ETV Bharat / bharat

ಮಾಸ್ಕ್​ ಧರಿಸದಿದ್ರೆ ಈ ರಾಜ್ಯದಲ್ಲಿ 500 ರೂ. ದಂಡ

ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಠಿಣವಾಗಿ ಕೊರೊನಾ ವಿರುದ್ದ ಹೋರಾಟ ಮಾಡಲು ಜನರಲ್ಲಿ ಸರ್ಕಾರ ಮನವಿ ಕೂಡ ಮಾಡಿಕೊಂಡಿದೆ.

COVID-19: Chhattisgarh imposes Rs 500 fine for not wearing mask in public places
ಮಾಸ್ಕ್​ ಧರಿಸದಿದ್ರೆ ಈ ರಾಜ್ಯದಲ್ಲಿ 500 ರೂ. ದಂಡ
author img

By

Published : Mar 26, 2021, 3:37 PM IST

ರಾಯ್‌ಪುರ: ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸದವರಿಗೆ 500 ರೂ.ಗಳ ದಂಡ ವಿಧಿಸಲು ಛತ್ತೀಸಗಢ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಈ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮಾಸ್ಕ್​ ಅಥವಾ ಮುಖದ ಹೊದಿಕೆಯನ್ನು ಧರಿಸದಿರುವುದು ಕಂಡುಬಂದರೆ 500 ರೂ. ದಂಡ ವಿಧಿಸಲಾಗುವುದು. ಈ ಮೊದಲು ಉಲ್ಲಂಘನೆಗಾಗಿ 100 ರೂ. ದಂಡ ವಿಧಿಸಲಾಗುತ್ತಿತ್ತು.

ಮಾಸ್ಕ್​ ಹೊರತಾಗಿ ಸಾಮಾಜಿಕ ಅಂತರ ಮತ್ತು ಕೈ ತೊಳೆಯುವುದು ಸೇರಿದಂತೆ ವೈರಸ್​ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಸರ್ಕಾರವು ಜನರಿಗೆ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.