ETV Bharat / bharat

ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ.. ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ - ಈಟಿವಿ ಭಾರತ ಕನ್ನಡ

ಅತೀ ಕಡಿಮೆ ಸಮಯದಲ್ಲಿ ಮೂಡಿ ಬಂದ ಸಾಯಿಬಾಬಾ ಭಾವಚಿತ್ರ ರಂಗೋಲಿಯು ವಿಶ್ವ ದಾಖಲೆಯನ್ನು ನಿರ್ಮಿಸಿದೆ.

created-world-record-by-making-smallest-portrait-rangoli-of-sai-baba
ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ....ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ
author img

By

Published : Dec 11, 2022, 6:03 PM IST

Updated : Dec 11, 2022, 9:36 PM IST

ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ.. ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ

ಅಹಮದ್​ನಗರ(ಮಹಾರಾಷ್ಟ್ರ): ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರವನ್ನು ಬಿಡಿಸುವುದೇ ಚಿತ್ರಕಲೆ. ಒಂದು ಚಿತ್ರ ಸುಂದರವಾಗಿ ಮೂಡಿಬರಬೇಕೆಂದರೆ ಅದೆಷ್ಟೋ ತಾಸು ಅದಕ್ಕೆಂದೇ ಮೀಸಲಿಡಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಸಾಯಿಬಾಬಾನ ಚಿಕ್ಕ ಭಾವಚಿತ್ರವನ್ನು ರಂಗೋಲಿಯಲ್ಲಿಯೇ ಬಿಡಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ..? ಇಲ್ಲಿದೆ ನೋಡಿ.

ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಕೋಪರ್​ಗಾಂವ್​ನ ಮಸೂದಾ ದಾರುವಾಲಾ ಎಂಬವರು ಅತೀ ಕಡಿಮೆ ಸಮಯದಲ್ಲಿ ಸಾಯಿಬಾಬಾ ಭಾವಚಿತ್ರವನ್ನು ರಂಗೋಲಿಯಲ್ಲಿಯೇ ಬಿಡಿಸಿದ್ದಾರೆ. ಅತೀ ಚಿಕ್ಕದರಲ್ಲಿ ಮೂಡಿಬಂದ ಈ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಅಲ್ಲದೇ ಇಂಟರ್​ನ್ಯಾಷನಲ್​ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ.

ಈ ಪುಟ್ಟ ರಂಗೋಲಿಗಾಗಿಯೇ ಕಿಂಗ್ಸ್ ಬುಕ್​ ಆಫ್ ರೆಕಾರ್ಡ್ಸ್ ಪ್ರಶಸ್ತಿ ಇವರನ್ನು ಅರಸಿ ಬಂದಿದೆ. ಸಾಯಿಬಾಬಾನ ಈ ಚಿತ್ರವನ್ನು 2.5 ಸೆಂ.ಮೀ ಜಾಗದಲ್ಲಿ ಕೇವಲ 40 ನಿಮಿಷಗಳಲ್ಲಿ ರಚಿಸಿದ್ದು, ಹಿಂದಿನ 5 ಸೆಂ.ಮೀ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಮಸೂದಾ ಅವರು ಪ್ರಸ್ತುತ ಶಿರಸಿಯ ಸಂಜೀವನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಆರ್ಥಿಕತೆಯಲ್ಲಿ ಹೊಸ ದಾಖಲೆ ಬರೆದ ನೈಋತ್ಯ ರೈಲ್ವೆ..

Last Updated : Dec 11, 2022, 9:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.