ETV Bharat / bharat

ಅಪಘಾತದ ನಂತರ 25 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆ: ಬುದ್ಧಿಮಾಂದ್ಯ ಮಗನ ಎದುರಲ್ಲೇ ಆತ್ಮಹತ್ಯೆಗೆ ಶರಣು - ಉತ್ತರ ಪ್ರದೇಶದ ಕಾನ್ಪುರ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಸಮಯದಲ್ಲಿ ಆಕೆಯ ಬುದ್ದಿಮಾಂದ್ಯ ಮಗ ಹತ್ತಿರದಲ್ಲಿದ್ದ ಎಂದು ಹೇಳಲಾಗುತ್ತಿದೆ.

Woman Suicide
ಅಪಘಾತದ ನಂತರ 25 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆ: ಬುದ್ಧಿಮಾಂದ್ಯ ಮಗನ ಎದುರಲ್ಲೇ ಆತ್ಮಹತ್ಯೆಗೆ ಶರಣ
author img

By ETV Bharat Karnataka Team

Published : Oct 11, 2023, 7:11 AM IST

ಕಾನ್ಪುರ (ಉತ್ತರ ಪ್ರದೇಶ) : ಜಿಲ್ಲೆಯಲ್ಲಿ ವಿಭಿನ್ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಮಾರು 25 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಈ ಅಪಘಾತದ ಬಗ್ಗೆ ಅರಿತು ಸ್ಪಂದಿಸದೇ ಇರುವುದು ದುರ್ದೈವದ ಸಂಗತಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ಪ್ರದೇಶದ ಜನರ ಪ್ರತಿಯೊಂದು ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಬಳಿಕ ನಾಪತ್ತೆಯಾಗುತ್ತಾರೆ.

ಬುದ್ದಿಮಾಂದ್ಯ ಪುತ್ರನ ಎದುರಲ್ಲೇ ತಾಯಿ ಆತ್ಮಹತ್ಯೆ: ಮಾಹಿತಿ ಪ್ರಕಾರ, ನಗರದ ಪಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಲಕ್ಷ್ಮಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆಂದರೆ ಆಕೆ ಸುಮಾರು 25 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದಳು. ಹಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮಹಿಳೆಯ ಒಂದು ಕಾಲು ತುಂಡಾಗಿತ್ತು. ಅದರ ನಂತರ ಅವಳು ನಡೆಯಲು ಸಾಧ್ಯವಾಗಲಿಲ್ಲ. ಇದರಿಂದ ತೀವ್ರ ಮನನೊಂದಿದ್ದ ಮಹಿಳೆಯು ಹಾಸಿಗೆ ಹಿಡಿದ್ದಳು. ಮಹಿಳೆ ಆತ್ಮಹತ್ಯೆಗೆ ಶರಣಾದ ವೇಳೆಯಲ್ಲಿ ಆಕೆಯ ಬುದ್ಧಿಮಾಂದ್ಯ ಮಗ ಹತ್ತಿರದಲ್ಲೇ ಇದ್ದನು. ಆ ಪುತ್ರನಿಗೆ ಸರಿಯಾಗಿ ಮಾತನಾಡಲು ಬರದ ಕಾರಣ ಈ ಘಟನೆಯನ್ನು ಯಾರಿಗೂ ಹೇಳಲೂ ಸಾಧ್ಯವಾಗಲಿಲ್ಲ. ಜನರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಮಹಿಳೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿ ಬೇರೆಯಾದರು ಇದ್ದಿದ್ದರೆ ಪ್ರಾಣ ಉಳಿಸಬಹುದಿತ್ತು: ಮಹಿಳೆ ಬಹಳ ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಳು ಎಂದು ಸಮೀಪದ ಜನರು ಹೇಳುತ್ತಾರೆ. ಆದ್ದರಿಂದ, ಅವರೇ ಇಂತಹ ನೋವಿನ ಹೆಜ್ಜೆಯನ್ನು ಖಾಸಗಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದರು. ಮನೆಯಲ್ಲಿ ಮಹಿಳೆಯನ್ನು ಬಿಟ್ಟು ಬೇರೆ ಯಾರಾದರೂ ಇದ್ದಿದ್ದರೆ, ಬಹುಶಃ ಆಕೆಯ ಪ್ರಾಣ ಉಳಿಯುತ್ತಿತ್ತು. ತನ್ನ ಆರೋಗ್ಯ ಸಮಸ್ಯೆಯನ್ನು ತಾಳಲಾರದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಪತಿ ಕೂಲಿ ಕೆಲಸ ಮಾಡುತ್ತಿದ್ದು, ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ಪಂಕಿ ಪೊಲೀಸ್ ಠಾಣೆಯ ಅಧಿಕಾರಿ ರವೀಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸಿವಿಲ್‌ ಕಂಟ್ರಾಕ್ಟರ್ ಅರೆಸ್ಟ್

ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಶರಣಾಗಿದ್ದ ಮಹಿಳೆ: ಮತ್ತೊಂದೆಡೆ, ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಜಿಲ್ಲೆಯ ಚನ್ನಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ಇಲ್ಲಿನ ಕೋಟೆ ನಿವಾಸಿ ಮಾಧುರಿ (28) ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಮಾಧುರಿ, ಕೆಲವರ ಹೆಸರನ್ನು ತಿಳಿಸಿದ್ದರು. ಪೊಲೀಸರ ವರ್ತನೆ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ​ ಕಾರ್ತಿಕ್ ರೆಡ್ಡಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದರು.

ಇತ್ತೀಚೆಗೆ ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದ 28 ವರ್ಷದ ಮಾಧುರಿ, ಚಿಕಿತ್ಸೆ ಫಲಿಸದೇ ಮಂಡ್ಯದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವಿಡಿಯೋ ಮಾಡಿ ಕೆಲವರ ಮೇಲೆ ಆರೋಪ ಮಾಡಿದ್ದರು. ಹಣದ ಒತ್ತಡ ಹಾಕಿದ್ದ ಕೆಲವರ ಹೆಸರುಗಳನ್ನು ಹೇಳಿದ್ದರು. ಈ ಬಗ್ಗೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂಬುದನ್ನು ಸಹ ವಿಡಿಯೋದಲ್ಲಿ ತಿಳಿಸಿದ್ದರು. ಮೃತ ಮಹಿಳೆಯ ಪತಿ ಪ್ರದೀಪ್ ಸಿಂಗ್​​ ಎಂಬುವರು ಈ ಬಗ್ಗೆ ದೂರು ನೀಡಿದ್ದರು. ಚನ್ನಪಟ್ಟಣ ಪುರ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿ ಎಂಬ ಮಹಿಳೆ ಸೇರಿ ನಾಲ್ವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿತ್ತು'' ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.