ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದಲ್ಲಿ ಈಗಾಗಲೇ ಎರಡು ಲಸಿಕೆಗಳು ಅಭಿವೃದ್ಧಿಗೊಂಡಿದ್ದು, ಸರ್ಕಾರಿ ಸಿಬ್ಬಂದಿಗೆ ನೀಡುವ ಕಾರ್ಯ ಕೂಡ ಆರಂಭಗೊಂಡಿದೆ. ಇದರ ಮಧ್ಯೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ.
ಕೊರೊನಾ ಲಸಿಕೆಗಳು ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದ್ದು, ಅದಕ್ಕಾಗಿ ಬೆಲೆ ನಿಗದಿ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳು ತಿಳಿಸಿರುವ ಪ್ರಕಾರ ಪ್ರತಿ ಡೋಸ್ ಬೆಲೆ 150 ರೂ. ಆಗಿದ್ದು, ಜತೆಗೆ 100 ರೂ ಸೇವಾ ಶುಲ್ಕ ನೀಡಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಲಭ್ಯವಾಗಲಿದೆ.
ಇದನ್ನೂ ಓದಿ: ಪೊಲೀಸರೊಂದಿಗೆ 11 ವರ್ಷ ಸೇವೆ: ಶ್ವಾನಕ್ಕೆ ಅದ್ಧೂರಿ ಬೀಳ್ಕೊಡುಗೆ
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಖಾಸಗಿ ಸೌಲಭ್ಯಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಹಣಕಾಸಿನ ಸೀಲಿಂಗ್ಗೆ ಒಳಪಡಿಸಲಾಗುತ್ತದೆ. ಆದರೆ ಸರ್ಕಾರಿ ಸಿಬ್ಬಂದಿಗಳಿಗೆ ವ್ಯಾಕ್ಸಿನೇಷನ್ ಸಂಪೂರ್ಣವಾಗಿ ಉಚಿತವಾಗಲಿದ್ದು, ಇದರ ವೆಚ್ಚವನ್ನ ಕೇಂದ್ರ ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ ಮೊದಲ ಹಂತದಲ್ಲಿ ಶೇ 77ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇ 70ರಷ್ಟು ಸರ್ಕಾರಿ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ ಎಂದಿದ್ದಾರೆ.
ಮಾರ್ಚ್ 1ರಿಂದ ದೇಶಾದ್ಯಂತ ಮೂರನೇ ಹಂತದ ಕೋವಿಡ್ ವ್ಯಾಕ್ಸಿನ್ ನೀಡಲು ಶುರು ಮಾಡಲಾಗುವುದು ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಕುವ ಸಾಧ್ಯತೆ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗುಜರಾತ್ ಡೆಪ್ಯುಟಿ ಸಿಎಂ ನಿತಿನ್ ಪಟೇಲ್ ಪ್ರತಿ ಡೋಸ್ಗೆ 250 ರೂ. ನಿಗದಿ ಮಾಡಲಾಗಿದೆ ಎಂದಿದ್ದಾರೆ. ಪ್ರತಿ ವ್ಯಕ್ತಿ ಕೋವಿಡ್ ವ್ಯಾಕ್ಸಿನ್ ಎರಡು ಸಲ ತೆಗೆದುಕೊಳ್ಳಬೇಕಾಗಿದೆ.