ಶ್ರೀಕಾಕುಳಂ (ಆಂಧ್ರಪ್ರದೇಶ): ಕೊರೊನಾದಿಂದ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ತಮ್ಮವರ ಪ್ರಾಣ ಕಣ್ಣಮುಂದೆಯೇ ಹಾರಿಹೋಗಿರುವಂತಹ ಹೃದಯವಿದ್ರಾವಕ ಘಟನೆಗಳು ಸಂಭವಿಸಿವೆ. ಅಂತೆಯೇ ವ್ಯಕ್ತಿಯೊಬ್ಬರು ಕೊರೊನಾಗೆ ತುತ್ತಾಗಿ ತಮ್ಮ ಪತ್ನಿ ಮತ್ತು ಮಕ್ಕಳ ಕಣ್ಣೆದುರೇ ಪ್ರಾಣತೆತ್ತಿರುವ ಘಟನೆ ನಡೆದಿದೆ.
ಅಸಿರಿನಾಯುಡು (44) ಮೃತ ವ್ಯಕ್ತಿ. ಇವರು ವಿಜಯವಾಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ತನ್ನೂರಿಗೆ ಮರಳಿದ್ದರು. ಈ ವೇಳೆಗಾಗಲೇ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು.
ಈ ವೇಳೆ ಕುಸಿದು ಬಿದ್ದ ಅಸಿರಿನಾಯುಡು ಬಳಿ ತೆರಳಲು ಕುಟುಂಬವೂ ಹಿಂಜರಿದಿದೆ. ತಂದೆಯ ಸ್ಥಿತಿ ಕಂಡು ಕುಗ್ಗಿದ ಮಗಳು ಹತ್ತಿರ ತೆರಳಲು ಮುಂದಾದಾಗ ತಾಯಿ ಭಯದಿಂದ ತಡೆದಿದ್ದಾಳೆ. ಆದರೂ ಮನಸ್ಸು ತಡೆಯದ ಮಗಳು ತಂದೆಯ ಬಳಿಗೆ ತೆರಳಿ ನೀರು ಕುಡಿಸಿದ್ದಾಳೆ. ಆದರೆ ನೀರು ಕುಡಿದ ತಕ್ಷಣ ಅಸಿರಿನಾಯುಡು ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ಕುಟುಂಬ ಕಂಗಾಲಾಗಿದ್ದು, ಆಕಂದ್ರನ ಮುಗಿಲುಮುಟ್ಟಿದೆ.