ETV Bharat / bharat

ರಾಜಸ್ಥಾನದಲ್ಲಿ ಇಬ್ಬರ ಹತ್ಯೆ, ನೂಹ್‌ ಹಿಂಸಾಚಾರಕ್ಕೆ ಪ್ರಚೋದನೆ: ಗೋರಕ್ಷಕ ದಳದ ಮೋನು ಮಾನೇಸರ್​ ಅರೆಸ್ಟ್​ - ರಾಜಸ್ಥಾನದ ಭರತ್‌ಪುರ ಜಿಲ್ಲೆ

ರಾಜಸ್ಥಾನದಲ್ಲಿ ಇಬ್ಬರ ಹತ್ಯೆ ಪ್ರಕರಣ ಹಾಗೂ ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದಡಿ ಗೋರಕ್ಷಕ ದಳದ ಮುಖಂಡ ಮೋನು ಮಾನೇಸರ್​ ಬಂಧನವಾಗಿದೆ.

Cow vigilante Monu Manesar, key accused in double murder case and Nuh violence sent to 14-day judicial custody
ರಾಜಸ್ಥಾನದಲ್ಲಿ ಇಬ್ಬರ ಹತ್ಯೆ, ನೂಹ್‌ ಹಿಂಸಾಚಾರಕ್ಕೆ ಪ್ರಚೋದನೆ: ಗೋರಕ್ಷಕ ದಳದ ಮೋನು ಮಾನೇಸರ್​ ಅರೆಸ್ಟ್​
author img

By ETV Bharat Karnataka Team

Published : Sep 12, 2023, 7:47 PM IST

ಚಂಡೀಗಢ (ಹರಿಯಾಣ): ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಹಾಗೂ ರಾಜಸ್ಥಾನದಲ್ಲಿ ಇಬ್ಬರ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಪ್ರಕರಣದಲ್ಲಿ ಬಜರಂಗ ದಳದ ನಾಯಕ, ಗೋರಕ್ಷಕ ದಳದ ಮುಖಂಡ ಮೋನು ಮಾನೇಸರ್​ನನ್ನು ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈಗಾಗಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್​ ಒಪ್ಪಿಸಿದೆ.

ನುಹ್ ಪೊಲೀಸರು ಇಂದು ಐಟಿ ಕಾಯ್ದೆಯಡಿ ಮೋನು ಮಾನೇಸರ್​ನನ್ನು ಬಂಧಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮೋನು ಮಾನೇಸರ್​ ಪರ ವಕೀಲ ಸೋಮನಾಥ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ: ವಿಎಚ್‌ಪಿ ಯಾತ್ರೆಗಿಲ್ಲ ಅನುಮತಿ, ನೂಹ್‌ ಜಿಲ್ಲೆಯಲ್ಲಿ ಬಿಗಿ ಭದ್ರತೆ, ಸೆಕ್ಷನ್ 144 ಜಾರಿ...

ಫೆಬ್ರವರಿ 15ರಂದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಿವಾಸಿಗಳಾದ ನಾಸಿರ್ (25), ಜುನೈದ್ (35) ಮೇಲೆ ಗೋರಕ್ಷಕರು ದಾಳಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಮರುದಿನ ಹರಿಯಾಣದ ಭಿವಾನಿ ಜಿಲ್ಲೆಯ ಲೋಹರು ಸಮೀಪ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಇವರು ದೇಹಗಳು ಪತ್ತೆಯಾಗಿದ್ದವು. ಈ ಘಟನೆಯಲ್ಲಿ ಮನೇಸರ್‌ ಪ್ರಮುಖ ಎಂಬ ಶಂಕೆ ವ್ಯಕ್ತವಾಗಿತ್ತು.

ಈ ಕುರಿತು ರಾಜಸ್ಥಾನದ ಭರತ್‌ಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಪ್ರತಿಕ್ರಿಯಿಸಿ, ಮೋನು ಮಾನೇಸರ್ ಬಂಧನದ ಬಗ್ಗೆ ಹರಿಯಾಣ ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಅಲ್ಲಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಮಗೆ ಹಸ್ತಾಂತರ ಪ್ರತಿಕ್ರಿಯೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ ಘರ್ಷಣೆಗೆ 6 ಸಾವು, 116 ಮಂದಿ ಬಂಧನ; ಶಾಂತಿ ಕಾಪಾಡಲು ಸಿಎಂ ಖಟ್ಟರ್​ ಮನವಿ

ನೂಹ್ ಹಿಂಸಾಚಾರಕ್ಕೆ ಪ್ರಚೋದನೆ: ರಾಜಸ್ಥಾನದ ಯುವಕರ ಹತ್ಯೆ ಪ್ರಕರಣದ ಜೊತೆಗೆ ಜುಲೈನಲ್ಲಿ ಹರಿಯಾಣದ ನೂಹ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೂ ನೀಡಿದ ಪ್ರಚೋದನೆ ಆರೋಪವನ್ನು ಮಾನೇಸರ್ ಎದುರಿಸುತ್ತಿದ್ದಾನೆ. ಈ ಹಿಂಸಾಚಾರದಲ್ಲಿ ಕನಿಷ್ಠ ಆರು ಜನರ ಮೃತಪಟ್ಟಿದ್ದರು.

ಜುಲೈ 31ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ವೇಳೆ ಹಿಂಸಾಚಾರ ಶುರುವಾಗಿತ್ತು. ಇದು ಗುರುಗ್ರಾಮ್ ಸೇರಿದಂತೆ ನೆರೆಯ ಪ್ರದೇಶಗಳಿಗೂ ಹರಡಿತ್ತು. ಈ ಯಾತ್ರೆಯಲ್ಲಿ ಮಾನೇಸರ್ ಹಾಜರಾಗಿದ್ದರು ಎಂಬ ವದಂತಿಗಳು ಕೋಮು ಸಂಘರ್ಷಕ್ಕೆ ವೇಗ ನೀಡಿತ್ತು.

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಮಾನೇಸರ್​​ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಸೇರಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ. ಇದೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾನೇಸರ್ ಸಹವರ್ತಿ ಬಿಟ್ಟು ಬಜರಂಗಿಯನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಆದರೆ, ನಂತರ ಆತನಿಗೆ ಜಾಮೀನು ಸಿಕ್ಕಿದೆ.

ಇದನ್ನೂ ಓದಿ: ನುಹ್ ಹಿಂಸಾಚಾರ ಪ್ರಕರಣ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಟ್ಟು ಬಜರಂಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.