ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕಾಂಗ್ರೆಸ್ ಮುಖಂಡ ಫುಲ್‌ಚಂದ್ ಶೇಖ್ ಅವರನ್ನು ನಿನ್ನೆ ಖಾರ್‌ಗ್ರಾಮ್‌ನಲ್ಲಿ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿತ್ತು. ಈ ದುರ್ಘಟನೆ ನಡೆದು ಒಂದು ದಿನದ ನಂತರ, ಮುರ್ಷಿದಾಬಾದ್‌ನಲ್ಲಿ ನಾಮಪತ್ರ ಸಲ್ಲಿಸುವ ಎರಡನೇ ದಿನವೂ ಭಯಾನಕ ಸಂಗತಿಯೊಂದು ಜರುಗಿದೆ.
ಹೌದು, ತೃಣಮೂಲ ಕಾಂಗ್ರೆಸ್ನ ವಲಯ ಅಧ್ಯಕ್ಷ ಸೊಂಟದಲ್ಲಿ ಬಂದೂಕನ್ನು ಇಟ್ಟಿಕೊಂಡು ಬಂದಿದ್ದರು. ತಕ್ಷಣವೇ ಗಮನಿಸಿದ ಪೊಲೀಸ್ ಸಿಬ್ಬಂದಿ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ತೃಣಮೂಲ ನಾಯಕ ಸೊಂಟದಲ್ಲಿ ಪಿಸ್ತೂಲನ್ನು ಇಟ್ಟುಕೊಂಡು ಹೇಗೆ ಬಹಿರಂಗವಾಗಿ ಬೀದಿಗಿಳಿಯುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ.
ಆರಂಭದಿಂದಲೂ ರಾಜ್ಯದ ವಿವಿಧ ಭಾಗಗಳಲ್ಲಿ ರಕ್ತಪಾತ ನಡೆಯುತ್ತಿವೆ. ಸದ್ಯ ಎರಡನೇ ದಿನವೂ ಗಲಾಟೆಗಳು ಮುಂದುವರಿದಿದೆ. ನಾಮಪತ್ರ ಸಲ್ಲಿಕೆ ವೇಳೆ ಎಡರಂಗ-ತೃಣಮೂಲ ದೋಮಕಲ್‌ನಲ್ಲಿ ಜಟಾಪಟಿ ನಡೆದಿದೆ. ಪೊಲೀಸರು ಬಶೀರ್ ಮೊಲ್ಲಾ ಸೊಂಟದಿಂದ ಪಿಸ್ತೂಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಸಹರಾನ್‌ಪುರದ ತೃಣಮೂಲ ವಲಯ ಅಧ್ಯಕ್ಷ, ತೃಣಮೂಲ ನಾಯಕನ ಸೊಂಟದಿಂದ ಪೊಲೀಸ್ ಬಂದೂಕನ್ನು ಹೊರತೆಗೆಯುತ್ತಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿದೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಗೆ ವಂಚನೆ: ಆರೋಪಿ ಬಂಧನ
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ ಟ್ವಿಟರ್ನಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ನಾಮಪತ್ರ ಸಲ್ಲಿಕೆ ಹಂತದಲ್ಲಿ ಇಂತಹ ಘೋರ ಘಟನೆ ನಡೆದರೆ, ಚುನಾವಣೆಯ ದಿನ ಏನಾಗಲಿದೆ. ವಿಫಲ ಮುಖ್ಯಮಂತ್ರಿಗಳು.. ಮುರ್ಷಿದಾಬಾದ್‌ನಲ್ಲಿ ಜೇಬಿನಲ್ಲಿ ಪಿಸ್ತೂಲ್ ಹಿಡಿದುಕೊಂಡು ಬಹಿರಂಗವಾಗಿ ನಡೆದಾಡುತ್ತಿರುವ ತೃಣಮೂಲ ನಾಯಕ.. ಚುನಾವಣಾ ಆಯುಕ್ತರಿಗೆ ಕೇಂದ್ರ ಪಡೆ ಅಗತ್ಯವಿಲ್ಲವೇ?" ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಫುಲ್‌ಚಂದ್ ಶೇಖ್ ಹತ್ಯೆ: ಮುರ್ಷಿದಾಬಾದ್‌ನಲ್ಲಿ ನಾಮಪತ್ರ ಸಲ್ಲಿಸುವ ಮೊದಲ ದಿನವೇ ಖಾಗ್ರಾಮ್‌ನಲ್ಲಿ ಕಾಂಗ್ರೆಸ್ ನಾಯಕ ಫುಲ್‌ಚಂದ್ ಶೇಖ್ ಅವರ ಮನೆಯ ಮುಂದೆ ಕೊಲ್ಲಲ್ಪಟ್ಟಾಗ ಭಾರೀ ಸುದ್ದಿಯಾಗಿತ್ತು. ದುಷ್ಕರ್ಮಿಗಳು ಆತನ ಮೇಲೆ ಐದು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಫುಲ್‌ಚಂದ್ ಶೇಖ್ರನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದೇ ವೇಳೆ ಪೊಲೀಸರು ತೃಣಮೂಲ ನಾಯಕನ ಸೊಂಟದಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಪ್ರತಿಪಕ್ಷಗಳು ರಾಜ್ಯ ಸರ್ಕಾರ ಹಾಗೂ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಅದೇ ಸಮಯದಲ್ಲಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ. ಆದರೆ, ರಾಜ್ಯ ಚುನಾವಣಾ ಆಯೋಗವು ಪಂಚಾಯತ್ ಚುನಾವಣೆಯನ್ನು ರಾಜ್ಯ ಪೊಲೀಸರ ಸಮ್ಮುಖದಲ್ಲಿ ನಡೆಸುವುದಾಗಿ ಘೋಷಿಸಿದೆ.