ETV Bharat / bharat

ಮದುವೆ ನಿರಾಕರಿಸಿದ ಸಾಫ್ಟ್‌ವೇರ್ ಇಂಜಿನಿಯರ್​ ಕೊಲೆ ಯತ್ನ; ಕಿಡಿಗೇಡಿ ಯುವಕ ಸೆರೆ - ನರಸಿಂಗಿ ಪೊಲೀಸ್ ಠಾಣೆ

ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ಕೋಪಗೊಂಡ ಯುವಕ ಆಕೆಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

young man cut a software engineers throat
ಸಾಫ್ಟ್‌ವೇರ್ ಇಂಜಿನಿಯರ್​ ಕತ್ತು ಕೊಯ್ದು ಕೊಲೆಗೆ ಯುವಕ ಯತ್ನ
author img

By

Published : Jun 21, 2023, 7:44 PM IST

ಹೈದರಾಬಾದ್​: ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳೆಂದು ಯುವಕ ಆಕೆಯ ಕತ್ತು ಕೊಯ್ದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಹೈದರಾಬಾದ್ ನಗರದ ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಪ್ಪಲಗುಡ ಟೀ ಗ್ರಿಲ್ ಹೋಟೆಲ್ ಬಳಿ ನಡೆದಿದೆ. ಪಲ್ನಾಡು ಜಿಲ್ಲೆಯ ಪಿದುಗುರಳ್ಳ ಮೂಲದ ಯುವತಿ (22) ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದಳು. ಗಚ್ಚಿಬೌಲಿಯ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಹತ್ತಿರದ ಸಂಬಂಧಿ ಚಿಲಕಲೂರಿಪೇಟೆಯ ಕೋಟ ಗಣೇಶ್ (27) ಎಂಬಾತ ಗಚ್ಚಿಬೌಲಿಯಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಗಣೇಶ್​​ನ ಜೊತೆಗೆ ಯುವತಿಯನ್ನು ಮದುವೆ ಮಾಡಲು ಪೋಷಕರು ಮುಂದಾಗಿದ್ದು, ಯುವತಿ ಮದುವೆ ನಿರಾಕರಿಸಿದ್ದಳಂತೆ.

ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿದ್ದ ಆಕೆಗೆ ಕರೆ ಮಾಡಿ, ಬೈಕ್‌ನಲ್ಲಿ ಟೀ ಗ್ರಿಲ್ ಹೋಟೆಲ್‌ಗೆ ಕರೆದೊಯ್ದಿದ್ದಾನೆ. ಈ ವೇಳೆ ಗಣೇಶ್ ಮತ್ತೊಮ್ಮೆ ಯುವತಿ ಎದುರು ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಕೆ ಮತ್ತೆ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಆರೋಪಿ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯ ಗಂಟಲು ಮತ್ತು ಮುಖದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿವೆ. ದಾಳಿಯನ್ನು ತಡೆಯುವ ಭರದಲ್ಲಿ ಯುವತಿಯ ಕೈಗಳಿಗೂ ಗಾಯವಾಗಿದೆ.

ನಂತರ ಗಣೇಶ್ ತೀವ್ರ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಕಾಂಟಿನೆಂಟಲ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದ ಗಚಿಬೌಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣವು ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂದು ಗಚಿಬೌಲಿ ಪೊಲೀಸರು ಅವರಿಗೆ ಸಂದೇಶ ಕಳಿಸಿದ್ದಾರೆ. ನರಸಿಂಗಿ ಪೊಲೀಸರು ತಕ್ಷಣ ಗಣೇಶ್‌ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಯುವಕ ಸಂಬಂಧಿ ಎಂಬ ಕಾರಣಕ್ಕೆ ಮಾತನಾಡುತ್ತಿದ್ದೆ ಎಂದು ಸಂತ್ರಸ್ತೆ ತಿಳಿಸಿದ್ದು, ಆರೋಪಿಯನ್ನು ಪ್ರೀತಿಸಿಲ್ಲ. ಆತನ ಪ್ರೀತಿಯನ್ನು ತಿರಸ್ಕರಿಸಿದ ಕೋಪದಿಂದ ನನ್ನನ್ನು ಕೊಲ್ಲಲು ಹೊರಟಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆಕೆ ನೀಡಿದ ಮಾಹಿತಿ ಮೇರೆಗೆ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರ: ಸ್ಕೂಟಿ ಕಲಿಸುವೆಯೆಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಪನ್ ಮಂಡಲ್ (52) ಎಂಬಾತ ಬಂಧಿತ ಆರೋಪಿ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂಓದಿ:ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ; ರಾಜಸ್ಥಾನದಲ್ಲಿ ಸಂಚಲನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.