ETV Bharat / bharat

ಬಾಲಕಿ ಪ್ರೀತಿ ಬಲೆಗೆ ಕೆಡವಿ, ಸಾಮೂಹಿಕ ಅತ್ಯಾಚಾರ ಎಸಗಿದರು.. ವಿಡಿಯೋ ಮಾಡಿ ವೈರಲ್​ ಮಾಡಿದ ಕಿರಾತಕರು! - ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಐಟಿ ಕಾಯ್ದೆ

ಉತ್ತರಪ್ರದೇಶದಲ್ಲಿ ತಲೆ ತಗ್ಗಿಸುವಂತೆ ಘಟನೆಯೊಂದು ನಡೆದಿದೆ. ಬಾಲಕಿ ಮೇಲೆ ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ, ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

crime news In Firozabad  Gang rape with girl in Firozabad  Gang rape in Firozabad  Firozabad Gang rape  ಬಾಲಕಿಯನ್ನು ಪ್ರೀತಿ ಬಲೆಗೆ ಕೆಡವಿ  ಸಾಮೂಹಿಕ ಅತ್ಯಾಚಾರ ಎಸಗಿ  ವಿಡಿಯೋ ವೈರಲ್​ ಮಾಡಿದ ಕಿರಾತಕರು  ಉತ್ತರಪ್ರದೇಶದಲ್ಲಿ ದಾರುಣ ಘಟನೆ  ಬಾಲಕಿ ಮೇಲೆ ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ ಎಸಗಿ  ಬೆದರಿಕೆ ಹಾಕಿರುವ ಪ್ರಕರಣ  ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ  ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಸಾಮೂಹಿಕ ಅತ್ಯಾಚಾರ  ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಐಟಿ ಕಾಯ್ದೆ  ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ
ಬಾಲಕಿಯನ್ನು ಪ್ರೀತಿ ಬಲೆಗೆ ಕೆಡವಿ
author img

By

Published : Aug 9, 2023, 12:40 PM IST

ಫಿರೋಜಾಬಾದ್, ಉತ್ತರ ಪ್ರದೇಶ: ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಇಲ್ಲಿನ ತುಂಡ್ಲಾ ಪೊಲೀಸ್​ ಠಾಣಾ ವ್ಯಾಪ್ತಿಯ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಗ್ರಾಮದ ಇಬ್ಬರು ಯುವಕರು ಮೊದಲು ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಬ್ಬರೂ ಕೂಡ ಆಕೆಯ ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದರು. ಇಬ್ಬರೂ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ನಂತರ ಬಾಲಕಿ ಅವರ ಕರೆಗೆ ಬರಲು ನಿರಾಕರಿಸಿದಾಗ ಒಂದು ದಿನ ಅವರು ವಿಡಿಯೋವನ್ನು ವೈರಲ್ ಮಾಡಿದರು. ಪ್ರಕರಣದಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಮಂಗಳವಾರ ತುಂಡ್ಲಾದಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ದೂರಿನಲ್ಲಿ ಸಂತ್ರಸ್ತೆ ತಂದೆ ಹೇಳಿದ್ದು ಹೀಗೆ..: ಗ್ರಾಮದ ಇಬ್ಬರು ಯುವಕರು ತಮ್ಮ ಮಗಳನ್ನು ಪ್ರೀತಿಯ ಬಲೆಗೆ ಕೆಡವಿದ್ದರು. ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ, ಆಕೆಯ ಅಶ್ಲೀಲ ವಿಡಿಯೋ ಮಾಡಿದ್ದಾರೆ. ಯಾರಿಗಾದರೂ ಹೇಳಿದರೆ ಈ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋಗೆ ಹೆದರಿ ಆರೋಪಿಗಳು ಆತನೊಂದಿಗೆ ಸೇರಿ ಹಲವು ಬಾರಿ ಹೇಯ ಕೃತ್ಯಗಳನ್ನು ಎಸಗಿದ್ದಾರೆ. ಒಮ್ಮೆ ಆರೋಪಿಗಳು ಕೇಳಿದಾಗ ಆಕೆ ಬರಲು ನಿರಾಕರಿಸಿದ್ದಾಳೆ. ಆಗ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋ ವೈರಲ್ ಬಳಿಕ ನನಗೆ ವಿಷಯ ತಿಳಿಯಿತು. ಇದಾದ ಬಳಿಕ ಮಗಳನ್ನು ವಿಚಾರಿಸಿದಾಗ ಆಕೆ ಎಲ್ಲ ವಿಷಯ ತಿಳಿಸಿದಳು. ಕೂಡಲೇ ನಾನು ಗ್ರಾಮದ ಇಬ್ಬರು ಯುವಕರಾದ ಅಮನ್ ಮತ್ತು ಭಿಲ್ಲು ಬಾಲ್ಮಿಕಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸಂತ್ರಸ್ತೆ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪೊಲೀಸರು ಹೇಳಿದ್ದಿಷ್ಟು:ಈ ಘಟನೆ ಕುರಿತು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ತುಂಡ್ಲಾ ಪೊಲೀಸ್​ ಠಾಣಾ ಪ್ರಭಾರಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಓದಿ: ಬೆಂಗಳೂರು: ಶಾಲಾ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಖಾಸಗಿ ಶಾಲಾ ಪ್ರಾಂಶುಪಾಲರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.