ETV Bharat / bharat

ಪೊಲೀಸರು, ಗೋವು ಕಳ್ಳರ ನಡುವೆ ಗುಂಡಿನ ಚಕಮಕಿ: ಗಾಯಗೊಂಡ ಮೂವರು ಕಳ್ಳಸಾಗಾಣಿಕೆದಾರರು ಅರೆಸ್ಟ್ - ಎಎಸ್​ಪಿ ಅತಿಶ್ ಕುಮಾರ್ ಸಿಂಗ್

Cow smugglers arrested in Maharajganj: ಮಹಾರಾಜಗಂಜ್ ಪೊಲೀಸರು ಮತ್ತು ಹಸು ಕಳ್ಳಸಾಗಣೆದಾರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು, ಕಳ್ಳಸಾಗಣೆದಾರರ ನಡುವೆ ಗುಂಡಿನ ಚಕಮಕಿ
Cow smugglers arrested in Maharajganj
author img

By ETV Bharat Karnataka Team

Published : Dec 19, 2023, 2:25 PM IST

ಮಹಾರಾಜ್‌ಗಂಜ್ (ಉತ್ತರ ಪ್ರದೇಶ): ಹಸು ಕಳ್ಳಸಾಗಣೆದಾರರ ಮೇಲೆ ಉತ್ತರ ಪ್ರದೇಶ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಇದರ ಹೊರತಾಗಿಯು ರಾಜ್ಯದಲ್ಲಿ ಗೋವು ಕಳ್ಳಸಾಗಣೆ ಎಗ್ಗಿಲ್ಲ ನಡೆಯುತ್ತಿದೆ. ಸೋಮವಾರ ಮಹಾರಾಜ್‌ಗಂಜ್ ನಗರದಲ್ಲಿ ಪೊಲೀಸರು ಮತ್ತು ಗೋವು ಕಳ್ಳಸಾಗಣೆದಾರರ ನಡುವೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಕಳ್ಳಸಾಗಣೆದಾರರು ಬಿಹಾರದ ಮೂಲದವರು ಎಂಬುದು ತಿಳಿದಿದೆ.

ಮೂವರೂ ಹಸು ಕಳ್ಳಸಾಗಣೆದಾರರ ಬಂಧನ: ಮಹಾರಾಜಗಂಜ್ ನಗರದಲ್ಲಿ ಸೋಮವಾರ ರಾತ್ರಿ 9.30ಕ್ಕೆ ಇಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ತಂಡದಲ್ಲಿ ಎಸ್‌ಒಜಿ ಉಸ್ತುವಾರಿ ಮಹೇಂದ್ರ ಯಾದವ್, ಸ್ವಾಟ್ ತಂಡದ ಉಸ್ತುವಾರಿ ಯೋಗೇಶ್ ಸಿಂಗ್, ಕಣ್ಗಾವಲು ಕೋಶದ ಉಸ್ತುವಾರಿ ಉಮೇಶ್ ಯಾದವ್, ಶೈಲೇಂದ್ರ ತ್ರಿಪಾಠಿ ಇದ್ದರು. ಅಷ್ಟರಲ್ಲಿ ಪಿಕಪ್ ವಾಹನ ಬರುತ್ತಿರುವುದನ್ನು ಕಂಡ ತಂಡ ನಿಲ್ಲಿಸುವಂತೆ ಸೂಚಿಸಿತು.

ಕಳ್ಳಸಾಗಾಣಿಕೆದಾರರು ವಾಹನವನ್ನು ಜೋರಾಗಿ ಓಡಿಸಲು ಪ್ರಾರಂಭಿಸಿದರು. ಜೊತೆಗೆ ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಈ ವೇಳೆ ಕಳ್ಳಸಾಗಾಣಿಕೆದಾರರ ವಾಹನ ರಸ್ತೆ ಬದಿಯ ಚರಂಡಿಯಲ್ಲಿ ಸಿಲುಕಿಕೊಂಡಿದೆ. ಕಾರಿನಿಂದ ಕೆಳಗಿಳಿದ ಬಳಿಕ ಮೂವರು ಕಳ್ಳಸಾಗಣೆದಾರರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸ್ ತಂಡ ಮುತ್ತಿಗೆ ಹಾಕಿ ಈ ಮೂವರು ಗೋವು ಕಳ್ಳಸಾಗಣೆದಾರರನ್ನು ಬಂಧಿಸಿದೆ. ಈ ವೇಳೆ ಅಲ್ಲಿಗೆ ಆಗಮಿಸಿದ ಗುಂಪೊಂದು ಹಸು ಕಳ್ಳಸಾಗಣೆದಾರರ ವಾಹನವನ್ನು ಜಖಂಗೊಳಿಸಿದೆ.

ಎಎಸ್​ಪಿ ಅತಿಶ್ ಕುಮಾರ್ ಸಿಂಗ್ ಮಾಹಿತಿ: ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಎಸ್​ಪಿ ಅತಿಶ್ ಕುಮಾರ್ ಸಿಂಗ್ ಅವರು, ''ಸೋಮವಾರ ರಾತ್ರಿ ಮಹಾರಾಜ್‌ಗಂಜ್ ನಗರದ ಮುಖ್ಯ ಅಂಚೆ ಕಚೇರಿ ಹತ್ತರ ಹಸು ಕಳ್ಳಸಾಗಣೆದಾರರು ಮತ್ತು ಪೊಲೀಸರ ನಡುವೆ ಗುಂಡಿನ ದಾಳಿ ನಡೆದಿದೆ. ತಪ್ಪಿಸಿಕೊಳ್ಳುವ ವೇಳೆಯಲ್ಲಿ ಕಳ್ಳ ಸಾಗಣೆದಾರರ ವಾಹನ ಚರಂಡಿಯಲ್ಲಿ ಸಿಲುಕಿಕೊಂಡಿದೆ.

ಪೊಲೀಸರನ್ನು ಕಂಡು ಕಳ್ಳಸಾಗಣೆದಾರರೆಲ್ಲ ಓಡಿ ಹೋಗತೊಡಗಿದ್ದರು. ಈ ವೇಳೆ ಇಬ್ಬರು ಹಸು ಕಳ್ಳಸಾಗಣೆದಾರರಿಗೆ ಗುಂಡುಗಳು ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿ ಚಿಕಿತ್ಸೆಗಾಗಿ ಮಹಾರಾಜಗಂಜ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದರೊಂದಿಗೆ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಳ್ಳಸಾಗಣೆದಾರರು ಬಿಹಾರದ ನಿವಾಸಿಗಳಾಗಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ''ಮೂವರು ಕಳ್ಳಸಾಗಣೆದಾರರು ಬಿಹಾರದ ಚಂಪಾರಣ್ ಮೂಲದವರು. ರುಸ್ತಮ್, ಲಾಲ್ ಬಹದ್ದೂರ್ ಮತ್ತು ಶಾ ಆಲಂ ಬಂಧಿತ ಆರೋಪಿಗಳು. ಈ ಆರೋಪಿಗಳ ಪೈಕಿ ರುಸ್ತಮ್ ಪುರಂದರಪುರ ಪೊಲೀಸ್ ಠಾಣೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಪರಾರಿಯಾಗುವ ವೇಳೆಯಲ್ಲಿ ರುಸ್ತಮ್ ಮತ್ತು ಲಾಲ್ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದಾರೆ'' ಎಂದು ಪೊಲೀಸ್​ ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಯುವಕನ ಸೋದರ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.