ನವದೆಹಲಿ: ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ರಾಜ್ಯಗಳಿಗೆ ಹಂಚಿಕೆ ಮಾಡುವ ಡೋಸ್ ದರ ತಗ್ಗಿಸುವುದಾಗಿ ಸಂಸ್ಥೆಯ ಸಿಇಒ ಆದರ್ ಪೂನವಾಲ್ಲಾ ನಿನ್ನೆ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಬೆಲೆಯಲ್ಲೂ ಇಳಿಕೆ ಮಾಡಲಾಗಿದೆ.
ಕೊವ್ಯಾಕ್ಸಿನ್ ಪ್ರತಿ ಡೋಸ್ ಬೆಲೆಯಲ್ಲಿ 600 ರೂ ದಿಂದ 400ರೂಗೆ ಕಡಿತಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ್ ಬಯೋಟೆಕ್ ಮಹತ್ವದ ಆದೇಶ ಹೊರಹಾಕಿದೆ.
-
Covaxin to be available to State governments at a price of Rs 400 per dose: Bharat Biotech pic.twitter.com/gPPFN7mJQo
— ANI (@ANI) April 29, 2021 " class="align-text-top noRightClick twitterSection" data="
">Covaxin to be available to State governments at a price of Rs 400 per dose: Bharat Biotech pic.twitter.com/gPPFN7mJQo
— ANI (@ANI) April 29, 2021Covaxin to be available to State governments at a price of Rs 400 per dose: Bharat Biotech pic.twitter.com/gPPFN7mJQo
— ANI (@ANI) April 29, 2021
ಕಳೆದ ಕೆಲ ದಿನಗಳ ಹಿಂದೆ ಬೆಲೆ ನಿಗದಿ ಮಾಡಿದ್ದ ಕಂಪನಿ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗೆ ನೀಡಲು ನಿರ್ಧರಿಸಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ನೀಡುವ ಬೆಲೆಯಲ್ಲಿ ಪ್ರತಿ ಡೋಸ್ಗೆ 200 ರೂ ಕಡಿಮೆ ಮಾಡಿದೆ.
ಇದನ್ನೂ ಓದಿ: ರಾಜ್ಯಗಳಿಗೆ ಪೂರೈಸುವ ಕೋವಿಶೀಲ್ಡ್ ಲಸಿಕೆ ದರ ಇಳಿಕೆ: ಸೀರಮ್ ಸಿಇಒ ಘೋಷಣೆ
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಮೇ. 1ರಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನ ಶುರುವಾಗುತ್ತಿದ್ದು, ಇದರ ಬೆನ್ನಲ್ಲೇ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ.