ETV Bharat / bharat

ಫೆಬ್ರವರಿ 6 ರೊಳಗೆ ದೇಶದಲ್ಲಿ ಕೊರೊನಾ 3 ನೇ ಅಲೆ ಉತ್ತುಂಗಕ್ಕೆ: ಅಧ್ಯಯನ - ಮದ್ರಾಸ್​ ಐಐಟಿಯಿಂದ ಕೊರೊನಾ ಅಲೆ ಅಧ್ಯಯನ

ಮುಂದಿನ 14 ದಿನ ಅಂದರೆ ಫೆಬ್ರವರಿ 6 ರೊಳಗೆ ಕೊರೊನಾ ಮೂರನೇ ಅಲೆ ದೇಶದಲ್ಲಿ ಉಚ್ಛಾಯ ಸ್ಥಿತಿಗೆ ತಲುಪಿ, 15ರವರೆಗೂ ಅದು ಮುಂದುವರಿಯಲಿದೆ. ಬಳಿಕ ಅದು ಇಳಿಕೆ ಕಾಣಲಿದೆ.

author img

By

Published : Jan 24, 2022, 9:29 AM IST

ನವದೆಹಲಿ: ದೇಶದಲ್ಲಿ ಕೊರೊನಾ ವ್ಯಾಪಕತೆ ಹೆಚ್ಚಿದ್ದರೂ, 'ಆರ್​' ವ್ಯಾಲ್ಯೂ ತಗ್ಗುತ್ತಿದೆ. ಮುಂದಿನ 15 ದಿನಗಳಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೇರಲಿದೆ ಎಂದು ಮದ್ರಾಸ್​ ಐಐಟಿ ಅಧ್ಯಯನ ತಿಳಿಸಿದೆ.

ದೇಶದಲ್ಲಿ ಆರ್​ ವ್ಯಾಲ್ಯೂ(ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ತಗುಲುತ್ತದೆ ಎಂಬುದನ್ನು ತಿಳಿಸುವ ಪ್ರಮಾಣ) ಕುಸಿತ ಕಾಣುತ್ತಿದೆ. ಜನವರಿ 14 ರಿಂದ ಜನವರಿ 21ರ ಮಧ್ಯೆ 1.57ಕ್ಕೆ ಇಳಿದಿದೆ. ಇದು ಜನವರಿ 7 ರಿಂದ 13 ರ ನಡುವೆ 2.2 ರಷ್ಟಿತ್ತು. ಜನವರಿ 1 ರಿಂದ 6 ನಡುವೆ 4, ಡಿಸೆಂಬರ್​ 25 ರಿಂದ 31 ರ ನಡುವೆ 2.9 ರಷ್ಟು ಇತ್ತು. ಇದರಿಂದ ದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುವ ಲಕ್ಷಣವಿದೆ ಎಂದು ತಿಳಿಸಿದೆ.

ಮುಂಬೈನಲ್ಲಿ ಆರ್​ ದರ 0.67, ದೆಹಲಿಯಲ್ಲಿ 0.98, ಚೆನ್ನೈನಲ್ಲಿ 1.2, ಕೋಲ್ಕತ್ತಾದಲ್ಲಿ 0.56 ಇದೆ. ಇದರಿಂದಾಗಿ ಈ ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆಯ ಪ್ರಭಾವ ಮುಗಿದಿದೆ ಎಂದರ್ಥ. ಈ ಮಧ್ಯೆಯೂ ಆರ್​ ವ್ಯಾಲ್ಯೂ ದರದಲ್ಲಿ ಮುಂದಿರುವ ಚೆನ್ನೈ, ದೆಹಲಿಯಲ್ಲಿ ಇನ್ನೊಂದು ಸುತ್ತಿನ ಕೊರೊನಾ ಆರ್ಭಟ ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

ಮುಂದಿನ 14 ದಿನ ಅಂದರೆ ಫೆಬ್ರವರಿ 6 ರೊಳಗೆ ಕೊರೊನಾ ಮೂರನೇ ಅಲೆ ದೇಶದಲ್ಲಿ ಉಚ್ಛಾಯ ಸ್ಥಿತಿಗೆ ತಲುಪಿ, 15ರವರೆಗೂ ಅದು ಮುಂದುವರಿಯಲಿದೆ. ಬಳಿಕ ಅದು ಇಳಿಕೆ ಕಾಣಲಿದೆ. ಅಲ್ಲದೇ ಈ ಹಿಂದೆಯೇ ದೇಶದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿತ್ತು.

ಇದನ್ನೂ ಓದಿ: ಉತ್ಸವ ಮೂರ್ತಿಯಾಗಿರಲು ತಯಾರಿಲ್ಲ..ಅಧ್ಯಕ್ಷೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸರ್ಕಿಸಿಯನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.