ETV Bharat / bharat

ಕೋವ್ಯಾಕ್ಸಿನ್​​ಗಿದೆ 617 ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ: ಡಾ. ಆಂಥೋನಿ ಫೌಸಿ - ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌

ಕೊರೊನಾ ವಿರುದ್ಧ ಬಳಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಗೆ ಸುಮಾರು 617 ರೀತಿಯ ಕೊರೊನಾ ರೂಪಾಂತರಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂದು ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.

Covaxin found to neutralise 617 variant of COVID-19: Expert
ಗುಡ್​ ನ್ಯೂಸ್.. ಕೋವ್ಯಾಕ್ಸಿನ್​​ಗಿದೆ 617 ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ
author img

By

Published : Apr 28, 2021, 11:23 AM IST

ವಾಷಿಂಗ್ಟನ್: ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕೋವ್ಯಾಕ್ಸಿನ್ ಕೊರೊನಾ ವೈರಸ್​ನ ಸುಮಾರು 617 ರೀತಿಯ ರೂಪಾಂತರಗಳನ್ನು ನಾಶಪಡಿಸಬಲ್ಲದು ಎಂದು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಮತ್ತು ಅಮೆರಿಕದ ಸಾಂಕ್ರಾಮಿಕ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.

ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಾವು ಪ್ರತಿದಿನ ಪಡೆಯುತ್ತಿರುವ ಮಾಹಿತಿಯಾಗಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದವನ್ನು ಪರೀಕ್ಷಿಸಿದಾಗ ಈ ಲಸಿಕೆ ಸುಮಾರು 617 ರೂಪಾಂತರಗಳನ್ನು ತಟಸ್ಥಗೊಳಿಸಲು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಭಾರತ ಈಗ ಕಷ್ಟದ ಸಮಯವನ್ನು ಎದುರಿಸುತ್ತಿದೆ. ಈ ಕಷ್ಟದ ಹೊರತಾಗಿ ಕೋವ್ಯಾಕ್ಸಿನ್ ಸಾಮರ್ಥ್ಯದ ಸುದ್ದಿ ಅತ್ಯಂತ ಪ್ರಮುಖ ವಿಷಯ ಎಂದು ಫೌಸಿ ಹೇಳಿದ್ದಾರೆ. ಸಾರ್ಸ್ ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ದೇಹದಲ್ಲಿ ಉತ್ಪಾದನೆ ಮಾಡಲು ರೋಗ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಕೋವ್ಯಾಕ್ಸಿನ್ ಕಾರ್ಯನಿರ್ವಹಿಸುತ್ತದೆ ಎಂದು ನ್ಯೂಯಾರ್ಕ್​ ಟೈಮ್ಸ್ ಮಂಗಳವಾರ ವರದಿ ಮಾಡಿತ್ತು.

ಇದನ್ನೂ ಓದಿ: ಬೆಡ್​ ಸಿಗದೆ ಒಂದೂವರೆ ವರ್ಷದ ಕೋವಿಡ್ ಸೋಂಕಿತ ಹೆಣ್ಣು ಮಗು ಸಾವು

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಅನ್ನು ಜನವರಿ 3ರಂದು ತುರ್ತು ಬಳಕೆಗಾಗಿ ಅನುಮೋದಿಸಲಾಯಿತು. ಪ್ರಾಯೋಗಿಕ ಫಲಿತಾಂಶಗಳ ನಂತರ ಲಸಿಕೆ ಶೇಕಡಾ 78ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿತ್ತು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ವೇತಭವನದ ಹಿರಿಯ ಸಲಹೆಗಾರ ಡಾ. ಆಂಡಿ ಸ್ಲಾವಿಟ್, ಭಾರತದ ಕಷ್ಟದ ಸಮಯದಲ್ಲಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ತಂಡವೊಂದು ಭಾರತಕ್ಕೆ ತೆರಳಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಈ ಸಮಯದಲ್ಲಿ ನಾವು ಭಾರತದ ದೇಶದೊಂದಿಗೆ ನಿಲ್ಲುತ್ತೇವೆ. ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಅಗತ್ಯವಿರುವ ಸಾಮಗ್ರಿ, ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು, ಪಿಪಿಇ ಮತ್ತು ಕಚ್ಚಾ ವಸ್ತುಗಳು ಸೇರಿದಂತೆ ಸಂಪನ್ಮೂಲಗಳು ಮತ್ತು ಸರಬರಾಜುಗಳನ್ನು ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.