ಕಾನ್ಪುರ (ಉತ್ತರ ಪ್ರದೇಶ): ನಗರದ ಸ್ವರೂಪ್ ಪ್ರದೇಶದಲ್ಲಿರುವ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಪಿಯೂಷ್ ಗಂಗ್ವಾರ್ ಅವರ ಕಾರ್ ಅನ್ನು ಕೆಲವು ರೌಡಿಗಳು ತಡೆದಿದ್ದಾರೆ. ಬಳಿಕ ವೈದ್ಯನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ವೈದ್ಯಕೀಯ ಕಾಲೇಜು ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿದು ಥಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಈ ಕಿಡಿಗೇಡಿಗಳು ಓಡಿ ಹೋಗಿದ್ದಾರೆ. ಭಾನುವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೈದ್ಯರ ಕಾರಿಗೆ ಮತ್ತೊಂದು ಕಾರು ಡಿಕ್ಕಿ: ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲೇ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ, ಈ ಘಟನೆ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ವೈದ್ಯ ಡಾ.ಪಿಯೂಷ್ ಗಂಗ್ವಾರ್ ಕಳೆದ ಶನಿವಾರ ರಾತ್ರಿ ಸ್ವರೂಪ್ ನಗರ ಪೊಲೀಸ್ ಠಾಣೆಯ ಮಾರ್ಗವಾಗಿ ಹಾದು ಹೋಗುತ್ತಿದ್ದರು. ಆಗ ವೈದ್ಯರ ಕಾರಿಗೆ ಮತ್ತೊಂದು ಕಾರೊಂದು ಡಿಕ್ಕಿ ಹೊಡೆದಿದೆ.
ಕಾರು ಸವಾರರು ನಿಲ್ಲಿಸುವಂತೆ ಕೇಳಿಕೊಂಡರೂ ನಿಲ್ಲಿಸಲಿಲ್ಲ. ವೈದ್ಯ ಕಾರು ತೆಗೆದುಕೊಂಡು ಮೆಡಿಕಲ್ ಕಾಲೇಜ್ ಒಳಗೆ ಹೋಗತೊಡಗಿದರು. ಅಷ್ಟರಲ್ಲಿ ಕಾರಿನಲ್ಲಿದ್ದ ಯುವಕರು ಅವರನ್ನು ಹಿಂಬಾಲಿಸಿ ಮೆಡಿಕಲ್ ಕಾಲೇಜು ಒಳಗೆ ಪ್ರವೇಶಿಸಿದ್ದಾರೆ. ವೈದ್ಯ ಕಾರಿನ ಮುಂದೆ ಕಿಡಿಗೇಡಿಗಳು ತಮ್ಮ ಕಾರನ್ನು ತಂದು ನಿಲ್ಲಿಸಿ ನಿಂದಿಸಲು ಆರಂಭಿಸಿದ್ದಾರೆ. ಇದಾದ ಬಳಿಕ ವೈದ್ಯ ಕಾರಿನಿಂದ ಕೆಳಗಿಳಿದು ಓಡಲು ಆರಂಭಿಸಿದರು. ಕಾರಿನಲ್ಲಿದ್ದ ಸುಮಾರು 4 ರಿಂದ 5 ಮಂದಿ ಪುಂಡರು, ವೈದ್ಯರನ್ನು ತಡೆದು ಥಳಿಸಿದ್ದಾರೆ. ಶಬ್ದ ಕೇಳಿ ವೈದ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೌಡಿ ಯುವಕನನ್ನು ಹಿಡಿದಿದ್ದಾರೆ. ಇದಾದ ಬಳಿಕ ಅವರೆಲ್ಲರನ್ನು ತೀವ್ರವಾಗಿ ಥಳಿಸಿದ್ದಾರೆ. ನಂತರ, ಕಿಡಿಗೇಡಿಗಳು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ, ಡಾ.ಪಿಯೂಶ್ ಅವರನ್ನು ಹಾಲತ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರಿಂದ ತನಿಖೆ ಚುರುಕು: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಕುರಿತು ಸ್ವರೂಪ್ ನಗರ ಎಸಿಪಿ ಶಿಖರ್ ಮಾತನಾಡಿ, ''ಶನಿವಾರ ರಾತ್ರಿ ಠಾಣಾ ವ್ಯಾಪ್ತಿಯ ಮೆಡಿಕಲ್ ಕಾಲೇಜು ಗೇಟ್ ಎದುರು ವೈದ್ಯನಿಗೆ ಕೆಲವರು ಕಾರಿಗೆ ಡಿಕ್ಕಿ ಹೊಡೆದು ಥಳಿಸಿದ್ದಾರೆ. ಸ್ವರೂಪ್ ನಗರ ಪ್ರದೇಶ. ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ ಓಪನರ್: ಪತ್ನಿ- ಪುಟ್ಟ ಕಂದನನ್ನು ಒಂಟಿ ಮಾಡಿ ಹೋದ ಬ್ಯಾಟರ್