ಪಟನಾ (ಬಿಹಾರ) : ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದರಿಂದ ಕಳ್ಳಭಟ್ಟಿ ಸಾರಾಯಿ ಎಗ್ಗಿಲ್ಲದೇ ಮಾರಾಟವಾಗುತ್ತಿದ್ದು, ಹಲವು ಪ್ರಾಣಗಳನ್ನು ಆಹುತಿ ಪಡೆದಿರುವ ಆಪಾದನೆ ಇದೆ. ಇದೀಗ 6 ಮಂದಿ ಕಲುಷಿತ ಮದ್ಯ ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲವಾದರೂ, ಸಾವಿಗೆ ವಿಷಪೂರಿತ ಮದ್ಯವೇ ಕಾರಣ ಎಂದು ಅಲ್ಲಿನ ಜನರ ಆರೋಪವಾಗಿದೆ.
ಬಿಹಾರದ ಸೀತಾಮಂಡಿ ಜಿಲ್ಲೆಯಲ್ಲಿ ನವೆಂಬರ್ 16 ರಂದು ಆರು ಮಂದಿ ಒಬ್ಬರ ಬಳಿಕ ಒಬ್ಬರು ಸಾವಿಗೀಡಾಗಿದ್ದಾರೆ. ಮೃತರೆಲ್ಲರೂ ಮಹುವಾಯಿನ್ ಎಂಬಲ್ಲಿ ಮದ್ಯ ಸೇವಿಸಲು ಒಟ್ಟಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಎಲ್ಲರ ಆರೋಗ್ಯ ಹದಗೆಟ್ಟಿದ್ದು, ಎಲ್ಲರೂ ಒಬ್ಬೊಬ್ಬರಾಗಿ ಅಸುನೀಗಿದ್ದಾರೆ. ನಾಲ್ವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಸಂಬಂಧಿಕರು ಮೃತ ದೇಹಗಳನ್ನು ಅಂತ್ಯಕ್ರಿಯೆ ಮಾಡಿದ್ದಾರೆ.
ಛತ್ ಪೂಜೆಗೂ ಮೊದಲು ನಡೆದ ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹಬ್ಬವಿದ್ದರೂ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ವಿಷಪೂರಿತ ಮದ್ಯ ಸೇವನೆಯೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಹಬ್ಬದ ವೇಳೆ ಇಷ್ಟೊಂದು ಜನ ಏಕಕಾಲಕ್ಕೆ ಸಾವನ್ನಪ್ಪಿದ್ದು, ತಲ್ಲಣ ಉಂಟು ಮೂಡಿದೆ. ಕುಟುಂಬದ ಸದಸ್ಯರು ಕೂಡ ಇದಕ್ಕೆ ನಿಖರ ಕಾರಣ ತಿಳಿಸುತ್ತಿಲ್ಲ. ಪೊಲೀಸ್ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಪೊಲೀಸ್ ಅಧಿಕಾರಿ ಹೇಳೋದೇನು?: ಸೀತಾಮಂಡಿ ಎಸ್ಪಿ ಮನೋಜ್ ಕುಮಾರ್ ತಿವಾರಿ ಪ್ರಕಾರ, ಓರ್ವ ಮೃತ ವ್ಯಕ್ತಿಯು ಮದ್ಯಪಾನದಿಂದ ಸಾವನ್ನಪ್ಪಿದ್ದಾನೆ. ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನಿಬ್ಬರು ಮೃತರ ಸಂಬಂಧಿಕರು ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಸಾವಿನ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿ ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಗುರುವಾರ ಸಂಜೆ ಮೃತರೆಲ್ಲರೂ ಮಹುವಾಯಿನ್‌ನಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಪೂರಿತ ಮದ್ಯ ಸೇವನೆಯೇ ಇದಕ್ಕೆ ಕಾರಣ ಎಂದು ವಿಧಿತವಾಗಿದೆ. ಬಳಿಕ ಎಲ್ಲರ ಆರೋಗ್ಯ ಹದಗೆಟ್ಟು, ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಾಮ್ ಬಾಬು ರೈ, ಸೋಲ್ಮನ್ ಟೋಲ್‌ನ ವಿಕ್ರಮ್ ಕುಮಾರ್, ಸಂತೋಷ್ ಮಹತೋ ಮತ್ತು ನರಹರ್ ಗ್ರಾಮದ ರೋಷನ್ ಕುಮಾರ್, ನರಹ ಕಾಲದ ಅವಧೇಶ್ ಯಾದವ್, ಮಹೇಶ್ ಯಾದವ್ ಎಂದು ಗುರುತಿಸಲಾಗಿದೆ ಎಂದರು.
ಇದನ್ನೂ ಓದಿ: ಉಚಿತ ಧಾನ್ಯ ವಿತರಣೆ ಯೋಜನೆ ಮುಂದಿನ 5 ವರ್ಷಗಳ ವರೆಗೆ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ