ETV Bharat / bharat

ಪಂಜಾಬ್‌ ಬಿಜೆಪಿ ನಾಯಕ ತೇಜಿಂದರ್ ಬಗ್ಗಾಗೆ ಬಂಧನದಿಂದ ಮುಕ್ತಿ - ಆಪ್‌

ಪ್ರಚೋದನಾತ್ಮಕ ಹೇಳಿಕೆ, ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಹಾಗು ಬೆದರಿಕೆಯಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರನ್ನು ಮೇ 10ರ ವರೆಗೆ ಬಂಧಿಸದಂತೆ ಪಂಜಾಬ್-ಹರಿಯಾಣ ಹೈಕೋರ್ಟ್‌ ಕಳೆದ ಮಧ್ಯರಾತ್ರಿ ಆದೇಶ ಹೊರಡಿಸಿದೆ.

ತೇಜಿಂದರ್ ಬಗ್ಗಾ
ತೇಜಿಂದರ್ ಬಗ್ಗಾ
author img

By

Published : May 8, 2022, 7:26 AM IST

ಚಂಡೀಗಢ: ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರನ್ನು ಸುತ್ತಿಕೊಂಡ ವಿವಾದ ಮಗ್ಗುಲು ಬದಲಿಸಿದೆ. ಶನಿವಾರ(ನಿನ್ನೆ) ಮಧ್ಯರಾತ್ರಿ ನಡೆದ ವಿಶೇಷ ವಿದ್ಯಮಾನದಲ್ಲಿ ಪಂಜಾಬ್-ಹರಿಯಾಣ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಿದ್ದು, ಬಗ್ಗಾ ಅವರಿಗೆ ಜಾಮೀನುರಹಿತ ಬಂಧನ ವಾರೆಂಟ್‌ನಿಂದ ಮುಕ್ತಿ ನೀಡಿತು. ಇದರ ಜೊತೆಗೆ, ಮೇ 10ರ ವರೆಗೆ ಬಂಧಿಸದಂತೆ ಸೂಚಿಸಿ ಮೊಹಾಲಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆ ಮೇ 10 ರಂದು ನಡೆಯಲಿದೆ. ಹೀಗಾಗಿ, ಇದಕ್ಕೂ ಮುನ್ನ ಬಗ್ಗಾ ಅವರ ವಿರುದ್ಧ ಪೊಲೀಸರು ಯಾವುದೇ ರೀತಿಯ ಬಲವಂತದ ಕಾನೂನು ಪ್ರಕ್ರಿಯೆ ನಡೆಸುವಂತಿಲ್ಲ. ಬಿಜೆಪಿ ನಾಯಕನನ್ನು ಬಂಧಿಸುವಂತೆ ಮೊಹಾಲಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಜಾಮೀನುರಹಿತ ಬಂಧನ ವಾರೆಂಟ್‌ ರದ್ದುಪಡಿಸುವಂತೆ ಕೋರಿ ಬಗ್ಗಾ ಅವರು ಪಂಜಾಬ್‌-ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ತೇಜಿಂದರ್ ಬಗ್ಗಾ ವಿರುದ್ಧದ ಆರೋಪವೇನು?: ಪ್ರಚೋದನಾತ್ಮಕ ಹೇಳಿಕೆ, ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಹಾಗು ಬೆದರಿಕೆಯಂಥ ಗಂಭೀರ ಅಪರಾಧ ಆರೋಪದಡಿ ಪಂಜಾಬ್‌ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪಂಜಾಬ್‌ನ ಆಡಳಿತಾರೂಢ ಆಪ್‌ ನಾಯಕ, ಮೊಹಾಲಿ ನಿವಾಸಿ ಸನ್ನಿ ಅಹುಲಿವಾಲಿಯಾ ದೂರು ನೀಡಿದ್ದರು.

ಈ ಪ್ರಕರಣದಡಿ ಬಗ್ಗಾ ಅವರನ್ನು ದೆಹಲಿಯ ಅವರ ನಿವಾಸದಲ್ಲೇ ಪಂಜಾಬ್‌ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಆದ್ರೆ, ಬಳಿಕ ನಡೆದ ಬೆಳವಣಿಗೆಯಲ್ಲಿ ಪಂಜಾಬ್‌ಗೆ ಕರೆದುಕೊಂಡು ಹೋಗುವಾಗ ಹರಿಯಾಣ ಪೊಲೀಸರು ತಡೆದು ಪಂಜಾಬ್‌ ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದ್ದರು. ಹಾಗಾಗಿ, ಮತ್ತೆ ಬಗ್ಗಾ ಅವರನ್ನು ನವದೆಹಲಿಗೆ ವಾಪಸ್ ಕರೆತರಲಾಗಿತ್ತು.

ಇದನ್ನೂ ಓದಿ: ಪಿಎಸ್ಐ ಅಕ್ರಮ: ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾದ ಪೊಲೀಸ್ ಇಲಾಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.