ಕಾನ್ಪುರ (ಉತ್ತರ ಪ್ರದೇಶ): ಉಪ್ಪು ತಿಂದವನು ನೀರು ಕುಡಿಯಲೇಬೇಕು. ಹಾಗೇ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಆದರೆ, ಇಲ್ಲೊಬ್ಬ ವ್ಯಕ್ತಿ ಮಾಡಿದ ತಪ್ಪಿನಿಂದ ಜೈಲು ಶಿಕ್ಷೆ ಅನುಭವಿಸಲು ಇಷ್ಟವಿಲ್ಲದ ಕಾರಣ ಮತ್ತೊಂದು ಎಡವಟ್ಟು ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ.
ಹೌದು, ಹದಿಹರೆಯದ ಯುವತಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬ ಜೈಲಿಗೆ ಹೋಗಲು ಇಷ್ಟವಿಲ್ಲದ ಕಾರಣ ಪೊಲೀಸ್ ಠಾಣೆಯಲ್ಲಿ ಹಲ್ಲಿಯೊಂದನ್ನು ನುಂಗಿ ಆಸ್ಪತ್ರೆ ಸೇರಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹಲ್ಲಿ ನುಂಗಿದ ಬಳಿಕ ವ್ಯಕ್ತಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಪೊಲೀಸರು ಆತನನ್ನು ತಕ್ಷಣ ನಗರದ ಭಿತರ್‌ಗಾಂವ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅಲ್ಲಿನ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಅಲ್ಲಿಂದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಆರೋಪಿಗೆ ಚಿಕಿತ್ಸೆ ಮುಂದುವರೆದಿದ್ದು ಆತನ ಆರೋಗ್ಯ ಸ್ಥಿರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು: ಶಾಲಾ ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ.. ಆಹಾರ ಸೇವಿಸಿದ 70 ಮಕ್ಕಳು ಅಸ್ವಸ್ಥ
ಜೂನ್ 14 ರಂದು, ಸಾಧ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ತಮ್ಮ 18 ವರ್ಷದ ಮಗಳನ್ನು ತಮ್ಮ ಸಂಬಂಧಿರಲ್ಲಿನ ಮಹಳೆಯೊಬ್ಬರು ಕರೆದುಕೊಂಡು ಹೋಗಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು. ಆತ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಡ ಆರಂಭಿಸಿದ್ದರು.
ಇದನ್ನೂ ಓದಿ: 90 ಅಡಿ ಆಳದ ಬಾವಿಯೊಳಗೆ ಸಿಲುಕಿದ್ದ ಕಾರ್ಮಿಕ: 48 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ
ತನಿಖೆ ವೇಳೆ ಬಾಲಕಿಯು ಬೆಂಗಳೂರಿನಲ್ಲಿರುವುದಾಗಿ ತಿಳಿದು ಬಂದಿತ್ತು. ವ್ಯಕ್ತಿಯೊಬ್ಬ ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಕ್ಷಣ ಕಾನ್ಪುರದಿಂದ ಬೆಂಗಳೂರಿಗೆ ಬಂದ ಸಾಧ್ ಠಾಣಾ ಪೊಲೀಸರು, ಹುಡುಗಿ ಇರುವ ಜಾಗವನ್ನು ಪತ್ತೆ ಮಾಡಿದ್ದಲ್ಲದೇ ಆಕೆಯನ್ನು ರಕ್ಷಣೆ ಕೂಡ ಮಾಡಿದ್ದರು. ಬಳಿಕ ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ಮಾಹಿತಿ ಗೊತ್ತಾಗಿದೆ.
ಇದನ್ನೂ ಓದಿ: ಮೈಸೂರು: ಮದುವೆಯಾಗುವುದಾಗಿ ನಂಬಿಸಿ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ; ಆರೋಪಿ ಸೆರೆ
ಫತೇಪುರ್ ಜಿಲ್ಲೆಯ ಕಿಶನ್‌ಪುರ ಗ್ರಾಮದ ನಿವಾಸಿ ಮಹೇಶ್ ಕುಮಾರ್ (24) ಎಂಬಾತ ತನ್ನನ್ನು ಇಲ್ಲಿಗೆ ಅಪಹರಿಸಿ ಕರೆತಂದಿರುವುದಾಗಿ ಮತ್ತು ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆಕೆ ಪೊಲೀಸರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಬಾಲಕಿಯು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಮಹೇಶ್ ಕುಮಾರ್ನನ್ನು ಬಂಧಿಸಿ ಕಾನ್ಪುರದ ಸಾಧ್ ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಆದರೆ, ಲಾಕಪ್ನಲ್ಲಿದ್ದ ಮಹೇಶ್ ಕುಮಾರ್, ಹೇಗಾದರೂ ಮಾಡಿ ಹೊರಗಡೆ ಹೋಗಬೇಕು ಎಂಬ ಕಾರಣದಿಂದ ಹಲ್ಲಿಯನ್ನು ಹಿಡಿದು ತಿನ್ನುವ ಮೂಲಕ ಆಸ್ಪತ್ರೆಗೆ ಸೇರಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಕೋತಿಗಳ ಕಳೇಬರ ಪತ್ತೆ; ರಾಯಚೂರಿನಲ್ಲಿ ಗ್ರಾಮಸ್ಥರಲ್ಲಿ ಆತಂಕ