ETV Bharat / bharat

ಶರ್ಜೀಲ್ ಇಮಾಮ್ ಮೇಲೆ ಹಲ್ಲೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿ ಸಲ್ಲಿಸುವಂತೆ ಕೋರ್ಟ್​ ಸೂಚನೆ

ಶರ್ಜೀಲ್ ಇಮಾಮ್, ನನ್ನ ಮೇಲೆ ಜೈಲಾಧಿಕಾರಿಗಳು ಜೈಲಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಮತ್ತು ಡ್ಯೂಟಿ ರಿಜಿಸ್ಟರ್‌ಗಳನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯ ಗುರುವಾರ ಸೂಚಿಸಿದೆ.

ಶರ್ಜೀಲ್‌ ಇಮಾಮ್‌ ಮೇಲೆ ಜೈಲಿನಲ್ಲಿ ನಡೆದ ಹಲ್ಲೆ

author img

By

Published : Jul 14, 2022, 8:33 PM IST

ನವದೆಹಲಿ: ಶರ್ಜೀಲ್‌ ಇಮಾಮ್‌ ಮೇಲೆ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಮತ್ತು ಡ್ಯೂಟಿ ರಿಜಿಸ್ಟರ್‌ಗಳನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯ ಗುರುವಾರ ಸೂಚಿಸಿದೆ. ಶೋಧದ ವೇಳೆ ಜೈಲು ಅಧಿಕಾರಿಗಳು ಮತ್ತು ಅಪರಾಧಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆತನನ್ನು ಭಯೋತ್ಪಾದಕ ಎಂದು ಕರೆಯಲಾಗಿದೆ ಎಂದು ಆರೋಪಿಸಿದ್ದ.

ಜೈಲು ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಅಧಿಕಾರಿಗಳು ಶಾರ್ಜೀಲ್ ಇಮಾಮ್ ಸಲ್ಲಿಸಿದ ಅರ್ಜಿಯ ಬಗ್ಗೆ ವರದಿಯನ್ನು ಸಲ್ಲಿಸಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಮುಂದಿನ ವಿಚಾರಣೆಯ ದಿನಾಂಕದಂದು ಸಹಾಯಕ್ (ಸೇವಾದಾರ್) ನ ಸಿಸಿಟಿವಿ ದೃಶ್ಯಗಳು ಮತ್ತು ಡ್ಯೂಟಿ ರಿಜಿಸ್ಟರ್​ ಅನ್ನು ಸಲ್ಲಿಸಲು ಸೂಚಿಸಿದ್ದಾರೆ. ಜುಲೈ 20 ರಂದು ನ್ಯಾಯಾಲಯದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ಲೇ ಮಾಡಲಾಗುವುದು.

ಶರ್ಜೀಲ್ ಇಮಾಮ್ ಸಲ್ಲಿಸಿದ ಅರ್ಜಿಯ ಕುರಿತು ಜೈಲು ಅಧಿಕಾರಿಗಳು ಗುರುವಾರ ವರದಿ ಸಲ್ಲಿಸಿದ್ದಾರೆ. ಅವರ ಮೇಲೆ ಹಲ್ಲೆ, ಪುಸ್ತಕಗಳನ್ನು ಎಸೆದಿರುವುದು ಮತ್ತು ಆತನನ್ನು ಭಯೋತ್ಪಾದಕ ಎಂದು ಕರೆದ ಆರೋಪಗಳನ್ನು ಆ ವರದಿಯಲ್ಲಿ ನಿರಾಕರಿಸಲಾಗಿದೆ. ಉಪ ಜೈಲು ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ ಜೂನ್ 30, 2022 ರಂದು ಅವರ ವಾರ್ಡ್‌ನಲ್ಲಿ ಶೋಧ ನಡೆಸಲಾಯಿತು ಎಂದು ಅದು ಹೇಳಿದೆ.

ಇದನ್ನೂ ಓದಿ:ಈಶಾನ್ಯ ದೆಹಲಿ ಗಲಭೆ ಪ್ರಕರಣ: ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಬಂಧನ

ಮಾಧ್ಯಮಗಳ ಗಮನ ಸೆಳೆಯಲು ಅವರು ಈ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಈಗಾಗಲೇ ಸಂರಕ್ಷಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ದೇಶನದ ಮೇರೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಲು ಜೈಲು ಅಧಿಕಾರಿಗಳಿಂದ ನಿರ್ದೇಶನ ನೀಡುವಂತೆ ಶರ್ಜೀಲ್ ಕೋರಿದ್ದರು. ಜೂನ್ 30 ರಂದು ಸಂಜೆ ಅವರ ಸೆಲ್‌ನಲ್ಲಿ ಅಕ್ರಮವಾಗಿ ಶೋಧ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಮೇ. 27 ರಂದು ದೇಶದ್ರೋಹ ಪ್ರಕರಣದಲ್ಲಿ ಜಾಮೀನಿಗಾಗಿ ಶರ್ಜೀಲ್ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ನಿರ್ವಹಣೆಯ ವಿಷಯವನ್ನು ಪ್ರಸ್ತಾಪಿಸಿದ ನಂತರ ಅವರ ವಕೀಲರು ದೆಹಲಿ ಹೈಕೋರ್ಟ್‌ನಿಂದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದರು. ಜಾಮೀನಿಗಾಗಿ ಕೆಳ ನ್ಯಾಯಾಲಯದ ಮೊರೆ ಹೋಗುವಂತೆ ಹೈಕೋರ್ಟ್ ಹೇಳಿತ್ತು. ತಾಲಿಬ್ ಹುಸೇನ್, ಅಹ್ಮದ್ ಇಬ್ರಾಹಿಂ ಮತ್ತು ಕಾರ್ತಿಕ್ ವೇಣು ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.