ನವದೆಹಲಿ: ಆಗಸ್ಟ್‌ನಿಂದ ಮಕ್ಕಳಿಗೆ ಕೋವಿಡ್ -19 ಲಸಿಕೆ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡೊವೀಯ ಇಂದು ಹೇಳಿದ್ದಾರೆ.
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಮಕ್ಕಳ ಮೇಲೆ ಭಾರತ್ ಬಯೋಟೆಕ್ ಸಿದ್ಧಪಡಿಸಿದ ಕೊವಾಕ್ಸಿನ್ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನಿರೀಕ್ಷಿಸಲಾಗಿದೆ ಎಂದು ಕಳೆದ ವಾರ ಹೇಳಿದ್ದರು. ಪ್ರಸ್ತುತ, ದೆಹಲಿ ಏಮ್ಸ್‌ನಲ್ಲಿ 2-6 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗಗಳು ನಡೆಯುತ್ತಿವೆ. ಜೂನ್ 22 ರಂದು ರಣದೀಪ್ ಗುಲೇರಿಯಾ, ಕೋವಿಡ್ -19 ಲಸಿಕೆ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಭ್ಯವಾಗಲಿದೆ ಎಂದಿದ್ದರು.
ಮಕ್ಕಳ ಮೇಲೆ ಕೋವಿಡ್ ಲಸಿಕೆ ಪ್ರಯೋಗ ಯಾವಾಗ?
ಜೂನ್ 7 ರಂದು ದೆಹಲಿ ಏಮ್ಸ್‌ನಿಂದ 2 ರಿಂದ 17 ವರ್ಷದೊಳಗಿನ ಮಕ್ಕಳ ಮೇಲೆ ಕೋವಿಡ್ ಲಸಿಕೆಯ ಪ್ರಯೋಗ ಆರಂಭಿಸಿತ್ತು. ಮೇ 12 ರಂದು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ-2, ಹಂತ-3 ಪ್ರಯೋಗಗಳನ್ನು ನಡೆಸಲು ಭಾರತ್ ಬಯೋಟೆಕ್‌ಗೆ ಡಿಸಿಜಿಐ ಅನುಮತಿ ನೀಡಿತ್ತು.
ಇದನ್ನೂ ಓದಿ: ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿ: ಡಾ. ಪ್ರದೀಪ್
ಮಕ್ಕಳನ್ನು ಅವರ ವಯಸ್ಸಿನ ಪ್ರಕಾರ, ವರ್ಗಗಳಾಗಿ ವಿಂಗಡಿಸುವ ಮೂಲಕ ಪ್ರಯೋಗವನ್ನು ನಡೆಸಲಾಗುತ್ತದೆ. ಇದರಲ್ಲಿ ಪ್ರತಿ ವಯಸ್ಸಿನ 175 ಮಕ್ಕಳನ್ನು ಸೇರಿಸಲಾಗಿದೆ. ಎರಡನೇ ಡೋಸ್ ಪೂರ್ಣಗೊಂಡ ನಂತರ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲಾಗುವುದು. ಇದು ಮಕ್ಕಳಿಗೆ ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕೊವಾಕ್ಸಿನ್ ಜೊತೆಗೆ, ಮಕ್ಕಳಿಗೆ ಜೈಡಸ್ ಕ್ಯಾಡಿಲಾ ಲಸಿಕೆಯ ಪ್ರಯೋಗಗಳು ಪ್ರಸ್ತುತ ದೇಶದಲ್ಲಿ ನಡೆಯುತ್ತಿವೆ.