ಪಾಕುರ್, ಜಾರ್ಖಂಡ್: ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 10 ರಿಂದ 12 ಯುವಕರು ಸೇರಿ ಮಹಿಳೆಯೊಂದಿಗೆ ಈ ದುಷ್ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುವಕನೊಬ್ಬ ಮಹಿಳೆಗೆ ಫೋನ್ ಮೂಲಕ ಸ್ನೇಹಿತನಾಗಿದ್ದ. ಅದರ ನಂತರ ಇಬ್ಬರೂ ಭಾನುವಾರ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ದಿನವೇ ಮಹಿಳೆ ತನ್ನ ಹೊಸ ಸ್ನೇಹಿತನೊಂದಿಗೆ ವಾಕಿಂಗ್ ಹೋಗಿದ್ದ ವೇಳೆ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಮನೆ ಕೆಲಸ ಮಾಡುವ ಮಹಿಳೆ ತನ್ನ ಫೋನ್ ಮೂಲಕ ಪರಿಚಯವಾಗಿದ್ದ ಸ್ನೇಹಿತನನ್ನು ಭೇಟಿಯಾಗಲು ಪಾಕೂರಿನ ಮಹೇಶ್‌ಪುರದಲ್ಲಿರುವ ಸಂಬಂಧಿಕರ ಸ್ಥಳಕ್ಕೆ ತಲುಪಿದ್ದಳು. ಬಳಿಕ ಆಕೆಯನ್ನು ಸ್ನೇಹಿತ ಬೈಕ್‌ನಲ್ಲಿ ಕರೆದುಕೊಂಡು ಊರು ಸುತ್ತಾಡಲು ತೆರಳಿದ್ದರು. ಇವರಿಬ್ಬರ ಜೊತೆ ಯುವಕನ ಮತ್ತೊಬ್ಬ ಸ್ನೇಹಿತ ಕೂಡ ಇದ್ದ. ಈ ಹಿನ್ನೆಲೆ ಮಹಿಳೆಯೊಂದಿಗೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಪೊಲೀಸರು ಅಮದಪದ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಪ್ರಕರಣ ಸಂಖ್ಯೆ 36/23 ಮತ್ತು ಕಲಂ 376 ಡಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ಕರೆಗಳ ಮೂಲಕ ಸ್ನೇಹ: ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, 6 ತಿಂಗಳ ಹಿಂದೆ ಆಕೆಯ ಮೊಬೈಲ್‌ಗೆ ಪದೇ ಪದೇ ಅಪರಿಚಿತ ಕರೆ ಬರುತ್ತಿತ್ತು. ಈ ಕರೆಯ ಮೂಲಕ ಮಹಿಳೆ ಹಾಗೂ ಯುವಕ ಮಾತನಾಡತೊಡಗಿದರು. ಫೋನ್ನಲ್ಲಿ ಶುರುವಾದ ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ತೊಡಗಿದರು. ಇದಾದ ನಂತರ ಇಬ್ಬರೂ ಮೊದಲ ಬಾರಿಗೆ ಭಾನುವಾರದಂದು ಭೇಟಿಯಾದರು.
10 ರಿಂದ 12 ಯುವಕರು ಹೊಡೆದಾಟ: ಹೇಳಿಕೆ ಪ್ರಕಾರ, ಮಹಿಳೆ ತನಿಗೆ ಹೆಸರು ಸಹ ತಿಳಿದಿಲ್ಲದ ಪ್ರಿಯಕರನೊಂದಿಗೆ ಸುತ್ತಾಡಲು ಹೋಗಿದ್ದಳು. ಫೋನ್ ಮೂಲಕ ಪರಿಚಯವಾದ ಆಕೆಯ ಸ್ನೇಹಿತ ಬೈಕಿನಲ್ಲಿ ಪಡೇರಕೋಳ ಗ್ರಾಮಕ್ಕೆ ಕರೆದೊಯ್ದಿದ್ದಾನೆ. ಮತ್ತೊಂದೆಡೆ ನೀರು ಕುಡಿಯಲು ಹೋದಾಗ, 10 ರಿಂದ 12 ಯುವಕರು ಅಲ್ಲಿಗೆ ಆಗಮಿಸಿ, ಆಕೆಯ ಸ್ನೇಹಿತನೊಂದಿಗೆ ಜಗಳ ಮಾಡಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಎಲ್ಲರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಅತ್ಯಾಚಾರ ಬಳಿಕ ಮಹಿಳೆ ಮೂರ್ಛೆ ಹೋಗಿದ್ದಾಳೆ ಮತ್ತು ಸೋಮವಾರ ಮುಂಜಾನೆ ಪ್ರಜ್ಞೆ ಬಂದಾಗ, ಆಕೆಯ ಹೇಗಾದರೂ ಮುಖ್ಯ ರಸ್ತೆಯನ್ನು ತಲುಪಿದ್ದಳು. ಬಳಿಕ ವ್ಯಕ್ತಿಯೊಬ್ಬರ ಸಹಾಯದಿಂದ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಅಮದಪದ ಠಾಣೆಯ ಪೊಲೀಸರು ಆಗಮಿಸಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನಿಖೆಯಲ್ಲಿ ಪೊಲೀಸರಿಗೆ ಹಿನ್ನಡೆ: ಘಟನೆ ಕುರಿತು ತನಿಖೆ ನಡೆಸುತ್ತಿರುವ ಉಪವಿಭಾಗದ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ವಿಮಲ್ ಮಾತನಾಡಿ, ಸಂತ್ರಸ್ತೆಯ ಹೇಳಿಕೆ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆದರೆ ಸಂತ್ರಸ್ತೆ ಘಟನೆ ನಡೆಸಿದ ಅಪರಾಧಿಗಳ ಬಗ್ಗೆ ಅಥವಾ ತನ್ನ ಸ್ನೇಹಿತನ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗಿಲ್ಲ. ತಾನು ಅಮದಪದಕ್ಕೆ ಬಂದಿದ್ದ ಸ್ನೇಹಿತನ ಹೆಸರು ಸಹ ಹೇಳುತ್ತಿಲ್ಲ. ಇದರಿಂದಾಗಿ ಪೊಲೀಸರು ತನಿಖೆಯಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಎಸ್‌ಡಿಪಿಒ ಹೇಳಿದರು.
ಸ್ಥಳದಲ್ಲಿ ಮೊಬೈಲ್ ಟವರ್ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಇದು ಏನನ್ನಾದರೂ ಬಹಿರಂಗಪಡಿಸಬಹುದು. ಆದರೆ, ಈ ಮಹಿಳೆ ತನ್ನ ಸಂಗಾತಿಯೊಂದಿಗೆ ಎಲ್ಲಿಗೆ ಹೋಗಿದ್ದಳು ಎಂಬುದನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಓದಿ: ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ; ರಾಜಸ್ಥಾನದಲ್ಲಿ ಸಂಚಲನ