ETV Bharat / bharat

ಪಾಕೆಟ್​ ವೆಂಟಿಲೇಟರ್​ ಆವಿಷ್ಕರಿಸಿದ ವಿಜ್ಞಾನಿ.​.. ಹೀಗಿದೆ ಇದರ ಪ್ರಯೋಜನ!

ಸೋಂಕಿನಿಂದ ಚೇತರಿಸಿಕೊಂಡ ನಂತರ ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಪಾಕೆಟ್ ವೆಂಟಿಲೇಟರ್ ಅನ್ವೇಷಿಸಿದ್ದೇನೆ ಎಂದು ರಮೇಂದ್ರ ಲಾಲ್​​ ಮುಖರ್ಜಿ ಹೇಳಿದ್ದಾರೆ.

Covid prompts West Bengal scientist to invent pocket ventilator
ಪಾಕೆಟ್​ ವೆಂಟಿಲೇಟರ್​.. ಜೊತೆಯಲ್ಲೇ ಕೊಂಡೊಯ್ಯಬಹುದು
author img

By

Published : Jun 13, 2021, 12:39 PM IST

ಕೋಲ್ಕತಾ, ಪಶ್ಚಿಮ ಬಂಗಾಳ: ಕೋವಿಡ್ ಎರಡನೇ ಅಲೆಯಿಂದಾಗಿ ಏಕಾಏಕಿ ಆಮ್ಲಜನಕ ಮತ್ತು ವೆಂಟಿಲೇಟರ್​​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ನಿವಾರಿಸುವ ಸಲುವಾಗಿ ವಿಜ್ಞಾನಿಗಳು ಪಾಕೆಟ್ ವೆಂಟಿಲೇಟರ್ ಸಂಶೋಧಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾ. ರಮೇಂದ್ರ ಲಾಲ್ ಮುಖರ್ಜಿ ಎಂಬುವರು ಈ ಪಾಕೆಟ್​ ವೆಂಟಿಲೇಟರ್​​ ಸಂಶೋಧಿಸಿದ್ದು, ಅತ್ಯಂತ ಸುಲಭವಾಗಿ ಬೇಕಾದ ಸ್ಥಳಗಳಿಗೆ ಕೊಂಡೊಯ್ಯಬಹುದಾಗಿದೆ. ಸೋಂಕಿನ ವೇಳೆ ಉಸಿರಾಟ ತೊಂದರೆಯುಂಟಾದಾಗ ಜೀವ ಉಳಿಸುವಲ್ಲಿ ಇದು ಸಹಕಾರಿಯಾಗಿದೆ. ಕೈಗೆಟಕುವ ಬೆಲೆಯಲ್ಲಿ ಈ ಸಾಧನ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ರಮೇಂದ್ರ ಲಾಲ್ ಮುಖರ್ಜಿ, ನನಗೆ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದ್ದೇ ಪಾಕೆಟ್ ವೆಂಟಿಲೇಟರ್​ ಆವಿಷ್ಕರಿಸಲು ಪ್ರೇರೇಪಿಸಿತು ಎಂದಿದ್ದಾರೆ. ನನಗೆ ಕೋವಿಡ್ ಬಂದಾಗ ನನ್ನ ದೇಹದಲ್ಲಿ ಆಮ್ಲಜನಕದ ಸ್ಯಾಚುರೇಷನ್ (ಶುದ್ಧತ್ವ) ಮಟ್ಟವು 88ಕ್ಕಿಂತ ಕಡಿಮೆಯಾಗಿತ್ತು. ತೀವ್ರತರನಾದ ಉಸಿರಾಟ ತೊಂದರೆಯಿತ್ತು. ಅದೃಷ್ಟವಶಾತ್ ನಾನು ಸೋಂಕಿನಿಂದ ಪಾರಾದೆ ಎಂದಿದ್ದಾರೆ.

ಸೋಂಕಿನಿಂದ ಚೇತರಿಸಿಕೊಂಡ ನಂತರ ಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಪಾಕೆಟ್ ವೆಂಟಿಲೇಟರ್ ಅನ್ವೇಷಿಸಿದ್ದೇನೆ ಎಂದು ರಮೇಂದ್ರ ಲಾಲ್​​ ಮುಖರ್ಜಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಪ್ರಸಾದದೊಳಗೆ ಉಗಿದು ಭಕ್ತರಿಗೆ ಹಂಚುತ್ತಿರುವ ಬಾಬಾ

ಪಾಕೆಟ್ ವೆಂಟಿಲೇಟರ್​ನ ವಿನ್ಯಾಸದ ಮೂಲ ಮಾದರಿಯು 20 ದಿನಗಳಲ್ಲಿ ಸಿದ್ಧವಾಗಿದೆ. ಈ ವೆಂಟಿಲೇಟರ್ ಬ್ಯಾಟರಿ ಚಾಲಿತವಾಗಿದ್ದು, ಒಂದು ಗುಂಡಿಯನ್ನು ಒತ್ತುವ ಮೂಲಕ ವೆಂಟಿಲೇಟರ್ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಕೋವಿಡ್ ಪೀಡಿತರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ರಮೇಂದ್ರ ಲಾಲ್​ ಹೇಳಿದ್ದಾರೆ.

ಈ ಪಾಕೆಟ್​ ವೆಂಟಿಲೇಟರ್ ಆವಿಷ್ಕಾರಕ್ಕಾಗಿ ರಮೇಂದ್ರ ಲಾಲ್​ ಪೇಟೆಂಟ್​ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಅವರು, ಸಾಮಾನ್ಯ ಜನರಿಗೆ ಉಪಯೋಗವಾಗುವ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.