ಕೈತಾಲ್ (ಹರಿಯಾಣ): ಕೈತಾಲ್‌ನಲ್ಲಿ ವುಶು ಗೇಮ್ಸ್ ಮಹಿಳಾ ಆಟಗಾರ್ತಿಯರು ತಮ್ಮ ಕೋಚ್ ದೈಹಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಆಟಗಾರ್ತಿಯ ದೂರಿನ ಮೇರೆಗೆ ಕೋಚ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಒಟ್ಟು 8 ಮಹಿಳಾ ಆಟಗಾರ್ತಿಯರು ದೂರು ದಾಖಲಿಸಿದ್ದಾರೆ.
ಮಹಿಳಾ ಕ್ರೀಡಾಪಟುವಿನಿಂದ ಆರೋಪ: ಮೇ 3 ರಂದು ತರಬೇತುದಾರ ದೀಪಕ್ ತನ್ನ ಮನೆಗೆ ಕರೆದಿದ್ದ ಎಂದು ಕೈತಾಲ್‌ನ ಆಟಗಾರ್ತಿ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಯಲು ನೀಡಿದ್ದ. ಬಳಿಕ ಕಿರುಕುಳ ನೀಡಿದ್ದಾನೆ. ಇದೇ ವೇಳೆ ಮತ್ತಿಬ್ಬರು ಆಟಗಾರರು ಇದ್ದಕ್ಕಿದ್ದಂತೆ ಕೋಚ್ ಮನೆಗೆ ಬಂದಿದ್ದಾರೆ. ಇದನ್ನೂ ತಮ್ಮ ಮನೆಯ ಮುಂದೆ ಅಳವಡಿಸಿರುವ ಸಿಸಿಟಿವಿ ಮೂಲಕ ನೋಡಿದ್ದು, ಅತ್ಯಾಚಾರ ಕೃತ್ಯದಿಂದ ಹಿಂದೆ ಸರಿದಿದ್ದಾನೆ. ಘಟನೆ ನಡೆದ ಬಳಿಕ ಈ ಬಗ್ಗೆ ಯಾರಿಗಾದರೂ ಹೇಳಿದರೆ ಆಟದಿಂದ ಹೊರಹಾಕುವುದಾಗಿ ದೀಪಕ್ ಬೆದರಿಕೆ ಹಾಕಿದ್ದಾನೆ ಎಂದು ಮಹಿಳಾ ಆಟಗಾರ್ತಿ ವಿವರಿಸಿದ್ದಾರೆ. ಇಷ್ಟಾದರೂ ಸುಮ್ಮನಾಗದ ಕೋಚ್, ಆಟದಲ್ಲಿ ಮುನ್ನಡೆಯುವಂತೆ ಆಮಿಷವೊಡ್ಡುವ ಮೂಲಕ ಮತ್ತೆ ಕಿರುಕುಳ ನೀಡಿ, ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಇದರಿಂದ ನೊಂದು ಪ್ರಕರಣ ದಾಖಲಿಸುತ್ತಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.
8 ಮಹಿಳೆಯರಿಂದ ಎಫ್‌ಐಆರ್ : ಮಹಿಳಾ ಆಟಗಾರ್ತಿ ಪ್ರಕಾರ, ಅವರ ಗುಂಪಿನಲ್ಲಿ 8 ಜನ ಮಹಿಳೆಯರಿದ್ದರು. ಅದರಲ್ಲಿ ಈಗ ಉಳಿದಿರುವುದು ನಾಲ್ವರು ಮಾತ್ರ. ಎಲ್ಲಾ ಹುಡುಗಿಯರು ಕೋಚ್ ನಿಂದ ಕಿರುಕುಳಕ್ಕೊಳಗಾಗಿದ್ದಾರೆ. ಕೋಚ್ ತನ್ನ ಕೋಣೆಯಲ್ಲಿ ಗಂಟೆಗಟ್ಟಲೆ ಕೂರಿಸಿ ಮಹಿಳಾ ಕ್ರೀಡಾಪಟುಗಳೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಎಂದು ಎರಡನೇ ಮಹಿಳಾ ಆಟಗಾರ್ತಿ ಹೇಳಿದ್ದಾರೆ. ಕೋಚ್ ನ ಈ ವರ್ತನೆಯ ಬಗ್ಗೆ ಮಹಿಳಾ ಕೋಚ್ಗೆ ಮಾಹಿತಿ ನೀಡಲಾಗಿತ್ತು. ಇದಾದ ನಂತರ ಮಹಿಳಾ ಕೋಚ್ ಮತ್ತು ಮಹಿಳಾ ಆಟಗಾರ್ತಿಯರು ಎಸ್ಪಿ ಅಭಿಷೇಕ್ ಜೋರ್ವಾಲ್ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ತಿಳಿಸಿ, ಕೋಚ್ ವಿರುದ್ಧ ದೂರು ಕೂಡ ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಪ್ರಭಾರಿ ಇನ್ಸ್ ಪೆಕ್ಟರ್ ಗೀತಾದೇವಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಸದ್ಯ ದೀಪಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗಯೇ ಮಹಿಳಾ ಆಟಗಾರ್ತಿಯರಿಗೆ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ. ಸದ್ಯ ಎರಡೂ ಕಡೆಯಿಂದ ವಿಚಾರಣೆ ನಡೆಯುತ್ತಿದೆ. ತನಿಖೆಯಲ್ಲಿ ಏನೆಲ್ಲಾ ಅಂಶಗಳು ಹೊರಬೀಳಲಿವೆ ಎಂಬುದನ್ನು ಗಮನಿಸಿ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೋಚ್ ಹೇಳುವುದೇನು?: ತಮ್ಮ ವಿರುದ್ಧದ ದೂರಿನ ಬಗ್ಗೆ ಕೋಚ್ ಕೂಡ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಮಹಿಳಾ ಆಟಗಾರ್ತಿಯರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಷಡ್ಯಂತ್ರದಿಂದ ತಮ್ಮನ್ನು ಸಿಲುಕಿಸಲಾಗುತ್ತಿದೆ. ತಮ್ಮ ತಪ್ಪಿಲ್ಲದಿದ್ದರೂ ಎಸ್ಪಿ ಎದುರು ಕ್ಷಮೆ ಕೇಳಬೇಕಾಗಿ ಬಂತು. ಅಲ್ಲದೇ ನಾನು ತಪ್ಪಿತಸ್ಥನೆಂದು ಸಾಬೀತಾದರೆ, ಯಾವುದೇ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಬಾಲಕಿಯ ಮೇಲೆ ಕಾಮುಕರ ಅಟ್ಟಹಾಸ: ದೆಹಲಿಯ ನಿರ್ಭಯಾ ಪ್ರಕರಣ ನೆನಪಿಸುವಂತಿದೆ ಈ ಗ್ಯಾಂಗ್ ರೇಪ್