ETV Bharat / bharat

ಗುಡ್​ನ್ಯೂಸ್ ​: ಕೋವಿಶೀಲ್ಡ್​, ಕೋವ್ಯಾಕ್ಸಿನ್​​​​​ ಬೂಸ್ಟರ್ ಡೋಸ್​​​​ ದರದಲ್ಲಿ ಇಳಿಕೆ.. ಪ್ರತಿ ಡೋಸ್​ಗೆ 225 ರೂ. ಮಾತ್ರ - ಕೋವಿಡ್ ಬೂಸ್ಟರ್ ಡೋಸ್​ ಬೆಲೆ

ದೇಶದಲ್ಲಿರುವ ಈ ವಯೋಮಾನದ ಎಲ್ಲರೂ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಈ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರ ಈವರೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ 2.4 ಕೋಟಿಗೂ ಅಧಿಕ ಜನರಿಗೆ ಬೂಸ್ಟರ್ ಡೋಸ್ ನೀಡಿದೆ..

Covid vaccine booster shots
Covid vaccine booster shots
author img

By

Published : Apr 9, 2022, 4:12 PM IST

ಹೈದರಾಬಾದ್ ​: ಭಾರತದಲ್ಲಿ ನಾಳೆಯಿಂದ ಎಲ್ಲ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಅದಕ್ಕಾಗಿ ಸೀರಂ ಇನ್​​​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಒ ಆದರ್ ಪೂನಾವಾಲ್​ ಪ್ರತಿ ಬೂಸ್ಟರ್ ಲಸಿಕೆಗೆ 600 ರೂ. ದರ ನಿಗದಿ ಮಾಡಿದ್ದರು.

ಆದರೆ, ಇದೀಗ ಇದರ ಬೆಲೆಯಲ್ಲಿ ಗಣನೀಯವಾದ ಇಳಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಮಹತ್ವದ ಮಾತುಕತೆ ಬಳಿಕ ಕೋವಿಶೀಲ್ಡ್ ಬೂಸ್ಟರ್ ಬೆಲೆಯಲ್ಲಿ 600ರ ಬದಲಾಗಿ 225 ರೂ. ಎಂದು ಘೋಷಿಸಲಾಗಿದೆ. ಖುದ್ದಾಗಿ ಆದರ್​ ಪೂನಾವಾಲ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  • We are pleased to announce that after discussion with the Central Government, SII has decided to revise the price of COVISHIELD vaccine for private hospitals from Rs.600 to Rs 225 per dose. We once again commend this decision from the Centre to open precautionary dose to all 18+.

    — Adar Poonawalla (@adarpoonawalla) April 9, 2022 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ಕೋವ್ಯಾಕ್ಸಿನ್​ ಬೆಲೆಯಲ್ಲೂ ಇಳಿಕೆ ಮಾಡಲಾಗಿದೆ. 1200ರ ಬದಲಾಗಿ ಪ್ರತಿ ಡೋಸ್​ಗೆ 225 ರೂ.ಗೆ ಮಾರಾಟ ನಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತ್ ಬಯೋಟೆಕ್​​ ಸಂಸ್ಥೆಯ ಮುಖ್ಯಸ್ಥೆ ಸುಚಿತ್ರಾ ಎಲ್ಲಾ ಟ್ವೀಟ್ ಮಾಡಿದ್ದಾರೆ. ನಾಳೆಯಿಂದ ದೇಶದ ಎಲ್ಲ ಖಾಸಗಿ ಆಸ್ಪತ್ರೆಯ ಕೋವಿಡ್ ಸೆಂಟರ್​ಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಅದಕ್ಕಾಗಿ ಕೋವಿಡ್​ನ 2ನೇ ಡೋಸ್ ಪಡೆದು 9 ತಿಂಗಳ ನಂತರ ಈ ಲಸಿಕೆ ಪಡೆದುಕೊಳ್ಳಬೇಕಾಗಿದೆ.

  • Announcing #CovaxinPricing .
    We welcome the decision to make available precautionary dose for all adults. In consultation with the Central Government, we have decided to revise the price of #COVAXIN from Rs 1200 to Rs 225 per dose, for #privatehospitals.🇮🇳💉💉💉😷

    — Suchitra Ella (@SuchitraElla) April 9, 2022 " class="align-text-top noRightClick twitterSection" data=" ">

.

ಕೇಂದ್ರದ ಮಹತ್ವದ ಸೂಚನೆ : ನಾಳೆಯಿಂದ ಬೂಸ್ಟರ್ ಡೋಸ್​ ಪಡೆದುಕೊಳ್ಳುವ ಅರ್ಹ ಫಲಾನುಭವಿಗಳಿಗೆ ಖಾಸಗಿ ಲಸಿಕಾ ಕೇಂದ್ರಗಳು​ ಸೇವಾ ಶುಲ್ಕವನ್ನ 150ರೂಪಾಯಿಗಿಂತಲೂ ಹೆಚ್ಚಿಗೆ ಪಡೆದುಕೊಳ್ಳದಂತೆ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷಕ್ಕಿಂತಲೂ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಲಭ್ಯವಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಭಾನುವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್​: ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ

ದೇಶದಲ್ಲಿರುವ ಈ ವಯೋಮಾನದ ಎಲ್ಲರೂ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಈ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರ ಈವರೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ 2.4 ಕೋಟಿಗೂ ಅಧಿಕ ಜನರಿಗೆ ಬೂಸ್ಟರ್ ಡೋಸ್ ನೀಡಿದೆ.

ಹಣ ನೀಡಿ ಲಸಿಕೆ ಪಡೆಯಿರಿ : ದೇಶದಲ್ಲಿ 15 ವರ್ಷ ಮೇಲ್ಪಟ್ಟ ಶೇ.96ರಷ್ಟು ಜನರು ಕೋವಿಡ್​ನ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ 180 ಕೋಟಿಗೂ ಅಧಿಕ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಇನ್ನು ಈ ಬೂಸ್ಟರ್‌ ಲಸಿಕೆಗೆ ಜನರು ಹಣ ಪಾವತಿ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.