ETV Bharat / bharat

ದೇಶದಲ್ಲಿ ಏರಿಕೆ ಕಾಣುತ್ತಿದೆ ಕೋವಿಡ್​ ಸೋಂಕು: ನಿನ್ನೆಗಿಂತ ಶೇ 30ರಷ್ಟು ಹೆಚ್ಚಳ - ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ದತ್ತಾಂಶ

ದೇಶದಲ್ಲಿ ಕೋವಿಡ್ -19 ಪ್ರಕರಣ ಉಲ್ಬಣಗೊಳ್ಳುತ್ತಿದ್ದು, ವೈರಸ್ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಜನರಿಗೆ ಸರ್ಕಾರ ಮನವಿ ಮಾಡಿದೆ.

Covid infection is increasing in the country; 30 percent increase from yesterday

author img

By

Published : Apr 13, 2023, 11:44 AM IST

ನವದೆಹಲಿ: ದೇಶದಲ್ಲಿ ನಿಧಾನವಾಗಿ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಸೋಂಕಿನ ಉಲ್ಬಣತೆ ಕಾಣಬಹುದಾಗಿದೆ. ಒಂದೇ ದಿನದಲ್ಲಿ 10, 158 ಹೊಸ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ, ಒಂದೇ ದಿನದಲ್ಲಿ ಇದರ ಹೆಚ್ಚಳ ಶೇ 30ರಷ್ಟು ಕಾಣಬಹುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಪ್ರಸ್ತುತ 44,998 ಪ್ರಕರಣಗಳು ಕ್ರಿಯಾಶೀಲವಾಗಿದೆ.

ದೇಶದಲ್ಲಿ ಹೊಸ ಸೋಂಕುಗಳು ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು 4,42,10,127 ದಾಖಲಾಗಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರವು ಶೇ 4.42ರಷ್ಟು ವರದಿಯಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಶೇ 4.02ರಷ್ಟಿದೆ. ಸಕ್ರಿಯ ಪ್ರಕರಣಗಳು ಶೇ 0.10ರಷ್ಟಿದೆ.

ದೇಶದಲ್ಲಿ ಸೋಂಕಿನ ಚೇತರಿಕೆ ಪ್ರಮಾಣವು ಶೇ 98.71ರಷ್ಟು ದಾಖಲಾಗಿದೆ. ಕೋವಿಡ್​​ ಪ್ರಕರಣದ ಸಾವಿನ ಪ್ರಮಾಣವು ಶೇ 1.19ರಷ್ಟು ದಾಖಲಾಗಿದೆ. ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ಹಂತವನ್ನು ಪ್ರವೇಶಿಸಿದ್ದು, ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಬಳಿಕ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಸೋಂಕಿನ ಹೆಚ್ಚಳ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಹೊಸ ಕೋವಿಡ್​ ಪ್ರಕರಣಗಳು ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 1, 149 ಪ್ರಕರಣಗಳು ದಾಖಲಾಗಿದೆ. ದೆಹಲಿಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣ 3,347 ಆಗಿದ್ದು, ಪಾಸಿಟಿವಿಟಿ ದರ ಶೇ 23.8 ರಷ್ಟಿದೆ. ದೆಹಲಿಯಲ್ಲಿ ಒಂದು ಸಾವು ಪ್ರಕರಣ ವರದಯಾಗಿದೆ. ಆದರೆ ಸಾವಿಗೆ ಪ್ರಾಥಮಿಕ ಕಾರಣ ಕೋವಿಡ್​ ಸೋಂಕು ಆಗಿಲ್ಲ. ದೆಹಲಿ ಆರೋಗ್ಯ ಇಲಾಖೆ ಅನುಸಾರ 677 ಕೋವಿಡ್​ ರೋಗಿಗಳು ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಚೇತರಿಕೆ ಕಂಡಿದ್ದು, ರಾಜ್ಯದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ 19, 87, 357 ಆಗಿದೆ.

ಐಎಂಎ ಸೂಚನೆ: ದೇಶದಲ್ಲಿ ಕೋವಿಡ್​ ಸೋಂಕು ಏರಿಕೆ ಕಾಣುತ್ತಿರುವ ಹಿನ್ನೆಲೆ ಜನರು ಯಾವುದೇ ಆತಂಕಕ್ಕೆ ಒಳಗಾಗದಂತೆ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ತಿಳಿಸಿದೆ. ಇದೇ ವೇಳೆ ಶುಚಿತ್ವಕ್ಕೆ ಮತ್ತು ಕೋವಿಡ್​ ನಿಯಮವಾಳಿಗಳಿಗೆ ಒತ್ತು ನೀಡುವಂತೆ ತಿಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಐಎಂಎ, ಆತಂಕ ಬೇಡ, ಸೋಂಕು ಏರಿಕೆಗೆ ಮುಂಚೆ ಸೋಂಕಿನ ನಿಯಂತ್ರಣ ಮಾಡಲಾಗುವುದು. ನಿಮ್ಮ ಬೆಂಬಲದೊಂದಿಗೆ ನಾವು ಮಾಡುತ್ತೇವೆ. ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶುಚಿತ್ವ ನಿರ್ವಹಣೆ ಮಾಡಿ ಎಂದು ತಿಳಿಸಿದೆ.

ಉಪತಳಿ ಕಾರಣ: ದೇಶದಲ್ಲಿ ಕೋವಿಡ್​ ಪ್ರಕರಣಗಳ ಹೆಚ್ಚಳಕ್ಕೆ ಕೋವಿಡ್​ ಉಪತಳಿಯಾದ XBB.1.16 ಕಾರಣವಾಗಿದೆ ಎಂದು ವೈರಾಣು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ತಿಳಿಸಿದ್ದಾರೆ. ಸೋಂಕಿನ ಹೆಚ್ಚಳ ಹಿನ್ನಲೆ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು, ಹಿರಿಯ ನಾಗರಿಕರು, ಗರ್ಭಿಣಿರು, ದೀರ್ಘಾವಧಿ ಸಮಸ್ಯೆ ಹೊಂದಿರುವವರು ಹೆಚ್ಚಿನ ಕಾಳಜಿವಹಿಸುವಂತೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೋವಿಡ್ -19 ಪ್ರಕರಣ ಉಲ್ಬಣಗೊಳ್ಳುತ್ತಿದ್ದು, ವೈರಸ್ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಜನರಿಗೆ ಸರ್ಕಾರ ಮನವಿ ಮಾಡಿದೆ. ಪ್ರಕರಣಗಳ ಹೆಚ್ಚಳವು ಹೊಸ ಕೋವಿಡ್ ರೂಪಾಂತರಕ್ಕೆ ಕಾರಣವಾಗಿರಬಹುದು. ಹೆಚ್ಚಿನ ಅಪಾಯದ ಗುಂಪುಗಳಲ್ಲಿರುವ ಜನರು ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅತ್ಯಗತ್ಯ. ವೈರಸ್ ಹರಡುವುದನ್ನು ನಿಯಂತ್ರಿಸಲು ಶುಚಿತ್ವ ಕಾಪಾಡುವುದು ಮತ್ತು ಕೋವಿಡ್​ ಮಾರ್ಗಸೂಚಿ ಅನುಸರಿಸುವುದು ಬಹಳ ಮುಖ್ಯ ಎಂದಿದೆ.

ಇದನ್ನೂ ಓದಿ: ದೀರ್ಘಾವಧಿ ಕೋವಿಡ್​​ಗೆ ಆಯುರ್ವೇದ ಚಿಕಿತ್ಸೆ ಉತ್ತಮ ಪರಿಹಾರವಾಗಬಲ್ಲದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.