ETV Bharat / bharat

ಕೋವಾಕ್ಸಿನ್​​ಗಿಂತ ಕೋವಿಶೀಲ್ಡ್ ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸಿದೆ- ಅಧ್ಯಯನ ವರದಿ - preliminary study of COVAT

ಕೋವಾಕ್ಸಿನ್‌ಗೆ ಹೋಲಿಸಿದರೆ ಕೋವಿಶೀಲ್ಡ್ ಹಾಕಿಸಿಕೊಂಡವರಲ್ಲಿ ಆ್ಯಂಟಿ-ಸ್ಪೈಕ್ ಪ್ರತಿಕಾಯ ಹಾಗೂ ಸೆರೊಪಾಸಿಟಿವಿಟಿ ದರ ಗಮನಾರ್ಹವಾಗಿ ಹೆಚ್ಚಿವೆ ಎಂದು ಕೋವ್ಯಾಟ್​ ಪ್ರಾಥಮಿಕ ಅಧ್ಯಯನ ಹೇಳಿದೆ.

Covishield
Covishield
author img

By

Published : Jun 7, 2021, 7:20 AM IST

ನವದೆಹಲಿ: ಕೋವಾಕ್ಸಿನ್‌ ಲಸಿಕೆಗಿಂತ ಕೋವಿಶೀಲ್ಡ್ ಲಸಿಕೆಯು ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಕೊರೊನಾ ವೈರಸ್ ವ್ಯಾಕ್ಸಿನ್​ ಇಂಡ್ಯೂಸ್ಡ್​ ಆ್ಯಂಟಿಬಾಡಿ ಟೈಟರ್​ (COVAT) ನಡೆಸಿದ ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದೆ.

ಈ ಎರಡು ಲಸಿಕೆಗಳಲ್ಲಿ ಯಾವುದಾದರೂ ಒಂದು ಲಸಿಕೆಯ ಎರಡೂ ಡೋಸ್​ ಪಡೆದ ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಎರಡೂ ಡೋಸ್ ಪಡೆದ ಬಳಿಕ ಕೋವಾಕ್ಸಿನ್‌ಗೆ ಹೋಲಿಸಿದರೆ ಕೋವಿಶೀಲ್ಡ್ ಹಾಕಿಸಿಕೊಂಡವರಲ್ಲಿ ಆ್ಯಂಟಿ-ಸ್ಪೈಕ್ ಪ್ರತಿಕಾಯ ಹಾಗೂ ಸೆರೊಪಾಸಿಟಿವಿಟಿ ದರ ಗಮನಾರ್ಹವಾಗಿ ಹೆಚ್ಚಿವೆ. ಅಂದರೆ ಹೆಚ್ಚು ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ಅಧ್ಯಯನ ಹೇಳಿದೆ.

ಕೋವಿಶೀಲ್ಡ್ ಪಡೆದವರಲ್ಲಿ ಶೇ.98.1 ರಷ್ಟು ಸೆರೊಪಾಸಿಟಿವಿಟಿ ದರ

325 ಪುರುಷ ಹಾಗೂ 227 ಮಹಿಳೆಯರು ಸೇರಿ ಒಟ್ಟು 552 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರಲ್ಲಿ 456 ಮಂದಿ ಕೋವಿಶೀಲ್ಡ್ ಹಾಗೂ 96 ಮಂದಿ ಕೋವಾಕ್ಸಿನ್​​ ಲಸಿಕೆಯ ಎರಡೂ ಡೋಸ್​ ಪಡೆದಿದ್ದಾರೆ. ಕೋವಿಶೀಲ್ಡ್ ಪಡೆದವರಲ್ಲಿ ಶೇ.98.1 ರಷ್ಟು ಸೆರೊಪಾಸಿಟಿವಿಟಿ ದರ ಕಂಡು ಬಂದಿದ್ದು, ಕೋವಾಕ್ಸಿನ್ ಪಡೆದವರಲ್ಲಿ ಈ ಪ್ರಮಾಣ ಶೇ.80 ರಷ್ಟಿದೆ.

ಇದನ್ನೂ ಓದಿ: 2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ: ಪ್ರಯೋಗ ಆರಂಭಿಸಿದ ಭಾರತ್ ಬಯೋಟೆಕ್​

ಒಟ್ಟಾರೆ ಎರಡೂ ಡೋಸ್​ಗಳ ಬಳಿಕ ಈ ಎರಡೂ ಲಸಿಕೆಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿವೆ. ನಮ್ಮ ಈ ಅಧ್ಯಯನದ ವರದಿಯನ್ನು ಇನ್ನೂ ಪ್ರಕಟಪಡಿಸಲಾಗಿಲ್ಲ (ಪೂರ್ವಭಾವಿ ಮುದ್ರಣ). ಹೀಗಾಗಿ ಇದನ್ನು ಕ್ಲಿನಿಕಲ್ ಪ್ರಯೋಗಕ್ಕೆ ಮಾರ್ಗದರ್ಶನವಾಗಿ ಬಳಸಬಾರದು ಎಂದು COVAT ತಿಳಿಸಿದೆ.

ಕೋವ್ಯಾಟ್‌ ಬಗ್ಗೆ ಒಂದಿಷ್ಟು..

ಕೋವ್ಯಾಟ್​ - ಇದು ಲಸಿಕಾ ತಜ್ಞರ ತಂಡವಾಗಿದ್ದು, ಈ ಅಧ್ಯಯನವನ್ನು ಡಾ. ಅವಧೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಡಾ.ಸಂಜೀವ್ ರತ್ನಾಕರ್, ಡಾ. ರಿತು ಸಿಂಗ್​, ಡಾ.ನಾಗೇಂದ್ರ ಕುಮಾರ್ ಸಿಂಗ್, ಡಾ.ಅರವಿಂದ್ ಗುಪ್ತಾ, ಮತ್ತು ಡಾ. ಅರವಿಂದ್ ಶರ್ಮಾರನ್ನೊಳಗೊಂಡ ವೈದ್ಯರ ಗುಂಪು ನಡೆಸಿದೆ.

ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ - ಕೋವಿಡ್ 19 ವಿರುದ್ಧ ಹೋರಾಡುವ ದೇಶೀಯ ಲಸಿಕೆಗಳಾಗಿವೆ. ಕೋವಾಕ್ಸಿನ್​​ ಲಸಿಕೆಯನ್ನು ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಸಂಸ್ಥೆ ಹಾಗೂ ಕೋವಿಶೀಲ್ಡ್ ವ್ಯಾಕ್ಸಿನ್​ ಅನ್ನು ಪುಣೆ ಮೂಲದ ಸೀರಮ್​ ಸಂಸ್ಥೆ ಅಭಿವೃದ್ಧಿಪಡಿಸಿವೆ. ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳನ್ನು ನೀಡಲಾಗುತ್ತಿದ್ದು, 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್​​ ನೀಡಲು ಭಾರತ್​ ಬಯೋಟೆಕ್​ ಇದೀಗ ಪ್ರಯೋಗ ಆರಂಭಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.