ETV Bharat / bharat

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವೇ ಮೂರನೇ ಅಲೆ ಇರಬಹುದು: ತಜ್ಞರು - ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್

ಪ್ರಸ್ತುತವಾಗಿ ಭಾರತದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಕೇರಳದ ಪಾಲು ಶೇಕಡಾ 50ರಷ್ಟಿದೆ. ಮಾರ್ಚ್ 10ರಿಂದ ಆಗಸ್ಟ್ 10ರವರೆಗೆ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಶೇಕಡಾ 233ರಷ್ಟು ಹೆಚ್ಚಳವಾಗಿದೆ .

Covid increase in Kerala and Maharashtra could be the beginning of a third wave: Experts
ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವೇ ಮೂರನೇ ಅಲೆ ಇರಬಹುದು: ತಜ್ಞರ ಅಭಿಪ್ರಾಯ
author img

By

Published : Aug 13, 2021, 11:02 AM IST

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಜಾಸ್ತಿಯಾಗುತ್ತಿದ್ದು, ಇದು ಕೋವಿಡ್ ಮೂರನೇ ಅಲೆಯ ಆರಂಭ ಇರಬಹುದು ಎಂದು ತಜ್ಞರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ ರೂಪಾಂತರ ವೈರಸ್​ನ ಸೋಂಕು ವೇಗವಾಗಿ ಹರಡುತ್ತಿರುವುದು ತಜ್ಞರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಇದು ಮೂರನೇ ಅಲೆಯ ಸಾಧ್ಯತೆ ಇದ್ದಿರಬಹುದೆಂದು ಆರೋಗ್ಯ ತಜ್ಞೆ ಡಾ.ಸುನೀಲಾ ಗರ್ಗ್ ಮಾಹಿತಿ ನೀಡಿದರು.

ಪ್ರಸ್ತುತ ಭಾರತದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಕೇರಳದ ಪಾಲು ಶೇಕಡಾ 50ರಷ್ಟಿದೆ. ಮಾರ್ಚ್ 10ರಿಂದ ಆಗಸ್ಟ್ 10ರವರೆಗೆ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಶೇಕಡಾ 233ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳುತ್ತಾರೆ.

ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಮೆಡಿಸಿನ್ (Indian Association of Preventive and Social Medicine -IAPSM)ನ ಅಧ್ಯಕ್ಷರೂ ಆಗಿರುವ ಸುನೀಲಾ ಗರ್ಗ್ ಕೇರಳದಲ್ಲಿ ವ್ಯಾಕ್ಸಿನೇಷನ್ ಪ್ರಗತಿ ಇಲ್ಲದಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಕೋವಿಡ್ ಕಂಡುಬಂದ 95ರಷ್ಟು ಮಂದಿಯಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಅವರನ್ನ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಇದು ಕೋವಿಡ್ ಸೋಂಕು ಮತ್ತಷ್ಟು ಹರಡಲು ಕಾರಣವಾಗುತ್ತದೆ ಎಂದು ಸುನೀಲಾ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಕೂಡಾ ಜನರು ನಿರಾಸಕ್ತಿ ತೋರುತ್ತಿದ್ದು, ಓಣಂ ಹಬ್ಬ ಈಗಾಗಲೇ ಆರಂಭವಾಗಿದ್ದು, ಹೆಚ್ಚಿನ ಮುಂಜಾಗರೂಕತೆ ಅಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಅಂಕಿಅಂಶಗಳ ಪ್ರಕಾರ, ಆಗಸ್ಟ್ 11ರಂದು ಕೇರಳದಲ್ಲಿ 23,500 ಪ್ರಕರಣಗಳು, ಆಗಸ್ಟ್ 10ರಂದು 21,119 ಪ್ರಕರಣಗಳು, ಆಗಸ್ಟ್ 9ರಂದು 13,049 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ ಪತ್ತೆಯಾದ ಪ್ರಕರಣಗಳು ಭಾರತದಲ್ಲಿ ಪತ್ತೆಯಾದ ಪ್ರಕರಣಗಳ ಅರ್ಧದಷ್ಟು ಅಥವಾ ಅರ್ಧಕ್ಕಿಂತ ಹೆಚ್ಚಿವೆ.

ಮಹಾರಾಷ್ಟ್ರದಲ್ಲಿ ಗುರುವಾರ 6,388 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 63,75,390ಕ್ಕೆ ಏರಿದೆ. ಈವರೆಗೆ 1,34,572 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ಗುರುವಾರ 21 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 160 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36 ಲಕ್ಷಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಜಮ್ಮುಕಾಶ್ಮೀರದ ಕುಲ್ಗಾಮ್‌ನಲ್ಲಿ​ ಎನ್​ಕೌಂಟರ್: ಓರ್ವ ಉಗ್ರ ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.