ETV Bharat / bharat

ಸ್ಕೂಟಿ ಮೇಲೆ ಆಕ್ಸಿಜನ್ ತಂದ 'ಪ್ರಾಣದಾತೆ'.. ಯುವತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

author img

By

Published : May 17, 2021, 3:35 PM IST

Updated : May 17, 2021, 8:28 PM IST

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿವೋರ್ವನಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್​ ಪೂರೈಸಿದ ಯುವತಿಯ ಮಾನವೀಯ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Arshi
Arshi

ಶಹಜಹಾನ್​ಪುರ(ಉತ್ತರಪ್ರದೇಶ): ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಸಾವಿರಾರು ಜನರು ತೊಂದರೆಗೊಳಗಾಗುತ್ತಿದ್ದು, ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್​ ಲಭ್ಯವಾಗದೇ ಕೆಲವರು ಉಸಿರು ಚೆಲ್ಲಿದ್ದಾರೆ. ಈ ಮಧ್ಯೆ ಕೆಲವೊಂದು ಮಾನವೀಯ ಘಟನೆಗಳು ಕಂಡುಬರುತ್ತಿವೆ. ಸದ್ಯ ಅಂತಹದೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸ್ಕೂಟಿ ಮೇಲೆ ಆಕ್ಸಿಜನ್ ತಂದ 'ಪ್ರಾಣದಾತೆ'

ಹೌದು, ಶಹಜಹಾನಪುರದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್​ ಸೋಂಕಿಗೊಳಗಾಗಿ ಆಕ್ಸಿಜನ್​ ಲಭ್ಯವಾಗದೇ ತೊಂದರೆಗೊಳಗಾಗಿದ್ದ ರೋಗಿಗೆ ಯುವತಿವೋರ್ವಳು ಸ್ಕೂಟಿ ಮೇಲೆ ಆಕ್ಸಿಜನ್​ ಸಿಲಿಂಡರ್ ತಂದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಶಹಜಹಾನ್​ಪುರದ ಮದಾರ್ಖೆಲ್ ಪ್ರದೇಶದಲ್ಲಿ ವಾಸವಾಗಿರುವ ಅರ್ಷಿ, ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ನಡುವೆ ಕೋವಿಡ್ ಸೋಂಕಿತರಿಗೆ ಆಕ್ಸಿಜನ್​ ಪೂರೈಸುವ ಕೆಲಸ ಮಾಡ್ತಿದ್ದು, ಸ್ವಂತ ಹಣದಲ್ಲೇ ಆಕ್ಸಿಜನ್​​ ತುಂಬಿಸುತ್ತಿದ್ದಾಳೆ.

ಇದನ್ನೂ ಓದಿ: ಮಕ್ಕಳ ಮುಂದೆ ತಾಯಿ ಮೇಲೆ ಕಾಮುಕರಿಂದ ಅತ್ಯಾಚಾರ

ಅರ್ಷಿ ತನ್ನ ಸ್ಕೂಟರ್ ಮೇಲೆ ಆಕ್ಸಿಜನ್ ತಂದು​ ಯುವತಿ ಪೂರೈಸಿದ್ದಾಳೆ. ಈಕೆಯ ತಂದೆ ಕೋವಿಡ್ ಸೋಂಕಿಗೊಳಗಾಗಿ ಆಮ್ಲಜನಕ​ ಸಿಗದೇ ತೊಂದರೆ ಅನುಭವಿಸಿದ್ದರು. ಈ ಸಮಸ್ಯೆ ಇತರರಿಗೂ ಆಗಬಾರದೆಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ಯುವತಿ ಈ ಕೆಲಸ ಮಾಡಲು ಶುರು ಮಾಡಿದಾಗಿನಿಂದಲೂ ಅರ್ಷಿಯನ್ನ ಎಲ್ಲರೂ 'ಆಕ್ಸಿಜನ್​ ವಾಲಿ ಭೇಟಿಯಾ' ಎಂದು ಕರೆಯಲು ಶುರು ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಾವಿರಾರು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ನಿನ್ನೆ 10,682 ಪ್ರಕರಣಗಳು ಪತ್ತೆಯಾಗಿದ್ದರೆ, 311 ಜನರು ಸಾವನ್ನಪ್ಪಿದ್ದಾರೆ.

Last Updated : May 17, 2021, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.