ದುರ್ಗ್ (ಛತ್ತೀಸ್‌ಗಢ): ಜಿಲ್ಲೆಯ ನೆಹರು ನಗರದ ಚಂದುಲಾಲ್ ಚಂದ್ರಕರ್ ಆಸ್ಪತ್ರೆಯ ಐಸಿಯುನಲ್ಲಿರುವ ರೋಗಿಯ ಮುಖದ ಮೇಲೆ ಇರುವೆಗಳು ಹರಿದಾಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಆಡಳಿತವು ಆರೋಗ್ಯ ಇಲಾಖೆ ಗಮನಕ್ಕೆ ತಂದಿದೆ. ಕರ್ತವ್ಯ ನಿರತ ವೈದ್ಯ ಹಿಮಾಂಶು ಚಂದ್ರಕರ್, ಸ್ಟಾಫ್ ನರ್ಸ್ ಎಲಿನ್ ರಾಮ್, ಅಟೆಂಡರ್‌ಗಳಾದ ಮಾನ್ಸಿಂಗ್ ಯಾದವ್ ಮತ್ತು ಯುಗಲ್ ಕಿಶೋರ್ ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆರೋಗ್ಯ ಇಲಾಖೆ ಆಸ್ಪತ್ರೆ ಆಡಳಿತಕ್ಕೆ ಸೂಚನೆ ನೀಡಿದೆ.
ಛತ್ತೀಸ್‌ಗಢದ ದುರ್ಗ್‌ನ ಚಂದುಲಾಲ್ ಚಂದ್ರಕರ್ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಯೊಬ್ಬರ ಮುಖದ ಮೇಲೆ ಇರುವೆಗಳು ಹರಿದಾಡುತ್ತಿದ್ದವು. ಮೂಲಗಳ ಪ್ರಕಾರ, ಸುಭಾಷ್ ನಗರದ ನಿವಾಸಿ ರಾಮ ಸಾಹು ಉಸಿರಾಟದ ಸಮಸ್ಯೆಯಿಂದ ಐಸಿಯುಗೆ ದಾಖಲಾಗಿದ್ದರು. ರಾಮರ ಮಗ ತನ್ನ ತಂದೆಯನ್ನು ನೋಡಲು ಆಸ್ಪತ್ರೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಅವರು ನರ್ಸ್‌ಗೆ ದೂರು ನೀಡಿದ್ದಾರೆ. ಮಳೆಗಾಲದಲ್ಲಿ ಇರುವೆಗಳು ಸಾಮಾನ್ಯ’ ಎಂದು ನರ್ಸ್ ಹೇಳಿದ್ದಾರಂತೆ. ನರ್ಸ್ನ ಉಡಾಫೆ ಉತ್ತರಕ್ಕೆ ರಾಮ ಸಾಹು ಅವರ ಪುತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸುದೀರ್ಘ 8 ಗಂಟೆ ಶಸ್ತ್ರಚಿಕಿತ್ಸೆ: ಹಿಮ್ಮುಖ ಅಂಗ ಹೊಂದಿದ್ದ ರೋಗಿಗೆ ದ್ವಿಪಕ್ಷೀಯ ಶ್ವಾಸಕೋಶ ಕಸಿ ಯಶಸ್ವಿ