ETV Bharat / bharat

'ಕೋವಿಡ್‌ ಹೊಸ ತಳಿಗಳು ಬರುತ್ತಲೇ ಇರುತ್ತವೆ, ಆತಂಕ ಬೇಡ'

author img

By

Published : Apr 11, 2022, 4:32 PM IST

ಭಾರತದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ನ ಹೊಸ ತಳಿ ಅಷ್ಟೊಂದು ವೇಗವಾಗಿ ಹರಡುವುದಿಲ್ಲ ಎಂದು ರಾಷ್ಟ್ರೀಯ ರೋಗನಿರೋಧಕ ಶಕ್ತಿಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಎನ್​.ಕೆ.ಆರೋರಾ ಹೇಳಿದ್ದಾರೆ.

ಕೋವಿಡ್​-19ರ ರೂಪಾಂತರಿ ಸೋಂಕುಗಳ ಆಘಾತ ಪಡುವ ಅವಶ್ಯಕತೆ ಇಲ್ಲ

ನವದೆಹಲಿ: ಕೋವಿಡ್​-19ರ ರೂಪಾಂತರಿ ಸೋಂಕುಗಳು ಸಂಭವಿಸುತ್ತಲೇ ಇರುತ್ತವೆ. ಅದರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಎನ್​.ಕೆ.ಆರೋರಾ ತಿಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ ಕೋವಿಡ್​ನ​ ಹೊಸ ತಳಿ ಎಕ್ಸ್​​ಇ ಪತ್ತೆಯಾದ ಬೆನ್ನಲ್ಲೆ ಅವರು ಪ್ರತಿಕ್ರಿಯಿಸಿದರು.

ಒಮಿಕ್ರಾನ್​ನ ಹೊಸ ತಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಪತ್ತೆಯಾದ ಎಕ್ಸ್​​ಇ ಎಕ್ಸ್​​ ಸರಣಿಯ ರೂಪಾಂತರಿಯಾಗಿದೆ. ಇಂತಹ ತಳಿಗಳು ಹುಟ್ಟುತ್ತಿರುತ್ತವೆ. ಜನರು ಆತಂಕಪಡುವ ಅಗತ್ಯ ಇಲ್ಲ. ಭಾರತದಲ್ಲಿ ಇದುವರೆಗೆ ದಾಖಲಾದ ಮಾಹಿತಿ ಪ್ರಕಾರ, ಈ ತಳಿ ಅಷ್ಟೊಂದು ವೇಗವಾಗಿ ಹರಡದು. ಎಕ್ಸ್​​ಇ ತಳಿಯು ಮೊದಲ ಹಂತದ ಪರೀಕ್ಷೆಯ ಭಾಗವಾಗಿದೆ. ಒಂದೇ ಪರೀಕ್ಷೆಯಿಂದ ಹೊಸ ತಳಿ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ ಎಂದರು. ಕಳೆದ ತಿಂಗಳು ಮುಂಬೈನಿಂದ ಗುಜರಾತ್​​ನ ವಡೋದರಾಗೆ ಪ್ರಯಾಣಿಸಿದ್ದ 67 ವರ್ಷದ ವ್ಯಕ್ತಿಯಲ್ಲಿ ಇತ್ತೀಚೆಗೆ ಎಕ್ಸ್​​ಇ ಸೋಂಕು ಪತ್ತೆಯಾಗಿತ್ತು.

ಇದನ್ನೂ ಓದಿ: ವರ್ಗಾವಣೆಗೆ ಜೆಇ 'ವಿಕೃತ' ಬೇಡಿಕೆ!: ಬೆಂಕಿ ಹಚ್ಚಿಕೊಂಡು ಲೈನ್​ಮ್ಯಾನ್ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.