ETV Bharat / bharat

ಸಾರ್ವಜನಿಕ ಜೀವನದಲ್ಲಿರುವ 'ಅಪರಾಧಿಗಳು' ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತಕ್ಕೆ ಕಾರಣ - Criminals in Public life lowering democratic values news

ದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಂಸತ್ತು ಭಾರತಕ್ಕಾಗಿ 14 ಅಂಶಗಳ ಕಾರ್ಯಸೂಚಿಯನ್ನು ಅನಾವರಣಗೊಳಿಸಿತ್ತು. ಹೊಣೆಗಾರಿಕೆ ಮತ್ತು ಜವಾಬ್ದಾರಿಯ ಸುಸಂಸ್ಕೃತ ಸಂಸ್ಕೃತಿಯಲ್ಲಿ ಅರಳುವ ಬದಲು, ಭಾರತೀಯ ಪ್ರಜಾಪ್ರಭುತ್ವವುದ ಮೌಲ್ಯ ಹಣ, ಜಾತಿ ಮತ್ತು ಮತ ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳಿಗೆ ಸೀಟು ನೀಡುವ ಮೂಲಕ ಕುಸಿಯಿತು.

Criminals in Public life lowering democratic values
ಸಾರ್ವಜನಿಕ ಜೀವನದಲ್ಲಿರುವ ಅಪರಾಧಿಗಳು ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತಕ್ಕೆ ಕಾರಣ
author img

By

Published : May 14, 2021, 9:31 AM IST

ಮೊದಲ ಸಾರ್ವತ್ರಿಕ ಚುನಾವಣೆಯ ಈ ನೆಲದ ಅತ್ಯುನ್ನತ ಕಾನೂನು ರಚಿಸುವ ಸಂಸ್ಥೆಯಾಗಿ ಹೊರಹೊಮ್ಮಿದ ಭಾರತದ ಸಂಸತ್ ಅಸ್ತಿತ್ವಗೊಂಡು 70 ನೇ ವರ್ಷಕ್ಕೆ ಕಾಲಿಡುತ್ತಿದೆ. ಭಾರತದ ಸಂಸತ್ ಅಸ್ತಿತ್ವಕ್ಕೆ ಬಂದ ನಂತರ, ದೇಶದ ಪ್ರಜಾಪ್ರಭುತ್ವವು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಸುವರ್ಣ ಮಾತುಗಳೊಂದಿಗೆ ತನ್ನ ಮುಂದಿನ ಹೆಜ್ಜೆ ಮುಂದಿಟ್ಟಿತು. "ನಿಮ್ಮ ಪ್ರಯತ್ನಗಳು ಜನರಿಗೆ ಉತ್ತಮ ಪ್ರಯೋಜನಗಳನ್ನು ತರುತ್ತವೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಸಂಸತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಬೆಳಗಿಸುವಲ್ಲಿ ಉದಾಹರಣೆಯಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಉಲ್ಲೇಖಿಸಿದರು.

ವಿಶ್ವದ ಏಳನೇ ಜನಸಂಖ್ಯೆಯನ್ನು ಹೊಂದಿರುವ ಇತಿಹಾಸಕ್ಕೆ ಸಾಕ್ಷಿಯಾಗಿರುವ ಭಾರತದ ಸಂಸತ್ ಅತ್ಯುತ್ತಮ ಸಂಸ್ಥೆ ಎಂದು ಪಂಡಿತ್ ಜವಾಹರಲಾಲ್ ನೆಹರು ಬಣ್ಣಿಸಿದ್ದರು. ಲೋಕಸಭೆಯ ಮೊದಲ ಸ್ಪೀಕರ್ ಗಣೇಶ್ ವಾಸುದೇವ್ ಮಾವ್ಲಂಕರ್ ಅವರು ಉನ್ನತ ಸಂಸದೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಲು ದಣಿವರಿಯದ ಪ್ರಯತ್ನಗಳನ್ನು ಮಾಡಿದನ್ನು ಇಲ್ಲಿ ಸಮ್ಮರಿಸಿಬಹುದು. ಜಾಗತಿಕವಾಗಿ ಪ್ರಸಿದ್ಧ ಪತ್ರಿಕೆ ‘ದಿ ಗಾರ್ಡಿಯನ್’ 1954 ರಲ್ಲಿ ಭಾರತೀಯ ಸಂಸತ್ತಿನ ಕಾರ್ಯಕ್ಷಮತೆಯನ್ನು ಶ್ಲಾಘಿಸಿತ್ತು, ಪಂಡಿತ್ ನೆಹರು ಇದನ್ನು ಇಡೀ ಏಷ್ಯಾಕ್ಕೆ ಇದೊಂದು ಶಾಲೆ ಎಂದರೆ ತಪ್ಪಾಗಲಾರದು ಉಲ್ಲೇಖಸಿದ್ದರು. ಸಂಸತ್ ನ ಗೌರವಾನ್ವಿತ ಸದಸ್ಯರು ಅ ಸಂದರ್ಭದಲ್ಲಿ ತಮ್ಮನ್ನು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು ಎಂದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

ಶಾಸಕಾಂಗಗಳ ಪ್ರತಿಷ್ಠೆಯ ಕುಸಿತವು ಪ್ರಜಾಪ್ರಭುತ್ವವನ್ನು ದೊಡ್ಡ ಪ್ರಕ್ಷುಬ್ಧತೆಗೆ ತಳ್ಳುತ್ತದೆ ಎಂದು ಭಾವಿಸಿದ್ದರಿಂದ ಆ ದಿನಗಳಲ್ಲಿ ಸಂಸತ್ತು ಅನುಕರಣೀಯ ದೂರದೃಷ್ಟಿಯನ್ನು ಪ್ರದರ್ಶಿಸಿತು. ತಮ್ಮ ರಾಜಕೀಯ ಸಂಬಂಧವನ್ನು ಬದಿಗಿರಿಸಿ, ಆ ದಿನಗಳಲ್ಲಿ ಸಂಸದರು ತಪ್ಪಿತಸ್ಥ ಸದಸ್ಯರನ್ನು ತೆಗೆದುಹಾಕಲು ಒಗ್ಗೂಡುತ್ತಿದ್ದರು. ಕಾಂಗ್ರೆಸ್ ಸಂಸದ ಫಿರೋಜ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಶ್ನೆಯನ್ನು ಕೇಳಲು ಕಾಂಗ್ರೆಸ್ನ ಮುದ್ಗಲ್ ಎಂಬ ಸದಸ್ಯ 2000 ರೂ. ಲಂಚ ಪಡೆದಿದ್ದರು ಎಂದು ಆರೋಪಿಸಿದ್ದರು. ಮುದ್ಗಲ್ ಕೂಡ ಕಾಂಗ್ರೆಸ್ ನಿಂದ ಆರಿಸಲ್ಪಿಟ್ಟಿದ್ದರೂ, ಅಂದಿನ ಪ್ರಧಾನಿ ನೆಹರೂ ಅವರನ್ನು 1951 ರ ಸೆಪ್ಟೆಂಬರ್‌ನಲ್ಲಿ ಪಕ್ಷದಿಂದ ವಜಾಗೊಳಿಸಿದ್ದರು. ಹೀಗೆ ಅವರು ಸಂಸತ್ತಿನ ಪಾವಿತ್ರ್ಯವನ್ನು ಎತ್ತಿಹಿಡಿಯಲು ತಮ್ಮ ಸಮರ್ಪಣೆಯನ್ನು ತೋರಿಸಿದ್ದರು.

ಆಗಿನ ಮಹಾನ್ ನಾಯಕರು ಎತ್ತಿಹಿಡಿದಿದ್ದ ಮಹಾನ್ ನಾಯಕರು ಸಮರ್ಥಿಸಿದ ಆ ಮೌಲ್ಯಗಳು 17 ಸಾರ್ವತ್ರಿಕ ಚುನಾವಣೆಗಳ ನಂತರ ಎಲ್ಲಿ ಕಣ್ಮರೆಯಾಯಿತು? ಸಂಸತ್ತಿನಿಂದ ಅಸೆಂಬ್ಲಿಯವರೆಗೆ ಪ್ರತಿ ಶಾಸನ ಸಭೆಯು ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಂದ ತುಂಬಿರುವುದರಿಂದ ಶಾಸಕಾಂಗ ವ್ಯವಸ್ಥೆಯು ಮೇಲಿರುವ ಕಪ್ಪುಚುಕ್ಕೆ ಯಾವುವು?

ಸರ್ಕಾರದ ಆದಾಯ ಮತ್ತು ಆದಾಯದ ಮೂಲಗಳನ್ನು ಚರ್ಚಿಸಲು ಬ್ರಿಟಿಷರು ವರ್ಷಕ್ಕೊಮ್ಮೆ ಶಾಸಕಾಂಗದ ಸಭೆ ಕರೆಯುತ್ತಿದ್ದರು. ಆದರೆ ಭಾರತೀಯ ಸಂವಿಧಾನ ಜಾರಿಗೆ ಬಂದ ನಂತರ ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಮತದಾರರಾಗಿ, ಡಾ. ಭೀಮರಾವ್ ಅಂಬೇಡ್ಕರ್ ತಮ್ಮ ಸಂವಿಧಾನದಲ್ಲಿ ಸರ್ಕಾರವು ಸಂಸತ್ ಗೆ ಉತ್ತರದಾಯಿಯಾಗಿರಬೇಕು ಎಂದು ಷರತ್ತು ವಿಧಿಸಿದ್ದರು. ಇಂದು ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ ಸಂಸತ್ತು ಅಂಗೀಕರಿಸಿದ ನಿರ್ಣಯಗಳು ಸಹ ಜಾರಿಗೆ ಬರುತ್ತಿಲ್ಲ.

ದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಂಸತ್ತು ಭಾರತಕ್ಕಾಗಿ 14 ಅಂಶಗಳ ಕಾರ್ಯಸೂಚಿಯನ್ನು ಅನಾವರಣಗೊಳಿಸಿತ್ತು. ಹೊಣೆಗಾರಿಕೆ ಮತ್ತು ಜವಾಬ್ದಾರಿಯ ಸುಸಂಸ್ಕೃತ ಸಂಸ್ಕೃತಿಯಲ್ಲಿ ಅರಳುವ ಬದಲು, ಭಾರತೀಯ ಪ್ರಜಾ ಪ್ರಭುತ್ವವುದ ಮೌಲ್ಯ ಹಣ, ಜಾತಿ ಮತ್ತು ಮತ ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳಿಗೆ ಸೀಟು ನೀಡುವ ಮೂಲಕ ಕುಸಿಯಿತು.

ಹದಿನ್ಲಾಕನೇ ಲೋಕಸಭೆಯ ಎಲ್ಲಾ ಸಂಸದರಲ್ಲಿ 24 ಪ್ರತಿಶತದಷ್ಟು ಜನರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಲೋಕಸಭೆಗೆ ಆರಿಸಿ ಬಂದ ಅಂತಹ ವ್ಯಕ್ತಿಗಳ ಸಂಖ್ಯೆ 30 ಪ್ರತಿಶತಕ್ಕೆ ಏರಿದೆ, ಕಳೆದ ಲೋಕಸಭೆಯಲ್ಲಿ 34 ಪ್ರತಿಶತ ಸಂಸದರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಪ್ರಸ್ತುತ ಲೋಕಸಭೆಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಂಸದರ 43 ಪ್ರತಿಶತಕ್ಕೆ ಏರಿದೆ. ಸಂಸದರಿಗೆ ಮಂತ್ರಿ ಸ್ಥಾನ ಪಡೆಯಲು ಅಪರಾಧ ಹಿನ್ನೆಲೆ ಆರೋಪಗಳು ಅಡ್ಡಿಯಾಗಬೇಕಾಗಿಲ್ಲ ಎಂದು ಮನಮೋಹನ್ ಸಿಂಗ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಬಹುದಾಗಿದೆ.

ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಯು ಸಾರ್ವಜನಿಕ ಪ್ರತಿನಿಧಿಯಾಗುವುದನ್ನು ಸೀಮಿತ ಅವಧಿಗೆ ಮಾತ್ರ ತಡೆಹಿಡಿಯುವುದು ವಿಪರ್ಯಾಸ, ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಅರೋಪ ಸಾಬೀತಾದರೆ ಸರ್ಕಾರಿ ನೌಕರನನ್ನು ಶಾಶ್ವತವಾಗಿ ಸೇವೆಯಿಂದ ವಜಾಗೊಳಿಲಾಗುತ್ತದೆ. ಇದು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳುತ್ತಾ, ಈಗಾಗಲೇ ನ್ಯಾಯಾಲಯದಲ್ಲಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಲ್ಲಿ ಸಲ್ಲಿಸಲಾಗಿದೆ. ಆದರೆ ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ಯಥಾಸ್ಥಿತಿಗೆ ಒತ್ತು ನೀಡಿದ್ದು, ಸಂಸದರು ಯಾವುದೇ ಸೇವಾ ನಿಯಮಗಳಿಗೆ ಬದ್ಧರಾಗಿಲ್ಲ ಆದರೆ ಜನರಿಗೆ ಸೇವೆ ಸಲ್ಲಿಸುವ ಪ್ರಮಾಣವಚನ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಎಲ್ಲಾ ಸರ್ಕಾರಗಳು ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳ ಪರವಾಗಿವೆ. ಹೀಗೆ ಅವರು ಬೆಲಿಯೇ ಎದ್ದು ಹೊಲ ಮೇಯಿಯುವ ಮನಸ್ಥಿತಿಗೆ ಬೆಂಬಲಿಸುತ್ತಿದ್ದಾರೆ ಮತ್ತು ಆ ಮೂಲಕ ಸಂಸತ್ತಿನ ಪ್ರತಿಷ್ಠೆಯನ್ನು ಕಡಿಮೆ ಮಾಡಿದ್ದಾರೆ.

- ಡಾ.ಬಿ.ಅರವಿಂದ ಶೆಟ್ಟಿ, ಹಿರಿಯ ಪತ್ರಕರ್ತ/ಮೀಡಿಯಾ ಮಂತ್ರ ನಿರ್ದೇಶಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.