ETV Bharat / bharat

ಸಿಪಿಐಎಂ ಕಚೇರಿಗೆ ಬೆಂಕಿ.. ಬಿಜೆಪಿಯ ಗೂಂಡಾ ವರ್ತನೆ ಎಂದು ಆರೋಪಿಸಿದ ಸಿಪಿಐಎಂ - ಸಿಪಿಐಎಂ ಹಾಗೂ ಬಿಜೆಪಿ ನಡುವೆ ಘರ್ಷಣೆ

ಅಗರ್ತಲಾದಲ್ಲಿ ಬಿಜೆಪಿ ಹಾಗೂ ಸಿಪಿಐಎಂ ನಡುವೆ ಘರ್ಷಣೆ ನಡೆದಿದ್ದು, ಒಬ್ಬರ ಮೇಲೊಬ್ಬರು ಆರೋಪ - ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ. ಇಲ್ಲಿನ ಸಿಪಿಐಎಂ ಕಚೇರಿ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದ್ದು, ಇದು ಬಿಜೆಪಿಯ ಗೂಂಡಾ ವರ್ತನೆ ಎಂದು ಸಿಪಿಐಎಂ ಆರೋಪಿಸಿದೆ.

cpi-office-set-ablaze-at-agartala
ಬಿಜೆಪಿಯ ಗೂಂಡಾ ವರ್ತನೆ ಎಂದು ಆರೋಪಿಸಿದ ಸಿಪಿಐ
author img

By

Published : Sep 9, 2021, 10:27 AM IST

ಅಗರ್ತಲಾ (ತ್ರಿಪುರ): ಇಲ್ಲಿನ ದನ್​ಪುರ್​ ಪ್ರದೇಶದಲ್ಲಿ ಸಿಪಿಐ(ಎಂ) ಹಾಗೂ ಬಿಜೆಪಿ ನಡುವೆ ಘರ್ಷಣೆ ಉಂಟಾಗಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳದಲ್ಲಿನ ಸಿಪಿಐಎಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಎರಡು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿರುವ ಸಿಪಿಐಎಂ, ನಗರದಲ್ಲಿ ಬಿಜೆಪಿ ಶಾಂತಿ ಹಾಳುಗೆಡುವ ಕಾರ್ಯ ಮಾಡುತ್ತಿದೆ ಎಂದಿದೆ. ಸಿಪಿಐಎಂ ಕಚೇರಿ ಮುಂಭಾಗ ಹಲವು ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಜೊತೆಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಬಿಜೆಪಿ ಕಾರ್ಯಕರ್ತರು ಸಿಪಿಐಎಂ ನಮ್ಮ ಮೇಲೆ ದಾಳಿಗೆ ಮುಂದಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಸಿಪಿಐಎಂ ಷಡ್ಯಂತ್ರ ನಡೆಸುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ರಜಿಬ್ ಭಟ್ಟಾಚರ್ಜಿ ಪ್ರತ್ಯಾರೋಪ ಮಾಡಿದ್ದಾರೆ.

  • Following videos shows how the BJP mobs attacked the state party office in Agartala. BJP is scared of the voices that are exposing it in the state and hence is resorting to terror. pic.twitter.com/dOTGW4Vp9f

    — CPI (M) (@cpimspeak) September 8, 2021 " class="align-text-top noRightClick twitterSection" data=" ">

ಘಟನೆಯಲ್ಲಿ ಖಾಸಗಿ ಮಾಧ್ಯಮ ಕಚೇರಿ ಮೇಲೂ ದಾಳಿ ಮಾಡಲಾಗಿದ್ದು, ಸ್ಥಳದಲ್ಲಿ ಹಿರಿಯ ಪತ್ರಕರ್ತರು ಜಮಾಯಿಸಿದ್ದರು. ಅಲ್ಲದೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ವಿವರಣೆ ನೀಡಲು ಆಗ್ರಹಿಸಿದರು. ಜೊತೆಗೆ ಹಲವು ಕಡೆ ಸಿಪಿಐ ಮುಖಂಡರ ಮೂರ್ತಿಗಳಿಗೆ ಹಾನಿ ಕೂಡಾ ಮಾಡಲಾಗಿದೆ.

ರಾಜ್ಯ ಖಾತೆ ಸಚಿವೆ ಪ್ರತಿಮಾ ಭೂಮಿಕ್, ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಶಾಂತ ಚೌಧರಿ ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಈ ಗದ್ದಲದ ಹಿಂದೆ ಸಿಪಿಐಎಂನ ಕೈವಾಡವಿದೆ ಎಂದು ಆರೋಪಿಸಿದರು. ಈ ಬೆನ್ನಲ್ಲೆ ವಿರೋಧ ಪಕ್ಷದ ನಾಯಕ ಮಾಣಿಕ್ ಸರ್ಕಾರ್ ಮಾತನಾಡಿ, ಆಡಳಿತ ಪಕ್ಷದ ಹತಾಶೆ ಈ ಮೂಲಕ ಪ್ರದರ್ಶನವಾಗಿದೆ. ಆದರೆ, ಇಂತಹ ಘಟನೆಗಳ ಮೂಲಕ ಅವರಿಗೆಂದೂ ಯಶಸ್ಸು ಸಿಗಲಾರದು ಎಂಬುದನ್ನು ಮತ್ತೆ ನಾನು ನೆನಪಿಸುತ್ತೇನೆ ಎಂದಿದ್ದಾರೆ.

ಜೊತೆಗೆ 12 ಗಂಟೆಯೊಳಗಾಗಿ ಘಟನೆಯ ಸಂಪೂರ್ಣ ತನಿಖೆಯಾಗಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಸಿಪಿಎಂ ಜೊತೆಗಿನ ಘರ್ಷಣೆಗಳನ್ನು ವಿರೋಧಿಸಿ ಅಗರ್ತಲಾದಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೆಲವೆಡೆ ಘರ್ಷಣೆ ಉಂಟಾಗಿದೆ.

ಓದಿ: ಬ್ರಹ್ಮಪುತ್ರದಲ್ಲಿ ಬೋಟ್​​ಗಳ ಡಿಕ್ಕಿ ಪ್ರಕರಣ: ಓರ್ವ ಮಹಿಳೆ ಸಾವು, 35 ಮಂದಿ ಕಣ್ಮರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.