ETV Bharat / bharat

ಮೂವರ ಬರ್ಬರ ಹತ್ಯೆ: ಪತ್ನಿ, ಆಕೆಯ ಇಬ್ಬರು ಪುತ್ರಿಯರ ಸಾವು, ಪತಿಗೆ ಗಂಭೀರ ಗಾಯ... - ಪತಿಗೆ ಗಂಭೀರ ಗಾಯ

ಬಿಹಾರ ರಾಜ್ಯದ ವೈಶಾಲಿಯಲ್ಲಿ ತ್ರಿವಳಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಕಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಆತಂಕ ಮೂಡಿಸಿದೆ.

mother and daughter killed in vaishali
ಮೂರವ ಬರ್ಬರವಾಗಿ ಹತ್ಯೆ, ತಾಯಿ ಮತ್ತು ಇಬ್ಬರು ಪುತ್ರಿಯರ ಸಾವು, ಪತಿಗೆ ಗಂಭೀರ ಗಾಯ..
author img

By ETV Bharat Karnataka Team

Published : Aug 30, 2023, 12:35 PM IST

ವೈಶಾಲಿ (ಬಿಹಾರ): ಬಿಹಾರದ ವೈಶಾಲಿಯಲ್ಲಿ ಕಾಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂಡಿ ಗ್ರಾಮದ ಮನೆಯೊಂದರಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅದೇ ಸಮಯದಲ್ಲಿ ಮಹಿಳೆಯ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಮೃತ ದೇಹಗಳನ್ನು ಗಮನಿಸಿದರೆ, ಹರಿತವಾದ ಆಯುಧದಿಂದ ಹಲ್ಲೆ ನಡೆಸಿರುವಂತಿದೆ. ಮಹಿಳೆಯ ಪತಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಘಟನೆಗೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ವೈಶಾಲಿಯಲ್ಲಿ ತಾಯಿ ಮತ್ತು ಇಬ್ಬರು ಪುತ್ರಿಯರ ಕೊಲೆ: ಬುಧವಾರ ಬೆಳಗ್ಗೆ ಲಾಲಬಾಬು ಸಿಂಗ್ ಅವರ ಪತ್ನಿ ಆಶಾದೇವಿ, ಹಿರಿಯ ಮಗಳು ಕಾಶಿಶ್ ಮತ್ತು ಕಿರಿಯ ಮಗಳು ನಂದಿನಿ ಅವರ ಮೃತದೇಹಗಳು ಮನೆಯ ಹಾಲ್‌ನಲ್ಲಿ ಹಾಸಿಗೆಯ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದವು ಎಂದು ಹೇಳಲಾಗುತ್ತಿದೆ. ಲಾಲಬಾಬು ಸಿಂಗ್ ಹಾಸಿಗೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಎಸ್‌ಡಿಪಿಒ ಓಂಪ್ರಕಾಶ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ, ಮೂರೂ ಶವಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದರು.

ಮಹಿಳೆಯ ಪತಿ ಮಾದಕ ವ್ಯಸನಿ: ಹತ್ಯೆಗೆ ಬಳಸಿದ್ದ ಹರಿತವಾದ ಆಯುಧ ಪತ್ತೆಯಾಗಿದೆ ಎಂದು ಸದರ್​ ಎಸ್‌ಡಿಪಿಒ ತಿಳಿಸಿದ್ದಾರೆ. ಲಾಲಬಾಬು ಸಿಂಗ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಮಾದಕ ವ್ಯಸನಿಯಾಗಿದ್ದ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕೊಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಲಾಲಬಾಬು ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜ್ಞೆ ಬಂದ ನಂತರವೇ ಘಟನೆಗೆ ಕಾರಣಗಳನ್ನು ಬಹಿರಂಗಪಡಿಸಬಹುದು. ಆದರೆ, ಮೂಲಗಳನ್ನು ನಂಬುವುದಾದರೆ, ಕೊಲೆಯ ಹಿಂದೆ ಕೌಟುಂಬಿಕ ಕಲಹ ಇರಬಹುದು ಎಂದು ಶಂಕಿಸಲಾಗಿದೆ.

ಎಸ್​ಡಿಪಿಒ ಓಂಪ್ರಕಾಶ್ ಮಾಹಿತಿ: "ವ್ಯಕ್ತಿಯು ತನ್ನ ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಹರಿತವಾದ ಆಯುಧದಿಂದ ಕೊಂದಿದ್ದಾನೆ. ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು, ಆತನನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆತರಲಾಗಿದೆ. ಕೊಲೆಗೆ ಬಳಸಿದ ಆಯುಧವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಸದರ್ ಎಸ್​ಡಿಪಿಒ ಓಂಪ್ರಕಾಶ್ ಮಾಹಿತಿ ನೀಡಿದರು.

ಜಮೀನಿನ ವಿಚಾರಕ್ಕೆ ಅಣ್ಣ, ಅತ್ತಿಗೆಯನ್ನೇ ಕೊಲೆ ಮಾಡಿದ ತಮ್ಮ( ಟಿ ನರಸೀಪುರ) : ಜಮೀನಿನ ವಿಚಾರಕ್ಕಾಗಿ ಜಗಳ ತೆಗೆದು, ಸಹೋದರನೊಬ್ಬ ಅಣ್ಣ, ಅತ್ತಿಗೆಯನ್ನು ಗುದ್ದಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಜರುಗಿದೆ. ಹತ್ಯೆಯ ನಂತರ ಆರೋಪಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿ.ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದ ಸಮೀಪದ ಜೀನುಗುಡ್ಡ ಹತ್ತಿರ ಸುಮಾರು 170 ಎಕರೆ ಗೋಮಾಳ ಜಮೀನು ಇದೆ. ಅದರಲ್ಲಿ 15 ಗುಂಟೆಯಷ್ಟು ಜಾಗದಲ್ಲಿ ಶಿವಲಿಂಗು (62) ಹಾಗೂ ಭಾರತಿ (55) ದಂಪತಿ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಜಾಗದಲ್ಲಿ ತನಗೂ ಪಾಲು ಕೊಡುವಂತೆ ಶಿವಲಿಂಗು ಸಹೋದರ ಹನುಮಂತು (60) ಆಗಾಗ ಅಣ್ಣನೊಂದಿಗೆ ಜಗಳವಾಡುತ್ತಿದ್ದ ಎಂಬುದು ತಿಳಿದಿದೆ.

ಇದನ್ನೂ ಓದಿ: ಗನ್​ ಪಾಯಿಂಟ್​ನಲ್ಲಿ ಮಹಿಳೆಯನ್ನು ಗದ್ದೆಗೆ ಕರೆದೊಯ್ದು ನಾಲ್ವರು ಯುವಕರಿಂದ ಸಾಮೂಹಿಕ ಅತ್ಯಾಚಾರ.. ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.