ETV Bharat / bharat

ದೇಶದಲ್ಲಿ 2,796 ಕೋವಿಡ್​​ ಸಾವು ವರದಿ​: ಈವರೆಗೆ ಶೇ.50ರಷ್ಟು ಮಂದಿಗೆ ವ್ಯಾಕ್ಸಿನೇಷನ್​ - India Covid Report

ಈವರೆಗೆ 127.61 ಕೋಟಿಗೂ ಅಧಿಕ ಡೋಸ್ ಕೋವಿಡ್​​ ಲಸಿಕೆ ನೀಡಲಾಗಿದ್ದು, ಭಾರತದ ಶೇ.50ರಷ್ಟು ಅರ್ಹ ಜನರಿಗೆ ವ್ಯಾಕ್ಸಿನೇಷನ್​ ಆಗಿದೆ.

India Covid Report
ಭಾರತದ ಕೋವಿಡ್​ ವರದಿ
author img

By

Published : Dec 5, 2021, 1:55 PM IST

ನವದೆಹಲಿ: ಬಿಹಾರ ಹಾಗೂ ಕೇರಳ ರಾಜ್ಯಗಳು ಬಾಕಿ ಉಳಿಸಿಕೊಂಡಿದ್ದ ಕೋವಿಡ್​ ಸಾವಿನ ದತ್ತಾಂಶ ತಡವಾಗಿ ನೀಡಿದ ಕಾರಣ ನಿನ್ನೆ ದೇಶದಲ್ಲಿ 2,796 ಕೋವಿಡ್​ ಸಾವು ವರದಿಯಾಗಿದೆ. ಒಂದೇ ಬಾರಿಗೆ ಬಿಹಾರ 2,426 ಮಂದಿ ಹಾಗೂ ಕೇರಳ 263 ಮಂದಿ ಸೋಂಕಿತರು ಮೃತಪಟ್ಟಿರುವ ಡೇಟಾ ನೀಡಿದೆ. ಈ ಮೂಲಕ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4,73,326ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 8,895 ಮಂದಿ ಹೊಸ ಕೇಸ್​ಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 3,46,33,255 ಮಂದಿಗೆ ವೈರಸ್​ ಅಂಟಿದೆ. ಆದರೆ ಇವರಲ್ಲಿ 3,40,60,774 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 99,155 ಕೇಸ್​ಗಳು ಸಕ್ರಿಯವಾಗಿದ್ದು, ಆ್ಯಕ್ಟಿವ್​ ಪ್ರಕರಣಗಳ ಪ್ರಮಾಣ ಶೇ.29ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

India Covid Report
ಭಾರತದ ಶೇ.50ರಷ್ಟು ಅರ್ಹ ಮಂದಿಗೆ ವ್ಯಾಕ್ಸಿನೇಷನ್​

ಕೋವಿಡ್​ ವಿರುದ್ಧ ಹೋರಾಡಲು ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿತ್ತು. ಈವರೆಗೆ 127.61 ಕೋಟಿಗೂ ಅಧಿಕ ಡೋಸ್​ ಲಸಿಕೆ ನೀಡಲಾಗಿದ್ದು, ಭಾರತದ ಶೇ.50ರಷ್ಟು ಅರ್ಹ ಮಂದಿಗೆ ವ್ಯಾಕ್ಸಿನೇಷನ್​ ಆಗಿದೆ. ನಿನ್ನೆ ಒಂದೇ ದಿನ ಒಂದು ಕೋಟಿ ಜನರಿಗೆ ವ್ಯಾಕ್ಸಿನ್​ ನೀಡಿ ಭಾರತ ದಾಖಲೆ ಬರೆದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಮೊದಲ ಒಮಿಕ್ರಾನ್​ ಕೇಸ್​ ಪತ್ತೆ: ಭಾರತದಲ್ಲಿ ಒಟ್ಟು 5 ಮಂದಿಗೆ ಹೊಸ ರೂಪಾಂತರಿ

5 ಒಮಿಕ್ರಾನ್​ ಕೇಸ್​

ಡಿಸೆಂಬರ್​ 2ರಂದು ಭಾರತದ ಮೊದಲೆರಡು ಒಮಿಕ್ರಾನ್ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಮೂರು ಮತ್ತು ನಾಲ್ಕನೇ ಕೇಸ್​ ನಿನ್ನೆ ಗುಜರಾತ್​ ಹಾಗೂ ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಇದೀಗ ಐದನೇ ಪ್ರಕರಣ ದೆಹಲಿಯಲ್ಲಿ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.