ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಭಾರತವು ಶನಿವಾರ ರಾತ್ರಿ ಜರ್ಮನಿಯಿಂದ ಬಂದ 120 ವೆಂಟಿಲೇಟರ್‌ಗಳನ್ನು ಸ್ವೀಕರಿಸಿದೆ.
ಮಾನವೀಯ ನೆರವಿನ ಈ ಮಾಹಿತಿಯನ್ನು ಅರಿಂದಮ್ ಬಾಗ್ಚಿಯ ಅವರು ಟ್ವಿಟರ್ನಲ್ಲಿ ಮೂಲಕ ಹಂಚಿಕೊಂಡಿದ್ದಾರೆ. ಈ ಜಾಗತಿಕ ಸಾಂಕ್ರಾಮಿಕವನ್ನು ಬಗೆಹರಿಸಲು ನಮ್ಮ ವಿಶ್ವಾಸಾರ್ಹ ಪಾಲುದಾರ ಮತ್ತು ಸ್ನೇಹಿತ ಜರ್ಮನಿ 120 ವೆಂಟಿಲೇಟರ್‌ಗಳನ್ನು ಉಡುಗೊರೆ ನೀಡಿದೆ. ಜರ್ಮನಿಗೆ ಕೃತಜ್ಞತೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ವಿಮಾನವು 22:00 ಕ್ಕೆ ಇಳಿಯಿತು, ಆಫ್‌ಲೋಡ್ ಬಹುತೇಕ ಮುಗಿದಿದೆ. ನಾಳೆ ಆಸ್ಪತ್ರೆಗಳಿಗೆ ಇವುಗಳನ್ನು ರವಾನೆ ಮಾಡಲಾಗುತ್ತದೆ. ಇನ್ನಷ್ಟು ವೆಂಟಿಲೇಟರ್ಗಳು ಬರಲಿದೆ. ಒಟ್ಟಿಗೆ ನಾವು ಕೊರೊನಾ ವಿರಿದ್ಧ ಹೋರಾಡಿ ಗೆಲ್ಲೋಣ ಎಂದು ವಿದೇಶಾಂಗ ಸಚಿವಾಲಯ ಮತ್ತು ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಟ್ವೀಟ್ ಮಾಡಿದ್ದಾರೆ.
ಈ ನಡುವೆಯೇ 13 ಜರ್ಮನ್ ತಾಂತ್ರಿಕ ಸಿಬ್ಬಂದಿಗಳು ಇವುಗಳ ಸ್ಥಾಪನೆ ಮತ್ತು ತರಬೇತಿಗಾಗಿ ಭಾರತಕ್ಕೆ ಬಂದಿದ್ದಾರೆ. ಹಾಗೆ ರೆಮ್ಡಿಸಿವಿರ್ ಮತ್ತು ಮೊನೊಕ್ಲೋನಲ್ ಲಸಿಕೆ ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ಎಂದು ಮೂಲಗಳು ತಿಳಿಸಿವೆ.