ನವದೆಹಲಿ: ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕೂದಲನ್ನು ಚೀನಾಗೆ ಕಳ್ಳಸಾಗಣೆ ಮಾಡುತ್ತಿರುವುದು ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆಂಧ್ರ, ತೆಲಂಗಾಣದ ಜೊತೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾ, ಅಸ್ಸೋಂನ ಗುವಾಹಟಿಯಿಂದಲೂ ಮಣಿಪುರ, ಮಿಜೋರಾಂ ಮಾರ್ಗಗಳ ಮೂಲಕ ತೆರಿಗೆ ತಪ್ಪಿಸಲು ಮ್ಯಾನ್ಮಾರ್, ಬಾಂಗ್ಲಾದೇಶ, ವಿಯೆಟ್ನಾಂ, ಆಸ್ಟ್ರಿಯಾ ದೇಶಗಳಿಗೆ ಅಕ್ರಮವಾಗಿ ಕೂದಲನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೇ ಮ್ಯಾನ್ಮಾರ್ನ ಕೆಲವು ಪ್ರಜೆಗಳು ಹೈದರಾಬಾದ್‌ನಲ್ಲಿ ಅಕ್ರಮವಾಗಿ ಹೇರ್ ಬ್ಯುಸಿನೆಸ್ ನಡೆಸಲು ಕ್ಯಾಂಪ್ ಹಾಕಿರುವುದನ್ನು ಎಂದು ಇಡಿ ಪತ್ತೆ ಮಾಡಿದೆ.
ಇದನ್ನೂ ಓದಿ: ನಕಲಿ RT-PCR Report ತೋರಿಸಿ ರಾಜ್ಯ ಪ್ರವೇಶಕ್ಕೆ ಯತ್ನ: 7 ಜನರ ಬಂಧನ
ಈಗಾಗಲೇ ಸುಮಾರು 16 ಕೋಟಿ ರೂ. ಮೌಲ್ಯದ ಕೂದಲು ತೆಲುಗು ರಾಜ್ಯಗಳ ವ್ಯಾಪಾರಿಗಳ ಮೂಲಕ ಚೀನಾ ತಲುಪಿದೆ. ಈ ಸಂಬಂಧ ಆಂಧ್ರ ಮತ್ತು ತೆಲಂಗಾಣದ ವಿಕಾಸ್ ಹೇರ್ ಎಂಟರ್‌ಪ್ರೈಸಸ್, ನರೇಶ್ ವುಮೆನ್ ಹೇರ್, ಹೃತಿಕ್ ಎಕ್ಸಿಮ್ ಎಂಟರ್‌ಪ್ರೈಸಸ್, ಎಸ್‌ಎಸ್ ಇಂಪೆಕ್ಸ್, ಶಿವ ಕೇಶವ್ ಹ್ಯೂಮನ್ ಹೇರ್, ಲಕ್ಷ್ಮಿ ಎಂಟರ್‌ಪ್ರೈಸಸ್, ಆರ್‌ಕೆ ಹೇರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕೂದಲು ರಫ್ತು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಕ್ಷೌರಿಕರ ವಿರುದ್ಧವೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.