ETV Bharat / bharat

50 ಕೋಟಿ ವಕ್ಫ್ ಆಸ್ತಿ ಕಬಳಿಕೆ ಆರೋಪ: ಅತೀಕ್ ಸಹೋದರ ಅಶ್ರಫ್ ಪತ್ನಿ ಸೇರಿ 6 ಆರೋಪಿಗಳಿಗೆ ನೋಟಿಸ್

ಪ್ರಯಾಗ್‌ರಾಜ್‌ನಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ಆರೋಪದ ಹಿನ್ನೆಲೆ ಭೂಗತ ಪಾತಕಿ ಅತೀಕ್ ಸಹೋದರ ಅಶ್ರಫ್ ಸೇರಿದಂತೆ ಆರು ಮಂದಿ ಮನೆಗಳಿಗೆ ನೋಟಿಸ್​ ಅಂಟಿಸಲಾಗಿದೆ. ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Rs 50 crore Waqf property has been grabbed
50 ಕೋಟಿ ವಕ್ಫ್ ಆಸ್ತಿ ಕಬಳಿಕೆ ಆರೋಪ: ಅತೀಕ್ ಸಹೋದರ ಅಶ್ರಫ್ ಪತ್ನಿ ಸೇರಿ 6 ಆರೋಪಿಗಳಿಗೆ ನೋಟಿಸ್
author img

By ETV Bharat Karnataka Team

Published : Dec 21, 2023, 8:04 AM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಸಲ್ಲಾಪುರ್ ಪ್ರದೇಶದಲ್ಲಿ ಭೂಗತ ಪಾತಕಿ ಅತೀಕ್ ಸಹೋದರ ಅಶ್ರಫ್ ಪತ್ನಿ ಜೈನಾಬ್ ಸೇರಿದಂತೆ ಆರು ಮಂದಿ ಸೇರಿ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಕ್ಫ್ ಆಸ್ತಿಯನ್ನು ದೋಚಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಆರೋಪಿಗಳು ಹೇಳಿಕೆ ದಾಖಲಿಸಿಕೊಳ್ಳಲು ಬರುತ್ತಿಲ್ಲ. ಹೀಗಾಗಿ ಎಲ್ಲ ಆರೋಪಿಗಳ ಮನೆಗೆ ಪೊಲೀಸರು ನೋಟಿಸ್‌ ಅಂಟಿಸಿದ್ದಾರೆ. ಇಷ್ಟಾದರೂ ಆರೋಪಿಗಳು ಬರದಿದ್ದರೆ ಅವರ ವಿರುದ್ಧ ನ್ಯಾಯಾಲಯದಿಂದ ಎನ್‌ಬಿಡಬ್ಲ್ಯೂ (ಜಾಮೀನು ರಹಿತ ಬಂಧನದ ಆದೇಶ) ಜಾರಿ ಮಾಡಲಾಗುವುದು.

ಕೋಟ್ಯಂತರ ಮೌಲ್ಯದ ವಕ್ಫ್ ಭೂಮಿ ಕಬಳಿಕೆ: ಪ್ರಯಾಗರಾಜ್ ನಗರದಿಂದ ದೂರವಿರುವ ಪುರಮುಫ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಲ್ಲಾಪುರ್‌ನಲ್ಲಿರುವ ಭೂಗತ ಪಾತಕಿ ಅತೀಕ್ ಅಹ್ಮದ್‌ನ ಕಿರಿಯ ಸಹೋದರ ಖಾಲಿದ್ ಅಜೀಮ್ ಅಲಿಯಾಸ್ ಅಶ್ರಫ್ ಅವರ ಪತ್ನಿ ಜೈನಾಬ್ ಫಾತಿಮಾ, ಮುತವಲ್ಲಿ ಮತ್ತು ಅವರ ಪತ್ನಿಯೊಂದಿಗೆ ಶಾಮೀಲಾಗಿ ವಕ್ಫ್ ಬೋರ್ಡ್‌ನ ಹೆಚ್ಚಿನ ಮೌಲ್ಯದ ಆಸ್ತಿ ಕಬಳಿಸಿದ್ದಾರೆ. 50 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಆಕ್ರಮಿಸಿಕೊಂಡಿದ್ದಾರೆ. ಕಳೆದ ತಿಂಗಳು ಸುನ್ನಿ ವಕ್ಫ್ ಆಸ್ತಿ ಕಬಳಿಸಿದ ಮಾಬುದ್ ಅಶ್ರಫ್ ಪತ್ನಿ ಜೈನಾಬ್ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಾಬುದ್ ಅವರು, ಜೈನಾಬ್ ಹಾಗೂ ಆಕೆಯ ಸಹೋದರರಾದ ಸದ್ದಾಂ ಮತ್ತು ಜೈದ್ ಮತ್ತು ಮುತವಲ್ಲಿ ಮೊಹಮ್ಮದ್ ಆಸಿಯಂ, ಅವರ ಪತ್ನಿ ಜಿನಂತ್ ಹಾಗೂ ಸಿವಲಿ ಪ್ರಧಾನ್ ಮತ್ತು ತಾರಿಕ್ ವಿರುದ್ಧ ಪುರಮುಫ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಫಿಯಾಗೆ ಭೂಮಿ ಹಸ್ತಾಂತರಿಸಿದ ಆರೋಪಿಗಳು: ಸುನ್ನಿ ವಕ್ಫ್ ಮಂಡಳಿಯು ಸಲ್ಲಾಪುರದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ ಹೊಂದಿದೆ ಎಂದು ಸುನ್ನಿ ವಕ್ಫ್ ಮಂಡಳಿಯ ಜಮೀನಿನ ಉಸ್ತುವಾರಿ ಮಾಬುದ್ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಮುತವಲ್ಲಿ ಮೊಹಮ್ಮದ್ ಆಸಿಯಂ, ಅವರ ಪತ್ನಿ ಜಿನ್ನತ್ ಅಶ್ರಫ್ ಅವರ ಪತ್ನಿ ಜೈನಾಬ್ ಮತ್ತು ಅವರ ಸಹೋದರರು ಈ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದಕ್ಕೆ ಇತರರೂ ಬೆಂಬಲ ನೀಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಅಶ್ರಫ್‌ನ ಸೋದರಮಾವ ಸದ್ದಾಂ ಜೈಲಿನಲ್ಲಿದ್ದಾನೆ. ಆದರೆ, ಅಶ್ರಫ್ ಪತ್ನಿ ಜೈನಾಬ್ ಮಾರ್ಚ್​ನಿಂದ ತಲೆಮರೆಸಿಕೊಂಡಿದ್ದಾರೆ. ಆಕೆ 10 ತಿಂಗಳಿನಿಂದ ಪೊಲೀಸರನ್ನು ತಪ್ಪಿಸಿ ಓಡಾಡುತ್ತಿದ್ದಾಳೆ. ಆರೋಪಿಗಳು ಜಮೀನು ಮಾರಾಟ ಮಾಡಲು ಬಯಸಿದ್ದಾರೆ. ಮುತವಲ್ಲಿ ಮತ್ತು ಅವರ ಪತ್ನಿ ಜಮೀನನ್ನು ಮಾಫಿಯಾಗೆ ಒಪ್ಪಿಸಿರುವ ಆರೋಪ ಕೇಳಿ ಬಂದಿದೆ. ಪ್ರತಿಭಟನೆ ನಡೆಸಿದವರನ್ನು ಹೆದರಿಸಿ ಬಾಯಿ ಮುಚ್ಚಿಸಲಾಗಿದೆ.

ಪೊಲೀಸ್ ತನಿಖೆಯಿಂದ ಆರೋಪ ಸಾಬೀತು: ವಕ್ಫ್ ಭೂಮಿ ಕಬಳಿಸಲು ಪ್ಲಾನ್‌ ಮಾಡಲಾಗಿದೆ ಎಂದು ಮಂಡಳಿಯ ಉಸ್ತುವಾರಿ ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆಯೂ ಈ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲಾಗಿತ್ತು. ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಕ್ಫ್ ಬೋರ್ಡ್‌ನ ಆಸ್ತಿ ಪಾಲಕರ ದೂರಿನ ಮೇರೆಗೆ ಮೇ ತಿಂಗಳಿನಲ್ಲಿ ಈ ಕುರಿತು ತನಿಖೆ ಆರಂಭಿಸಿದಾಗ ಆರೋಪ ನಿಜ ಎಂದು ತಿಳಿದು ಬಂದಿದೆ.

ಮೊಹಮ್ಮದ್ ಮಾಬುದ್ ಅವರ ದೂರಿನ ಮೇರೆಗೆ ಪ್ರಯಾಗರಾಜ್ ಪೊಲೀಸರು ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಮ್ ಅಲಿಯಾಸ್ ಅಶ್ರಫ್ ಅವರ ಪತ್ನಿ ಜೈನಾಬ್ ಫಾತಿಮಾ, ಅವರ ಸಹೋದರರಾದ ಜೈದ್, ಸದ್ದಾಂ, ಸಿವಾಲಿ, ತಾರಿಕ್ ಮತ್ತು ಮುತವಲ್ಲಿ ಮೊಹಮ್ಮದ್ ಆಸಿಯಂ ಮತ್ತು ಅವರ ಪತ್ನಿ ಜಿನಂತ್ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಬಯಸಿದ್ದು, ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಅವರ ಮನೆಗಳಿಗೆ ನೋಟಿಸ್ ಅಂಟಿಸಿದ್ದಾರೆ. ಈಗಲಾದರೂ ಹೇಳಿಕೆ ದಾಖಲಿಸಿಕೊಳ್ಳಲು ಬಾರದೇ ಇದ್ದಲ್ಲಿ ಅವರ ವಿರುದ್ಧ ಪೊಲೀಸರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್​ ಹೊರಡಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಸಭಾಪತಿಯ ಅಣಕ: ರಾಷ್ಟ್ರಪತಿ ದಿಗ್ಭ್ರಮೆ, 20 ವರ್ಷದಿಂದ ಅವಮಾನ ಅನುಭವಿಸಿದ್ದೇನೆ ಎಂದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.