ನವದೆಹಲಿ: ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟ ಮುಂದುವರೆದಿದೆ. ಈಗಾಗಲೇ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಎರಡು ಡೋಸ್ ಜೊತೆಗೆ ಬೂಸ್ಟರ್ ಸಹ ನೀಡಲಾಗಿದೆ. ಇದೀಗ ಭಾನುವಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
-
#LargestVaccineDrive
— Ministry of Health (@MoHFW_INDIA) April 8, 2022 " class="align-text-top noRightClick twitterSection" data="
➡️ Precaution Dose to be now available to 18+ population group from 10th April, 2022, at Private Vaccination Centres.https://t.co/lmnT0NQXyN pic.twitter.com/U49UVJAPUt
">#LargestVaccineDrive
— Ministry of Health (@MoHFW_INDIA) April 8, 2022
➡️ Precaution Dose to be now available to 18+ population group from 10th April, 2022, at Private Vaccination Centres.https://t.co/lmnT0NQXyN pic.twitter.com/U49UVJAPUt#LargestVaccineDrive
— Ministry of Health (@MoHFW_INDIA) April 8, 2022
➡️ Precaution Dose to be now available to 18+ population group from 10th April, 2022, at Private Vaccination Centres.https://t.co/lmnT0NQXyN pic.twitter.com/U49UVJAPUt
ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷಕ್ಕಿಂತಲೂ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಲಭ್ಯವಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ದೇಶದಲ್ಲಿರುವ ಈ ವಯೋಮಾನದ ಎಲ್ಲರೂ ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಈ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರ ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ 2.4 ಕೋಟಿಗೂ ಅಧಿಕ ಜನರಿಗೆ ಬೂಸ್ಟರ್ ಡೋಸ್ ನೀಡಿದೆ.
ಹಣ ನೀಡಿ ಲಸಿಕೆ ಪಡೆಯಿರಿ: ದೇಶದಲ್ಲಿ 15 ವರ್ಷ ಮೇಲ್ಪಟ್ಟ ಶೇ. 96ರಷ್ಟು ಜನರು ಕೋವಿಡ್ನ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ 180 ಕೋಟಿಗೂ ಅಧಿಕ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಇನ್ನು ಈ ಬೂಸ್ಟರ್ ಲಸಿಕೆಗೆ ಜನರು ಹಣ ಪಾವತಿ ಮಾಡಬೇಕಿದೆ.