ETV Bharat / bharat

ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣ: ಇಂದು ಮಥುರಾದ ನ್ಯಾಯಾಲಯದಲ್ಲಿ ಮಸೀದಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ - Krishna Janmabhoomi case updates

ಕತ್ರಿ ಕೇಶವ್ ದೇವ್ ದೇವಸ್ಥಾನದ ಆವರಣದಲ್ಲಿ 17ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ಇಂದು ನಡೆಯಲಿದೆ.

Court to hear plea regarding Krishna Janmabhoomi case todayCourt to hear plea regarding Krishna Janmabhoomi case today
ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣ
author img

By

Published : Mar 22, 2021, 2:11 PM IST

ಮಥುರಾ (ಉತ್ತರ ಪ್ರದೇಶ): ಶ್ರೀ ಕೃಷ್ಣ ಜನ್ಮಭೂಮಿಯ ಮಾಲೀಕತ್ವ ಮತ್ತು ದೇವಾಲಯದ ಬಳಿ ಇರುವ ಮಸೀದಿ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಮಥುರಾದ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.

ಶ್ರೀ ಕೃಷ್ಣ ಜನ್ಮಭೂಮಿಗೆ ಸೇರಿದ 13.37 ಎಕರೆ ಭೂಮಿಯನ್ನು ಮರುಪಡೆಯಲು ಹಾಗೂ ಕೃಷ್ಣ ಹುಟ್ಟಿದ ಈ ಪ್ರದೇಶದಲ್ಲಿರುವ ಕತ್ರಿ ಕೇಶವ್ ದೇವ್ ದೇವಸ್ಥಾನದ ಆವರಣದಲ್ಲಿ 17ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕು ಎಂದು ಕೋರಿ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ವಕೀಲರು 2019ರ ಸೆಪ್ಟೆಂಬರ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ತೆರವು ಕುರಿತ ಆದೇಶ ಕಾಯ್ದಿರಿಸಿದ ಕೋರ್ಟ್​

ಪ್ರಸ್ತುತ ಶಾಹಿ ಈದ್ಗಾ ಮಸೀದಿಯನ್ನು ಸುನ್ನಿ ಕೇಂದ್ರ ಮಂಡಳಿಯ ಒಪ್ಪಿಗೆಯೊಂದಿಗೆ ಟ್ರಸ್ಟ್ ಮಸೀದಿ ಈದ್ಗಾ ನಿರ್ವಹಣಾ ಸಮಿತಿ ನಿರ್ವಹಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.