ETV Bharat / bharat

ಕಿರುಕುಳದ ವಿರುದ್ಧ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯನ್ನೇ ರೈಲಿನ ಮುಂದೆ ಎಸೆದ ಹುಡುಗರ ಗುಂಪು: ಇನ್​ಸ್ಪೆಕ್ಟರ್​, ಕಾನ್ಸ್​ಟೇಬಲ್​​​​ ಅಮಾನತು - ಪ್ರಮುಖ ಆರೋಪಿ ಹಾಗೂ ಆತನ ತಂದೆ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಕಿರುಕುಳದ ವಿರುದ್ಧ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗರು ರೈಲಿನ ಮುಂದೆ ಎಸೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್​ಸ್ಪೆಕ್ಟರ್​, ಕಾನ್ಸ್​​ಟೇಬಲ್​​​​ ಅಮಾನತು ಮಾಡಲಾಗಿದೆ. ಜೊತೆಗೆ ಪ್ರಮುಖ ಆರೋಪಿ ಹಾಗೂ ಆತನ ತಂದೆಯನ್ನು ಬಂಧಿಸಲಾಗಿದೆ.

Bareilly crime news
ಕಿರುಕುಳದ ವಿರುದ್ಧ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯನ್ನು ರೈಲಿನ ಮುಂದೆ ಎಸೆದ ಹುಡುಗರ ಗುಂಪು: ಇನ್​ಸ್ಪೆಕ್ಟರ್​, ಕಾನ್‌ಸ್ಟೆಬಲ್ ಅಮಾನತು
author img

By ETV Bharat Karnataka Team

Published : Oct 11, 2023, 1:02 PM IST

ಬರೇಲಿ (ಉತ್ತರ ಪ್ರದೇಶ): ಬರೇಲಿಯಲ್ಲಿ ನಡೆದ ಕಿರುಕುಳದ ವಿರುದ್ಧದ ವಿದ್ಯಾರ್ಥಿನಿಯೊಬ್ಬಳು ಪ್ರತಿಭಟಿಸಿದ್ದಳು. ಹುಡುಗರು ಚುಡಾಯಿಸುವುದನ್ನು ಹುಡುಗಿಯೊಬ್ಬಳು ವಿರೋಧಿಸಿದ್ದಳು. ಈ ವೇಳೆ ಆಕ್ರೋಶಗೊಂಡ ಹುಡುಗರು ವಿದ್ಯಾರ್ಥಿನಿಯನ್ನು ರೈಲಿನ ಮುಂದೆ ಎಸೆದಿದ್ದಾರೆ. ಚಲಿಸುತ್ತಿದ್ದ ರೈಲಿಗೆ ವಿದ್ಯಾರ್ಥಿನಿ ಸಿಲುಕಿದ್ದ ಪರಿಣಾಮ, ಆಕೆಯ ಒಂದು ಕೈ ಹಾಗೂ ಎರಡೂ ಕಾಲುಗಳು ತುಂಡಾಗಿವೆ. ಮಾಹಿತಿ ತಿಳಿದ ಪೊಲೀಸರು ಆಗಮಿಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲವು ಮೂಳೆಗಳು ಮುರಿದು ಹೋಗಿರುವ ಕಾರಣ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ.

ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿ ಕೋಚಿಂಗ್ ಇನ್​ಸ್ಟಿಟ್ಯೂಟ್​ನಲ್ಲಿ ಅಧ್ಯಯನ ಮಾಡಲು ಹೋಗುತ್ತಿದ್ದಳು. ದಾರಿಯಲ್ಲಿ ಹೋಗುತ್ತಿದ್ದ ಹುಡುಗನೊಬ್ಬ ಈ ವಿದ್ಯಾರ್ಥಿನಿಗೆ ಆಗಾಗ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈತನು ಹಲವು ಬಾರಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಚುಡಾಯಿಸುವಿಕೆಯಿಂದ ಬೇಸತ್ತ ವಿದ್ಯಾರ್ಥಿನಿ ಮನೆಯವರಿಗೂ ಕೂಡ ವಿಷಯ ತಿಳಿಸಿದ್ದಳು. ಈ ಬಗ್ಗೆ ಕುಟುಂಬಸ್ಥರು, ಆರೋಪಿಯ ಸಂಬಂಧಿಕರಿಗೆ ದೂರು ನೀಡಿದ್ದರು.

ವಿದ್ಯಾರ್ಥಿನಿ ಕೋಚಿಂಗ್‌ಗೆ ಹೋಗಿದ್ದ ವೇಳೆ ಘಟನೆ: ಮಂಗಳವಾರ ವಿದ್ಯಾರ್ಥಿನಿ ಕೋಚಿಂಗ್‌ಗೆ ತೆರಳಿದ್ದಳು ಎನ್ನಲಾಗಿದೆ. ಇದಾದ ಬಳಿಕ ರೈಲ್ವೆ ಕ್ರಾಸಿಂಗ್ ಬಳಿ ಆಕೆ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವಳ ಒಂದು ಕೈ ಮತ್ತು ಎರಡೂ ಕಾಲುಗಳನ್ನು ಕಟ್​ ಆಗಿದ್ದವು. ಹುಡುಗರ ಗುಂಪು ತನ್ನನ್ನು ರೈಲಿನ ಮುಂದೆ ಎಸೆದು ಕೊಲ್ಲಲು ಯತ್ನಿಸಿದ್ದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆರೋಪಿಗಳು ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದರು ಎಂದು ಹುಡುಗಿಯ ಕುಟುಂಬಸ್ಥರು ತಿಳಿಸಿದ್ದಾರೆ.

ಎಸ್‌ಎಸ್‌ಪಿ ಸುಶೀಲ್ ಚಂದ್ರಭಾನ್ ಹೇಳಿದ್ದೇನು?: ''ಪ್ರಮುಖ ಆರೋಪಿ ಹಾಗೂ ಆತನ ತಂದೆಯನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯವಹಿಸಿದ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಹಾಗೂ ಕಾನ್ಸ್​​ಟೇಬಲ್​​​ ಅವರನ್ನು ಅಮಾನತುಗೊಳಿಸಲಾಗಿದೆ. ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ'' ಎಂದು ಎಸ್‌ಎಸ್‌ಪಿ ಸುಶೀಲ್ ಚಂದ್ರಭಾನ್ ತಿಳಿಸಿದರು.

ಸಂತ್ರಸ್ತೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು: ಸಿಎಂ ಯೋಗಿ ಅವರು ಘಟನೆಯ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಾಯಗೊಂಡ ವಿದ್ಯಾರ್ಥಿಯನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸಂತ್ರಸ್ತೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಡಿಎಂ ರವೀಂದ್ರ ಕುಮಾರ್ ಹೇಳಿದರು.

ಇದನ್ನೂ ಓದಿ: ಪರ್ವತದ ಮೇಲೆ ನಿಂತು ಸೆಲ್ಫಿ.. ಕಾಲುಜಾರಿ 60 ಅಡಿ ಕಂದಕಕ್ಕೆ ಬಿದ್ದ ವಿದ್ಯಾರ್ಥಿನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.