ETV Bharat / bharat

ಸೌಂಡ್​ ಬಾಕ್ಸ್​​ನಲ್ಲಿ 12 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ: ಗಂಡ-ಹೆಂಡ್ತಿ ಸೆರೆ - ಹೆರಾಯಿನ್ ಸಾಗಿಸುತ್ತಿದ್ದ ಗಂಡ-ಹೆಂಡತಿ ಬಂಧನ

ಮುರ್ಶಿದಾಬಾದ್​ ಜಿಲ್ಲೆಯ ಲಾಲ್​ಗೋಲಾದಿಂದ ಮಾಲ್ಡಾ ಟೌನ್​ ರೈಲ್ವೆ ನಿಲ್ದಾಣಕ್ಕೆ ಬುಧವಾರ ರಾತ್ರಿ ದಂಪತಿ ಬಂದಿಳಿದಿದ್ದರು. ಈ ವೇಳೆ ಎಸ್​​ಟಿಎಫ್​ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಇಬ್ಬರನ್ನೂ ವಶಕ್ಕೆ ಪಡೆದು ಹೆರಾಯಿನ್ ಪತ್ತೆ ಹೆಚ್ಚಿಸಿದ್ದಾರೆ.

ಸೌಂಡ್​ ಬಾಕ್ಸ್​​ನಲ್ಲಿ 12 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ

author img

By

Published : Apr 7, 2022, 7:24 PM IST

ಮಾಲ್ಡಾ (ಪಶ್ಚಿಮ ಬಂಗಾಳ): ಅಕ್ರಮವಾಗಿ 2.5 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ದಂಪತಿಯನ್ನು ಪಶ್ಚಿಮ ಬಂಗಾಳದ ಸ್ಪೆಷಲ್​​ ಟಾಸ್ಕ್​​ ಫೋರ್ಸ್​​ (ಎಸ್​​ಟಿಎಫ್​) ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಹೆರಾಯಿನ್​ ಮೌಲ್ಯ ಅಂದಾಜು 12 ಕೋಟಿ ರೂ. ಆಗಿದೆ.

27 ವರ್ಷದ ಗೋಲಾಂ ಮುಸ್ತಾಫಾ ಮತ್ತು 20 ವರ್ಷದ ರಿಯಾ ಶಫೀನ್​ ಎಂಬುವವರೇ ಬಂಧಿತ ದಂಪತಿ. ಮುರ್ಶಿದಾಬಾದ್​ ಜಿಲ್ಲೆಯ ಲಾಲ್​ಗೋಲಾದಿಂದ ಮಾಲ್ಡಾ ಟೌನ್​ ರೈಲ್ವೆ ನಿಲ್ದಾಣಕ್ಕೆ ಬುಧವಾರ ರಾತ್ರಿ ಇವರು ಬಂದಿಳಿದಿದ್ದರು. ಈ ವೇಳೆ ದಾಳಿ ಮಾಡಿ ಇಬ್ಬರನ್ನೂ ವಶಕ್ಕೆ ಪಡೆದು ಹೆರಾಯಿನ್ ಪತ್ತೆ ಹೆಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆರಾಯಿನ್ ಅ​ನ್ನು ಪ್ಲಾಸ್ಟಿಕ್ ಜತೆಗೆ ಸುತ್ತಿ ಸೌಂಡ್​ ಬಾಕ್ಸ್​​ನಲ್ಲಿ ಅಡಗಿಸಿಟ್ಟು ಸಾಗಿಸಲಾಗುತ್ತಿತ್ತು. ಇದನ್ನು ಈಶಾನ್ಯ ರಾಜ್ಯಗಳಿಂದ ತೆಗೆದುಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಇಂಗ್ಲಿಷ್ ಬಜಾರ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 2 ಕೋಟಿ‌ ರೂ. ಕದ್ದು ಗುಡ್ಡೆ ಮಾಂಸದ ರೀತಿ ಸಮನಾಗಿ ಹಣ ಹಂಚಿಕೊಂಡ ಖದೀಮರು ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.