ETV Bharat / bharat

Bomb Blast Threaten: ಮುಂಬೈ - ಪುಣೆಯಲ್ಲಿ ಬಾಂಬ್ ಸ್ಫೋಟದ ಬೆದರಿಕೆ.. ಉತ್ತರಪ್ರದೇಶದಲ್ಲಿ ಆರೋಪಿ ಸೆರೆ - ಆರೋಪಿ ದರ್ವೇಶ್ ರಾಜ್‌ಭರ್

ಮುಂಬೈಗೆ ಬಾಂಬ್ ಸ್ಫೋಟದ ಬೆದರಿಕೆಯೊಡ್ಡಿದ ಉತ್ತರಪ್ರದೇಶದ ಒಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಾಂಬ್​ ಬೆದರಿಕೆ ಆರೋಪಿ ಸೆರೆ
ಬಾಂಬ್​ ಬೆದರಿಕೆ ಆರೋಪಿ ಸೆರೆ
author img

By

Published : Jun 24, 2023, 11:24 AM IST

ಮುಂಬೈ: ಜೂನ್ 24 ರ ಸಂಜೆ ಮುಂಬೈ ಮತ್ತು ಪುಣೆ ನಗರದಲ್ಲಿ ಬಾಂಬ್ ಸ್ಫೋಟದ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಬಂಧಿಸಿದ್ದಾರೆ. ಬಂಧಿತನಾಗಿರುವ ಆರೋಪಿ ಹೆಸರು ದರ್ವೇಶ್ ರಾಜ್‌ಭರ್ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 22 ಮತ್ತು 23 ರಂದು ಬೆಳಗ್ಗೆ ಮುಂಬೈ ಪೊಲೀಸ್ ಪಡೆಗಳ ವಾಟ್ಸ್​ಆ್ಯಪ್​ ಸಂಖ್ಯೆಗೆ ಅಂಧೇರಿ ಕುರ್ಲಾ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಸಂದೇಶವನ್ನು ಕಳುಹಿಸಲಾಗಿದೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಅಂಬೋಲಿ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್​ 278/23 u/s 505 (1)(B), 505(2), 185 ಅಡಿ ಬಾಂಬ್​ ಕುರಿತಾಗಿ ಬಂದಿರುವ ಮೆಸೇಜ್​ ಕುರಿತು ಪ್ರಕರಣ ದಾಖಲಿಸಿಕೊಂಡರು. ನಂತರ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ, ತಾಂತ್ರಿಕ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಯುಪಿಯ ಜಾನ್‌ಪುರದಿಂದ ಆರೋಪಿ ದರ್ವೇಶ್ ರಾಜ್‌ಭರ್‌ನನ್ನು ಪತ್ತೆ ಮಾಡಿದರು.

ಪೊಲೀಸರಿಗೆ ಕೇವಲ ಬಾಂಬ್​ ಸ್ಪೋಟದ ಬಗ್ಗೆ ಸಂದೇಶ ಅಲ್ಲದೇ, ಮುಂಬೈ ಮತ್ತು ಪುಣೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ದರ್ವೇಶ್ ರಾಜ್‌ಭರ್ ಅದನ್ನು ಸ್ಫೋಟಿಸಲು ಎರಡು ಕೋಟಿ ಪಡೆದಿದ್ದ ಎಂದು ಕೂಡ ಸಂದೇಶದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ಎರಡು ಲಕ್ಷ ರೂಪಾಯಿ ಕೊಟ್ಟರೆ ಈ ಬಾಂಬ್ ಸ್ಫೋಟಗಳನ್ನು ತಪ್ಪಿಸಬಹುದು ಮತ್ತು ನಾನು ನನ್ನ ಆಳುಗಳ ಜೊತೆ ಮಲೇಷ್ಯಾಕ್ಕೆ ಹೊರಡುತ್ತೇನೆ ಎಂದು ನಮೂದಿಸಿದ್ದರು.

ಇದನ್ನೂ ಓದಿ: Bridge collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 2 ಜಿಲ್ಲೆಗಳ ಸಂಪರ್ಕ ಬಂದ್

ಇದರಿಂದ ಗೊಂದಲಕ್ಕೀಡಾದ ಮುಂಬೈ ಪೊಲೀಸರಿಗೆ ಇದು ಹುಸಿ ಕರೆ ಇರಬಹುದು ಎಂಬ ಅನಿಸಿಕೆಯೂ ಇತ್ತು. ಆದರೂ ಪೊಲೀಸರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಇದರಿಂದ, ಓಶಿವಾರ ಪೊಲೀಸರು, ಬಂದಿರುವ ಮೆಸೇಜ್​ ಕುರಿತು ತಾಂತ್ರಿಕ ತನಿಖೆ ನಡೆಸಿದ್ದಾರೆ. ಇದರಿಂದ ಸಂಪೂರ್ಣ ಮಾಹಿತಿ ಗಿಟ್ಟಿಸಿಕೊಂಡ ಪೊಲೀಸರು ಜೌನ್‌ಪುರದಿಂದ ಆರೋಪಿ ದರ್ವೇಶ್ ರಾಜ್‌ಭರ್​ನನ್ನು ಬಂಧಿಸಿದ್ದಾರೆ.

ಬೆಂಗಳೂರು ಖಾಸಗಿ ಕಂಪನಿಗೆ ಬಂದಿತ್ತು ಹುಸಿ ಬಾಂಬ್​ ಕರೆ: ಜೂನ್​ 13 ರಂದು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಗೆ ಬಾಂಬ್​ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದ ಆರೋಪಿ ಕಂಪನಿಯಲ್ಲಿ ಬಾಂಬ್​ ಇಟ್ಟಿದ್ದು, ಕೆಲ ಹೊತ್ತಿನ ಬಳಿಕ ಸ್ಫೋಟಗೊಳ್ಳಲಿದೆ ಎಂದಿದ್ದ. ಇದರಿಂದ ಗಾಬರಿಗೊಂಡ ಕಂಪನಿ ಸಿಬ್ಬಂದಿ ಪೊಲೀಸ್​ ಹಾಗೂ ಬಾಂಬ್​ ನಿಷ್ಕ್ರಿಯ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದರು. ಕೊನೆಗೆ ಅದು ಹುಸಿ ಬಾಂಬ್​ ಕರೆ ತಿಳಿದು ಪ್ರಕರಣ ದಾಖಲಿಸಿ ಆರೋಪಿಗಾಗಿ ತನಿಖೆ ನಡೆಸಿದ್ದಾರೆ. ಆಗ ಆರೋಪಿ ಬೇರೆ ಯಾರಲ್ಲ ಅದೇ ಕಂಪನಿಯ ಮಾಜಿ ಉದ್ಯೋಗಿ ಎಂದು ತಿಳಿದು ಆತನನ್ನು ಬಂಧಿಸಿದ್ದರು.

ಇದನ್ನೂ ಓದಿ: Kedarnath: ಕೇದಾರನಾಥ ಚಿನ್ನದ ಲೇಪನ ಹಗರಣ: ಉನ್ನತ ಮಟ್ಟದ ತನಿಖೆಗೆ ಸೂಚಿಸಿದ ಸರ್ಕಾರ, ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಪಟ್ಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.