ETV Bharat / bharat

ಮೂರು ದಿನಗಳ ಹಿಂದೆ ಮದುವೆ.. ನವದಂಪತಿ ಸೇರಿ ಐವರನ್ನು ಕೊಡಲಿಯಿಂದ ಕೊಚ್ಚಿ ಆತ್ಮಹತ್ಯೆಗೆ ಶರಣಾದ ಹಂತಕ! - ನವದಂಪತಿ ಸೇರಿ ಐವರನ್ನು ಕೊಡಲಿಯಿಂದ ಕೊಚ್ಚಿ

ಉತ್ತರಪ್ರದೇಶದ ಮೈನ್‌ಪುರಿಯಲ್ಲಿ ಒಂದೇ ಮನೆಯಲ್ಲಿ ಆರು ಮಂದಿಯ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

murder of six person in mainpuri  mainpuri crime news  murder of six person  murder of six person sleeping in house  ಮೂರು ದಿನಗಳ ಹಿಂದೆ ಮದುವೆ  ಮಲಗಿದ್ದ ಆರು ಜನರನ್ನು ಕೊಂದು ಹಾಕಿದ ದುರುಳರು  ಒಂದೇ ಮನೆಯಲ್ಲಿ ಆರು ಮಂದಿಯ ಕೊಲೆ  ಆರು ಮಂದಿಯ ಕೊಲೆ ಪ್ರಕರಣ ಬೆಳಕಿಗೆ  ಭಯಾನಕರ ಘಟನೆಯೊಂದು ಬೆಳಕಿಗೆ  ಮನೆಯಲ್ಲಿ ಮಲಗಿದ್ದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ  ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಗ್ರಾಮ
ಮಲಗಿದ್ದ ಆರು ಜನರನ್ನು ಕೊಂದು ಹಾಕಿದ ದುರುಳರು!
author img

By

Published : Jun 24, 2023, 9:05 AM IST

Updated : Jun 24, 2023, 9:44 AM IST

ಮೈನ್‌ಪುರಿ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಭಯಾನಕರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಮಲಗಿದ್ದ ಐದು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇವರನ್ನೆಲ್ಲ ಹತ್ಯೆ ಮಾಡಿದ ಹಂತಕ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಗ್ರಾಮದಲ್ಲಿ ನಡೆದಿದೆ. ಇನ್ನು ಕೊಲೆಯಾದ ಮನೆಯಲ್ಲಿ ಮೂರು ದಿನಗಳ ಹಿಂದೆ ಮದುವೆ ಸಮಾರಂಭ ನಡೆದಿತ್ತು ಎಂದು ತಿಳಿದುಬಂದಿದೆ.

ಮಲಗಿದ್ದ ಕುಟುಂಬಸ್ಥರನ್ನು ಕೊಚ್ಚಿ ಹಾಕಿದ ದುರಳ: ಜಿಲ್ಲೆಯಲ್ಲಿ ಭೀಕರ ಕೊಲೆಗಳು ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಳಗಿನ ಜಾವ 4.30 ರಿಂದ ಐದು ಗಂಟೆಯ ನಡುವೆ ಮಲಗಿದ್ದ ಐವರನ್ನು ಕುಟುಂಬಸ್ಥನೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಶಿವವೀರ್​ ಯಾದವ್​ ಎಂದು ಗುರುತಿಸಲಾಗಿದೆ. ಕೊಲೆಯಾದವರು ನವದಂಪತಿಯಾದ ಸೋನು ಯಾದವ್​ (21) ಮತ್ತು ಸೋನಿ (20), ಸಹೋದರನಾದ ಭುಲ್ಲನ್ ಯಾದವ್ (25) ಮತ್ತು ಸೋದರ ಮಾವ ಸೌರಭ್ (23) ಹಾಗು ಸ್ನೇಹಿತನಾದ ದೀಪಕ್ (20) ಎಂದು ತಿಳಿದು ಬಂದಿದೆ. ಈ ಭಯಾನಕ ಘಟನೆ ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಅರ್ಸರಾ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?: ಗೋಕುಲಪುರ ಅರ್ಸರ ನಿವಾಸಿ ಸುಭಾಷ್​ ಯಾದವ್​ ಮಗನಾದ ಶಿವವೀರ್​ ಯಾದವ್​ ಅವರ ಸಹೋದರ ಸೋನು ಯಾದವ್​ ಅವರ ಮದುವೆ ಎರಡ್ಮೂರು ದಿನಗಳ ಹಿಂದೆ ಇಟವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಡೀ ಕುಟುಂಬ ನವದಂಪತಿಯೊಂದಿಗೆ ಶುಕ್ರವಾರದಂದು ಇಟವಾದಿಂದ ಆರ್ಸರ ಗ್ರಾಮಕ್ಕೆ ಮರಳಿತ್ತು. ಇದಾದ ಬಳಿಕ ಕುಟುಂಬಸ್ಥರು ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿದ್ದರು.

ಆದರೆ ಏನಾಯ್ತೋ ಏನೋ ತಿಳಿಯಲಿಲ್ಲ. ಇಂದು ಬೆಳಗಿನ ಜಾವ ಶಿವವೀರ್​ ಯಾದವ್ ಏಕಾಏಕಿ​ ತನ್ನ ಸಹೋದರ, ನವದಂಪತಿ, ಸೋದರ ಮಾವ, ಸ್ನೇಹಿತ ಸೇರಿದಂತೆ ಮಲಗಿದ್ದ ಇನ್ನಿತರರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ದಾಳಿ ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಶಿವವೀರ್​ ಪತ್ನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ರಕ್ತಸಿಕ್ತವಾಗಿದ್ದ ಮನೆಯನ್ನು ನೋಡಿ ಬೆಚ್ಚಿಬಿದ್ದಿದ್ದರು. ಬಳಿಕ ಗ್ರಾಮಸ್ಥರ ಸಹಾಯದಿಂದ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆ ನಡೆದಿದ್ದು, ಪೊಲೀಸರು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.

ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಶಿವವೀರ್ ಸಿಂಗ್ ತನ್ನ ಇಬ್ಬರು ಸಹೋದರರು, ಸೋದರ ಮಾವ, ಹೊಸದಾಗಿ ಮದುವೆಯಾದ ಸಹೋದರನ ಹೆಂಡತಿ ಮತ್ತು ಸ್ನೇಹಿತನನ್ನು ಕೊಂದು ಹಾಕಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೊಲೆಯಾದ ಸೌರಭ್ ಚಂದಾ ಹವಿಲಿಯಾ ಪೊಲೀಸ್ ಠಾಣೆಯ ಕಿಶ್ನಿ ನಿವಾಸಿ ಮತ್ತು ಸ್ನೇಹಿತ ದೀಪಕ್ ಫಿರೋಜಾಬಾದ್ ನಿವಾಸಿ ಎಂದು ಎಸ್ಪಿ ತಿಳಿಸಿದ್ದಾರೆ.

ಶಿವವೀರ್​ ಪತ್ನಿ ಆಸ್ಪತ್ರೆಗೆ ದಾಖಲು: ಶಿವವೀರ್ ಅವರ ಪತ್ನಿ ಡಾಲಿ (24) ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಡಾಲಿಯ ಕೈಗೆ ಗಾಯವಾಗಿದೆ. ಡಾಲಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯು ತನ್ನ ತಾಯಿಯ ಚಿಕ್ಕಮ್ಮ ಸುಷ್ಮಾ ಅವರ ಪತ್ನಿ ವಿನೋದ್ ಅವರ ಮೇಲೆಯೂ ದಾಳಿ ನಡೆಸಿದ್ದಾನೆ. ಅವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಷ್ಮಾ ನಾಗ್ಲಾ ರಾಮಲಾಲ್ ಠಾಣಾ ಭರ್ತನ ಇಟಾವಾ ನಿವಾಸಿ. ಶಿವವೀರ್ ಈ ಘಟನೆಯನ್ನು ಏಕೆ ನಡೆಸಿದ್ದಾನೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಪಡೆ, ಪ್ರಭಾರಿ ಇನ್ಸ್‌ಪೆಕ್ಟರ್, ಕಣ್ಗಾವಲು ತಂಡ ಮತ್ತು ಶ್ವಾನ ದಳದವರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಎಸ್‌ಪಿ ಹೇಳಿದರು.

ಓದಿ: ಹುಣಸೂರಿನ ಶಾಮಿಲ್​ನಲ್ಲಿ ಜೋಡಿ ಕೊಲೆ ಪ್ರಕರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated : Jun 24, 2023, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.