ಮುಂಬೈ(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್ಗೆ ಭಾರತದಲ್ಲಿ ಎರಡು ಲಸಿಕೆ ಅಭಿವೃದ್ಧಿ ಮಾಡಲಾಗಿದ್ದು, ಈಗಾಗಲೇ ದೇಶದಲ್ಲಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಅಂತೆಯೇ ನೆರೆಯ ಅಫ್ಘಾನಿಸ್ತಾನಕ್ಕೆ ಇಂದು ಉಚಿತವಾಗಿ ಕೋವಿಡ್ ಲಸಿಕೆ ರಫ್ತು ಮಾಡಿದೆ.
ಆಯಾ ದೇಶಗಳ ಅಗತ್ಯಕ್ಕೆ ಅನುಗುಣವಾಗಿ ವ್ಯಾಕ್ಸಿನ್ ನೀಡುತ್ತಿದ್ದು, ಈಗಾಗಲೇ ಸುಮಾರು 15 ದೇಶಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಲಾಗಿದೆ. ಅಂತೆಯೇ ಇಂದು ಅಫ್ಘಾನಿಸ್ತಾನಕ್ಕೆ ವ್ಯಾಕ್ಸಿನ್ ಕಳುಹಿಸಲಾಗಿದೆ.
ಮುಂಬೈನಿಂದ ವ್ಯಾಕ್ಸಿನ್ ಹೊತ್ತ ಏರ್ ಇಂಡಿಯಾ ವಿಮಾನವು ದೆಹಲಿ ಮಾರ್ಗವಾಗಿ ಕಾಬೂಲ್ ತಲುಪಲಿದೆ.