ETV Bharat / bharat

ಖಾಪ್ರಾ ಫಾರೆಸ್ಟ್ ಪೋಸ್ಟ್​ ಬಳಿ ಕೋತಿಗಳ ಮೃತದೇಹಗಳು ಪತ್ತೆ ಪ್ರಕರಣ: ಅರಣ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚನೆ... - ತನಿಖಾ ತಂಡ ರಚನೆ

ಉತ್ತರ ಪ್ರದೇಶದ ಬಹ್ರೈಚ್‌ನ ಮೋತಿಪುರ್ ಪ್ರದೇಶದಲ್ಲಿ 50 ಕೋತಿಗಳು ಸಾವನ್ನಪ್ಪಿರುವ ಪ್ರಕರಣವು ಅರಣ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಎಫ್‌ಒ ಮೋತಿಪುರ ಅರಣ್ಯ ವಲಯದ ಅರಣ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಿದ್ದಾರೆ.

Monkeys were killed and thrown in Bahraich
ಖಾಪ್ರಾ ಫಾರೆಸ್ಟ್ ಪೋಸ್ಟ್​ ಬಳಿ ಕೋತಿಗಳ ಮೃತದೇಹ ಪತ್ತೆ ಪ್ರಕರಣ: ಅರಣ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚನೆ...
author img

By ETV Bharat Karnataka Team

Published : Oct 6, 2023, 1:03 PM IST

ಬಹ್ರೈಚ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಅರಣ್ಯ ಪ್ರದೇಶದ ಖಾಪ್ರಾ ಫಾರೆಸ್ಟ್ ಪೋಸ್ಟ್ ಏರಿಯಾ ಬಳಿ ಸುಮಾರು 50 ಕೋತಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ಬಿಸಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಫ್‌ಒ, ''ಕೆಲವು ಕೋತಿಗಳ ಮೃತದೇಹಗಳು ಪತ್ತೆಯಾಗಿವೆ. ತನಿಖೆ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದ್ದಾರೆ.

ಜಿಲ್ಲೆಯ ನನ್ಪಾರ ಲಖಿಂಪುರ ರಸ್ತೆಯಲ್ಲಿ ಅರಣ್ಯ ಪ್ರದೇಶವಿದೆ. ಇಲ್ಲಿ, ನೈನಿಹಾ ಅರಣ್ಯ ಪ್ರದೇಶದ ಪಕ್ಕದ ಖಾಪ್ರಾ ಅರಣ್ಯ ಪೋಸ್ಟ್ ಪ್ರದೇಶದ ಬಳಿ ಮೃತಪಟ್ಟಿರುವ ಕೋತಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳದಲ್ಲಿ ವೈರಲ್ ಆಗುತ್ತಿವೆ. ಸುಮಾರು 50 ಕೋತಿಗಳು ಮೃತಪಟ್ಟಿರುವ ಸಾಧ್ಯತೆಯಿದೆ. ಆದರೆ, ಮೃತಪಟ್ಟಿರುವ ಕೋತಿಗಳ ಸಂಖ್ಯೆ ಕುರಿತಂತೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ದಾರಿಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅರಣ್ಯ ನಿರೀಕ್ಷಕರು ಹಾಗೂ ಅರಣ್ಯ ರಕ್ಷಕರು ಯಾವುದೇ ತನಿಖೆ ನಡೆಸದೇ ಕೋತಿಗಳ ಮೃತದೇಹಗಳನ್ನು ಹೂಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯಲ್ಲಿ ಹಲವು ಮಂಗಗಳ ಮೃತದೇಹಗಳು ಪತ್ತೆಯಾಗಿರುವುದು ಭೀತಿಯನ್ನುಂಟು ಮಾಡಿದೆ.

ಅರಣ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚನೆ: ಕತರ್ನಿಯಾಘಾಟ್‌ನ ಖಾಪ್ರಾ ಫಾರೆಸ್ಟ್ ಪೋಸ್ಟ್ ಪ್ರದೇಶದಲ್ಲಿ ಮಂಗಗಳನ್ನು ಕೊಂದು ಎಸೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಡಿಎಫ್‌ಒ ಆಕಾಶದೀಪ್ ವಾಧವನ್ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೋತಿಪುರ ಅರಣ್ಯ ವಲಯದ ಅರಣ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಲಾಗಿದೆ. ಇದರೊಂದಿಗೆ ವಿಶೇಷ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿ ಮತ್ತು ಡಾಕ್ ಸ್ಕ್ವೇರ್ ಸ್ಕ್ವಾಡ್‌ನಿಂದಲೂ ಸಹಾಯ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ, ಭಾರತೀಯ ಅರಣ್ಯ ಕಾಯ್ದೆಯಡಿ ಕ್ರಮ: ''ಶೀಘ್ರದಲ್ಲೇ ಪ್ರಕರಣವನ್ನು ಬಹಿರಂಗಪಡಿಸಿ ಆರೋಪಿಗಳನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ಅರಣ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ತಪ್ಪಿತಸ್ಥ ಅರಣ್ಯ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು'' ಎಂದು ಮಾಹಿತಿ ನೀಡಿದರು. ಆದರೆ, ಕೋತಿಗಳ ಮೃತದೇಹಗಳ ಸಂಖ್ಯೆಯನ್ನು ಡಿಎಫ್‌ಒ ಬಹಿರಂಗಪಡಿಸಿಲ್ಲ.

ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು: ಮತ್ತೊಂದೆಡೆ, ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಂಗಗಳು ಸತ್ತು ಬಿದ್ದಿದ್ದ ಪ್ರಕರಣ ಇದೇ ವರ್ಷ ಜುಲೈನಲ್ಲಿ ನಡೆದಿತ್ತು. ತೆರೆದ ವಾಟರ್ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಹೋಗಿ ಎರಡು ಮಂಗಗಳು ಸಾವನ್ನಪ್ಪಿದ್ದವು. ಟ್ಯಾಂಕ್ ಒಳಗೆ ಇಳಿದ ಮಂಗಗಳು, ಹೊರೆಗೆ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದವು.

ಇದನ್ನೂ ಓದಿ: ನದಿಯಲ್ಲಿ ತೇಲಿ ಬಂತು ಪೆಟ್ಟಿಗೆ: ಕುತೂಹಲದಿಂದ ತೆರೆದಾಗ ಫಿರಂಗಿ ಬ್ಲಾಸ್ಟ್.. ಬಾಲಕ ಸಾವು, ಐವರ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.