ETV Bharat / bharat

ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತ ಕೋವಿಡ್​ ಲಸಿಕೆ: ಹರ್ಷವರ್ಧನ್

author img

By

Published : Jan 2, 2021, 1:12 PM IST

Updated : Jan 2, 2021, 1:30 PM IST

ಗುರು ತೇಜ್ ಬಹದ್ದೂರ್​ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆಯ ಡ್ರೈ ರನ್​​ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್​, ದೆಹಲಿಗೆ ಮಾತ್ರವಲ್ಲ, ಭಾರತದ ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತವಾಗಿ ಸಿಗಲಿದೆ ಎಂದರು..

Health Minister
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

ನವದೆಹಲಿ : ಕೊರೊನಾ ಲಸಿಕೆ ಭಾರತಕ್ಕೆ ಬರುತ್ತಿದ್ದಂತೆಯೇ ಇಡೀ ರಾಷ್ಟ್ರಕ್ಕೆ ಉಚಿತವಾಗಿ ಲಸಿಕೆ ಸಿಗುವುದು ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತವಾಗಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

ಲಸಿಕೆ ನೀಡುವ ವೇಳೆ ಎದುರಾಗುವ ಸಮಸ್ಯೆಗಳನ್ನು ಗುರುತಿಸುವ ಸಲುವಾಗಿ ದೇಶಾದಾದ್ಯಂತ ಇಂದಿನಿಂದ ಕೋವಿಡ್​ ಲಸಿಕೆಯ ಡ್ರೈ ರನ್ (ತಾಲೀಮು) ಆರಂಭಗೊಂಡಿದೆ. ದೆಹಲಿಯ ದರಿಯಾಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರ, ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮತ್ತು ವೆಂಕಟೇಶ್ವರ ಆಸ್ಪತ್ರೆಯಲ್ಲಿ ತಾಲೀಮು ನಡೆಯುತ್ತಿದೆ.

ಇದನ್ನೂ ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್​ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!

ಗುರು ತೇಜ್ ಬಹದ್ದೂರ್​ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಸಿಕೆಯ ಡ್ರೈ ರನ್​​ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್​, ದೆಹಲಿಗೆ ಮಾತ್ರವಲ್ಲ, ಭಾರತದ ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದರು.

In 1st phase of #COVID19 vaccination, free vaccine shall be provided across the nation to most prioritised beneficiaries that incl 1 cr healthcare & 2 cr frontline workers, tweets Union Health Minister Dr Harsh Vardhan https://t.co/KYKHW5SAzz

— ANI (@ANI) January 2, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿರುವ ಅವರು ಮೊದಲ ಹಂತದ ವ್ಯಾಕ್ಸಿನೇಷನ್​ ಪ್ರಕ್ರಿಯೆಯಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿವಿಧ ಕ್ಷೇತ್ರಗಳ ಎರಡು ಕೋಟಿ ಮಂದಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನವದೆಹಲಿ : ಕೊರೊನಾ ಲಸಿಕೆ ಭಾರತಕ್ಕೆ ಬರುತ್ತಿದ್ದಂತೆಯೇ ಇಡೀ ರಾಷ್ಟ್ರಕ್ಕೆ ಉಚಿತವಾಗಿ ಲಸಿಕೆ ಸಿಗುವುದು ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಮಾತ್ರ ಉಚಿತವಾಗಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

ಲಸಿಕೆ ನೀಡುವ ವೇಳೆ ಎದುರಾಗುವ ಸಮಸ್ಯೆಗಳನ್ನು ಗುರುತಿಸುವ ಸಲುವಾಗಿ ದೇಶಾದಾದ್ಯಂತ ಇಂದಿನಿಂದ ಕೋವಿಡ್​ ಲಸಿಕೆಯ ಡ್ರೈ ರನ್ (ತಾಲೀಮು) ಆರಂಭಗೊಂಡಿದೆ. ದೆಹಲಿಯ ದರಿಯಾಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರ, ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮತ್ತು ವೆಂಕಟೇಶ್ವರ ಆಸ್ಪತ್ರೆಯಲ್ಲಿ ತಾಲೀಮು ನಡೆಯುತ್ತಿದೆ.

ಇದನ್ನೂ ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್​ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!

ಗುರು ತೇಜ್ ಬಹದ್ದೂರ್​ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಸಿಕೆಯ ಡ್ರೈ ರನ್​​ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್​, ದೆಹಲಿಗೆ ಮಾತ್ರವಲ್ಲ, ಭಾರತದ ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದರು.

  • In 1st phase of #COVID19 vaccination, free vaccine shall be provided across the nation to most prioritised beneficiaries that incl 1 cr healthcare & 2 cr frontline workers, tweets Union Health Minister Dr Harsh Vardhan https://t.co/KYKHW5SAzz

    — ANI (@ANI) January 2, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿರುವ ಅವರು ಮೊದಲ ಹಂತದ ವ್ಯಾಕ್ಸಿನೇಷನ್​ ಪ್ರಕ್ರಿಯೆಯಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿವಿಧ ಕ್ಷೇತ್ರಗಳ ಎರಡು ಕೋಟಿ ಮಂದಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Last Updated : Jan 2, 2021, 1:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.