ETV Bharat / bharat

ಬಸ್​ ನಿಲ್ಲಿಸಿ ಪ್ರಾರ್ಥನೆಗೆ ಅವಕಾಶ ನೀಡಿದ್ದ ಆರೋಪ.. ಚರ್ಚಾಸ್ಪದವಾಯ್ತು ವಜಾಗೊಂಡ ಗುತ್ತಿಗೆ ಆಪರೇಟರ್ ಸಾವಿನ ವಿವಾದ - ಕೆಲಸದಿಂದ ವಜಾಗೊಳಿಸಿದ ನಂತರ ಮೋಹಿತ್ ಒತ್ತಡಕ್ಕೆ ಒಳಗಾಗಿ

ಇಬ್ಬರು ವ್ಯಕ್ತಿಗಳಿಗೆ ಬಸ್​ ನಿಲ್ಲಿಸಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದ ಮೋಹಿತ್​ ಸಾವಿನ ಸುದ್ದಿ ಈಗ ಚರ್ಚೆಗೀಡಾಗಿದೆ. ಅಮಾನತು ಮಾಡಿದ್ದರಿಂದ ನನ್ನ ಪತಿ ತೀವ್ರ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೋಹಿತ್​ ಪತ್ನಿ ಆರೋಪಿಸಿದ್ದಾರೆ.

crime news Mainpuri  Suspended contract conductor commited suicide  Suspended contract conductor case manpuri  ಬಸ್​ ನಿಲ್ಲಿಸಿ ಪ್ರಾರ್ಥನೆಗೆ ಅವಕಾಶ ನೀಡಿದ್ದ ಆರೋಪ  ಜಾಗೊಂಡ ಗುತ್ತಿಗೆ ಆಪರೇಟರ್ ಮೋಹಿತ್ ಸಾವಿನ ವಿವಾದ  ವ್ಯಕ್ತಿಗಳಿಗೆ ಬಸ್​ ನಿಲ್ಲಿಸಿ ಪ್ರಾರ್ಥನೆಗೆ ಅವಕಾಶ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೋಹಿತ್​ ಪತ್ನಿ ಆರೋಪ  ಉಷ್ಮಾ ರೈಲ್ವೇ ಗೇಟ್  ಗುತ್ತಿಗೆ ಆಪರೇಟರ್ ಮೋಹಿತ್ ಆತ್ಮಹತ್ಯೆ  ಕೆಲಸದಿಂದ ವಜಾಗೊಳಿಸಿದ ನಂತರ ಮೋಹಿತ್ ಒತ್ತಡಕ್ಕೆ ಒಳಗಾಗಿ  ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಖುಶಾಲಿ ಗ್ರಾಮ
ಬಸ್​ ನಿಲ್ಲಿಸಿ ಪ್ರಾರ್ಥನೆಗೆ ಅವಕಾಶ ನೀಡಿದ್ದ ಆರೋಪ
author img

By ETV Bharat Karnataka Team

Published : Aug 30, 2023, 12:34 PM IST

ಮೈನ್‌ಪುರಿ(ಉತ್ತರಪ್ರದೇಶ): ಯುಪಿ ರೋಡ್‌ ವೇಸ್‌ನಿಂದ ವಜಾಗೊಂಡ ಗುತ್ತಿಗೆ ಆಪರೇಟರ್ ಮೋಹಿತ್ ಸಾವಿನ ವಿವಾದ ಹೆಚ್ಚಾಗುತ್ತಿದೆ. ಸೋಮವಾರ ಗುರು ಪೊಲೀಸ್ ಠಾಣೆ ವ್ಯಾಪ್ತಿಯ ಉಷ್ಮಾ ರೈಲ್ವೇ ಗೇಟ್ ಎದುರು ಗುತ್ತಿಗೆ ಆಪರೇಟರ್ ಮೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಜಿಆರ್‌ಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿತ್ತು. ಕೆಲಸದಿಂದ ವಜಾಗೊಳಿಸಿದ ನಂತರ ಮೋಹಿತ್ ಒತ್ತಡಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಮೋಹಿತ್ ಪತ್ನಿ ಆರೋಪಿಸಿದ್ದಾರೆ.

ಮಾಹಿತಿ ಪ್ರಕಾರ, ನಾಗ್ಲಾ ಖುಶಾಲಿ ಗ್ರಾಮದ ನಿವಾಸಿ ರಾಜೇಂದ್ರ ಯಾದವ್ ಅವರ ಪುತ್ರ ಮೋಹಿತ್ ಯಾದವ್ (36) ಅವರು ಖುಶಾಲಿ ಮತ್ತು ಪಟ್ಟಣ ಘಿರೋರ್ ಗ್ರಾಮದಲ್ಲಿ ಮನೆ ಹೊಂದಿದ್ದಾರೆ. ಬರೇಲಿ ಡಿಪೋದಲ್ಲಿ ಕಳೆದ 8 ವರ್ಷಗಳಿಂದ ಗುತ್ತಿಗೆ ಆಪರೇಟರ್ ಆಗಿದ್ದರು. ಜೂನ್ 3 ರಂದು ಮೋಹಿತ್ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬರೇಲಿ-ದೆಹಲಿ ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿ ಇಬ್ಬರು ಪ್ರಯಾಣಿಕರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿದ ಆರೋಪ ಅವರ ಮೇಲಿದೆ. ಇದಾದ ಬಳಿಕ ರಸ್ತೆ ನಿರ್ವಹಣಾ ಅಧಿಕಾರಿಗಳು ಚಾಲಕನ ಮೇಲೆ ಕ್ರಮ ಕೈಗೊಂಡು ಕೆಲಸದಿಂದ ಅಮಾನತುಗೊಳಿಸಿದ್ದರು.

ತೀವ್ರ ಒತ್ತಡಕ್ಕೊಳಗಾಗಿದ್ದ ಮೋಹಿತ್ ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಹಳ್ಳಿಯಲ್ಲಿ ಉಳಿದುಕೊಂಡಿದ್ದರು. ಸೋಮಾವಾರ ಗ್ರಾಮದ ಮನೆಯಿಂದ ಪಟ್ಟಣದ ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಕೊಸ್ಮಾ ರೈಲ್ವೆ ಗೇಟ್ ಬಳಿ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹಿತ್ ಯಾದವ್ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೋಹಿತ್ ಪತ್ನಿ ರಿಂಕೆ ಅವರೊಂದಿಗೆ ಈಟಿವಿ ಭಾರತ್ ನಡೆಸಿದ ವಿಶೇಷ ಸಂವಾದದಲ್ಲಿ, 5 ವರ್ಷಗಳ ಹಿಂದೆ ಮೋಹಿತ್‌ನನ್ನು ಮದುವೆಯಾಗಿದ್ದೆ. ಮದುವೆಯಾದಾಗಿನಿಂದ ನಾವು ಸಂತೋಷದಿಂದ ಇದ್ದೆವು. ಆದರೆ ಕೆಲಸದಿಂದ ತೆಗೆದು ಹಾಕಿದ್ದರಿಂದ ನನ್ನ ಪತಿ ಮೋಹಿತ್ ದುಃಖದ ಮನಸ್ಥಿತಿಯಲ್ಲಿದ್ದರು. ಅವರು ಒತ್ತಡಕ್ಕೆ ಒಳಗಾಗಿದ್ದರು. ಭಾನುವಾರ ಸಂಜೆ ಮನೆಯಿಂದ ಹೊರಗೆ ಹೋಗಿದ್ದ ಅವರು ಮತ್ತೆ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಅವರ ಸಾವಿನ ಸುದ್ದಿ ನಮ್ಮ ಮನೆ ತಲುಪಿತ್ತು. ನಮಗೆ 4 ವರ್ಷದ ಮಗನಿದ್ದಾನೆ. ಕೆಲಸ ಕಳೆದುಕೊಂಡಿದ್ದಕ್ಕೆ ಪ್ರಾಣ ಕೊಟ್ಟಿದ್ದಾರೆ ಎಂದು ಮೋಹಿತ್​ ಪತ್ನಿ ರಿಂಕಿ ಅಳಲು ತೋಡಿಕೊಂಡಿದ್ದಾರೆ.

ಮೋಹಿತ್ ತಂದೆ ರಾಜೇಂದ್ರ ಯಾದವ್ ಮಾತನಾಡಿ, 'ನಮ್ಮ ಮನೆಯ ದೈನಂದಿನ ಸ್ಥಿತಿ ತುಂಬಾ ಕೆಟ್ಟದಾಗಿದೆ. ನನಗೆ ಒಬ್ಬನೇ ಮಗನಿದ್ದನು. ಈಗ ನನ್ನ ಮಗನನ್ನೂ ನನ್ನಿಂದ ಕಿತ್ತುಕೊಂಡಿದ್ದಾರೆ. ಕೆಲಸದಿಂದ ಅಮಾನತುಗೊಳಿಸಿದ ಮೇಲೆ ತುಂಬಾ ಬೇಸರದಲ್ಲಿದ್ದನು ಎಂದು ಹೇಳಿದರು.

ಓದಿ: ಬಕ್ರೀದ್: ಬದರಿನಾಥ್​ ಧಾಮದ ಬದಲಿಗೆ ಈ ಬಾರಿ ಜೋಶಿಮಠದಲ್ಲಿ ನಮಾಜ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.