಿಕ ಉಜ್ಮಾಳ ಭಾರತಕ್ಕೆ ಬರಲು ಕಾರಣವೇನು ಎಂಬುದು ಬೆಳಕಿಗೆ ಬಂದಿತ್ತು.
15 ವರ್ಷಗಳಿಂದ ಲಖನೌದಲ್ಲಿ ಅಕ್ರಮವಾಗಿ ತಂಗಿದ್ದ ಉಜ್ಮಾ: ಆಗಿನ ಇನ್ಸ್‌ಪೆಕ್ಟರ್ ಸಂಜಯ್ ಯಾದವ್ ಅವರು, ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್ ಪ್ರಕಾರ, ಉಜ್ಮಾ, ಪ್ರೇಮಿಯನ್ನು ಭೇಟಿಯಾಗಲು ಪ್ರವಾಸಿ ವೀಸಾದಲ್ಲಿ ಪಾಕಿಸ್ತಾನದಿಂದ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆಗಸ್ಟ್ 17, 2004ರಂದು ಲಖನೌಗೆ ಬಂದರು. ಉಜ್ಮಾ ಅವರು ಕೇವಲ 65 ದಿನಗಳವರೆಗೆ ವೀಸಾವನ್ನು ಪಡೆದಿದ್ದರು. ಅದು 31 ಡಿಸೆಂಬರ್ 2004ರಂದು ಮುಕ್ತಾಯವಾಗಿತ್ತು. ಇದರ ಹೊರತಾಗಿಯೂ, ಉಜ್ಮಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಲಖನೌದಲ್ಲಿ 15 ವರ್ಷಗಳ ಕಾಲ ವೀಸಾ ಇಲ್ಲದೇ ಅಕ್ರಮವಾಗಿ ವಾಸಿಸುತ್ತಿದ್ದರು. ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ವಿದೇಶಿ ಕಾಯಿದೆಯ ಸೆಕ್ಷನ್ 14ರ ಅಡಿ ಪಾಕಿಸ್ತಾನಿ ಮಹಿಳೆ ಉಜ್ಮಾ ಮತ್ತು ಅವರ ಇಬ್ಬರು ಮಕ್ಕಳ ವಿರುದ್ಧ ದೂರು ದಾಖಲಿಸಿದ ನಂತರ ಉಜ್ಮಾ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಸ್ತುತ ಎಡಿಸಿಪಿ ಪೂರ್ವ ಸೈಯದ್ ಅಲಿ ಅಬ್ಬಾಸ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಅಶಾಂತಿ: ವಿಜೇತ ಅಭ್ಯರ್ಥಿಗಳು ಸೇರಿ 65 ಬಿಜೆಪಿ ಕಾರ್ಯಕರ್ತರಿಗೆ ಅಸ್ಸೋಂನಲ್ಲಿ ಆಶ್ರಯ..