ETV Bharat / bharat

ಆಟವಾಡಲು ಮನೆಯಿಂದ ಹೊರಹೋದ ಬಾಲಕಿ ಶವವಾಗಿ ಪತ್ತೆ.. ಅತ್ಯಾಚಾರ - ಕೊಲೆ ಶಂಕೆ - ಮೃತದೇಹವನ್ನು ನಾಯಿಗಳು ತಿನ್ನುತ್ತಿದ್ದವು

ಉತ್ತರ ಪ್ರದೇಶದಲ್ಲಿ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ. ಆಟವಾಡಲು ಮನೆಯಿಂದ ಹೊರಹೋದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡುವ ಶಂಕೆ ವ್ಯಕ್ತವಾಗಿದೆ.

crime-news-girl-murdered-in-farrukhabad-and-body-thrown-in-field-fear-of-rape
ಆಟವಾಡಲು ಮನೆಯಿಂದ ಹೊರಹೋದ ಬಾಲಕಿ ಶವವಾಗಿ ಪತ್ತೆ... ಅತ್ಯಾಚಾರ - ಕೊಲೆ ಶಂಕೆ
author img

By ETV Bharat Karnataka Team

Published : Sep 13, 2023, 7:48 PM IST

ಫರೂಕಾಬಾದ್ (ಉತ್ತರ ಪ್ರದೇಶ): ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಕಾಣೆಯಾದ ನಾಲ್ಕು ವರ್ಷದ ಬಾಲಕಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮೃತದೇಹವನ್ನು ನಾಯಿಗಳು ಕಚ್ಚಿ ತಿಂದಿವೆ. ಅಲ್ಲದೇ, ಈಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಎಸೆದಿರುವ ಆರೋಪ ಕೂಡ ಕೇಳಿ ಬಂದಿದೆ.

ಇಲ್ಲಿನ ಕಂಪಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರ ಬೆಚ್ಚಿಬಿದ್ದಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಸದ್ಯ ಮಾಹಿತಿ ಪಡೆದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್​​ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಾಲಕಿ ಸಾವಿನ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೆಲಸದ ಆಮೀಷವೊಡ್ಡಿ ಚಲಿಸುತ್ತಿದ್ದ ಕಾರಿ​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಅಂದರ್​

ಪೊಲೀಸರ ಮಾಹಿತಿ ಪ್ರಕಾರ, ಗ್ರಾಮಸ್ಥರೊಬ್ಬರ ನಾಲ್ಕು ವರ್ಷದ ಮಗಳು ಮಂಗಳವಾರ ಮಕ್ಕಳೊಂದಿಗೆ ಆಟವಾಡಲು ಮನೆಯಿಂದ ಹೊರಗಡೆ ಹೋಗಿದ್ದಳು. ಆದರೆ, ಹಲವು ಗಂಟೆ ಕಳೆದರೂ ಮಗಳು ಮನೆಗೆ ವಾಪಸ್​ ಬಂದಿಲ್ಲ. ಇದರಿಂದ ಗಾಬರಿಗೊಂಡು ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ. ಸಂಜೆಯವರೆಗೂ ಬಾಲಕಿಗಾಗಿ ಅಲೆದಾಡಿದರೂ ಆಕೆ ಎಲ್ಲೂ ಪತ್ತೆಯಾಗಿಲ್ಲ. ಹೀಗಾಗಿ ಆತಂಕದಿಂದ ಸಂಜೆ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಮೇಲೆ ಪೊಲೀಸ್​ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ ಶೋಧ ಶುರು ಮಾಡಿದ್ದಾರೆ. ಈ ವೇಳೆ, ಗ್ರಾಮದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಹೊಲದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಮೃತದೇಹವನ್ನು ನಾಯಿಗಳು ತಿನ್ನುತ್ತಿದ್ದವು. ದೇಹ ಛಿದ್ರವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪೋಷಕರು ಸಹ ಸ್ಥಳಕ್ಕೆ ಧಾವಿಸಿದ್ದು, ಬಾಲಕಿಯ ಮೃತದೇಹವನ್ನು ಗುರುತಿಸಿದ್ದಾರೆ.

ಇದೇ ವೇಳೆ, ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಬಗ್ಗೆ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಘಟನೆಯಿಂದ ಕೋಳಿ ಫಾರಂನ ಮ್ಯಾನೇಜರ್​​ವೋರ್ವನ ಕೈವಾಡ ಇರುವ ಬಗ್ಗೆಯೂ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಫತೇಘರ್ ಪೊಲೀಸ್ ಸಾಮಾಜಿಕ ಜಾಲತಾಣದ 'ಎಕ್ಸ್'​ ಖಾತೆಯಲ್ಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಗೋಮಾಂಸ ತಿನ್ನಿಸಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.