ETV Bharat / bharat

ಸಂಬಂಧ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ; ಕೊಡಲಿಯಿಂದ ಹತ್ಯೆ ಮಾಡಿದ ದಂಪತಿ

ವಿವಾಹಿತ ಮಹಿಳೆಗೆ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದ ವ್ಯಕ್ತಿಯನ್ನು ದಂಪತಿ ಹತ್ಯೆ ಮಾಡಿದ್ದಾರೆ.

up
ಘಟನಾ ಸ್ಥಳ
author img

By

Published : Apr 24, 2023, 11:42 AM IST

ಸುಲ್ತಾನ್​ಪುರ (ಉತ್ತರ ಪ್ರದೇಶ): ಮಾನಸಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಡಲಿಯಿಂದ ದಂಪತಿ ಹತ್ಯೆ ಮಾಡಿರುವ ಘಟನೆ ಸುಲ್ತಾನ್‌ಪುರ ಜಿಲ್ಲೆಯ ಗೋಸೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಪುರ್ ಚಪರ್ಹ್ವಾ ಗ್ರಾಮದಲ್ಲಿ ಭಾನುವಾರ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿ ಗಂಗಾ ಪ್ರಸಾದ್​ ಚೌಬೆ ವಾರಾಣಸಿಯ ಚೋಲಾಪುರದ ಬಂಟರಿ ಪ್ರದೇಶದ ನಿವಾಸಿ ಎಂದು ಪೊಲೀಸ್​ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಆರೋಪಿ ದಂಪತಿಯಾದ ಪ್ರದೀಪ್​ ನಿಶಾದ್​ ಮತ್ತು ಪದ್ಮಾವತಿಯಾಗಿದ್ದಾರೆ. ದಂಪತಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ

ಘಟನೆ ವಿವರ: ಮೃತ ಗಂಗಾ ಪ್ರಸಾದ್​ ಔಷಧ ಕಂಪನಿಯೊಂದರಲ್ಲಿ ಎಂಆರ್​ ಆಗಿ ಕೆಲಸ ಮಾಡುತ್ತಿದ್ದ. ಈ ಆರೋಪಿ ಪದ್ಮಾವತಿ ಮುಂಬೈನಲ್ಲಿ ಇದ್ದಾಗ ಆತನೊಂದಿಗೆ ಸಂಪರ್ಕ ಹೊಂದಿದ್ದಳು. ಇವರಿಬ್ಬರ ನಡುವೆ ಸಂಬಂಧವಿತ್ತು. ಆ ಸಮಯದಲ್ಲಿ ಆತ ಅವರಿಬ್ಬರ ವಿಡಿಯೋವನ್ನು ಮಾಡಿದ್ದನು. ಆದರೆ, ಪದ್ಮಾವತಿಗೆ ಪ್ರದೀಪ್​ ಜೊತೆ ವಿವಾಹವಾಗುತ್ತದೆ. ಮದುವೆಯ ನಂತರ ಆಕೆ ಗಂಗಾ ಪ್ರಸಾದ್​ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಳು.

ಆದರೆ, ಗಂಗಾ ಪ್ರಸಾದ್​ ಅವರ ವಿಡಿಯೋ ಇಟ್ಟುಕೊಂಡು ಪದ್ಮಾವತಿಗೆ ಸಂಬಂಧ ಬೆಳೆಸುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಪದ್ಮಾವತಿ ತನ್ನ ಪತಿಗೂ ತಿಳಿಸಿರುತ್ತಾರೆ. ಇದಾದ ಬಳಿಕ ಪತಿ ಪತ್ನಿ ಇಬ್ಬರೂ ಮುಂಬೈನಿಂದ ಸುಲ್ತಾನ್​ಪುರಕ್ಕೆ ಬಂದಿದ್ದರು. ಈ ಮೃತ ಗಂಗಾ ಪ್ರಸಾದ್ ಚೌಬೆ ಕೂಡ ಮುಂಬೈನಿಂದ ಲಕ್ನೋಗೆ ವರ್ಗಾವಣೆಗೊಂಡಿದ್ದರು. ಇಷ್ಟಕ್ಕೆ ಸುಮ್ಮನಿರದ ಪ್ರಸಾದ್ ಪದ್ಮಾವತಿ ಇದ್ದ ಗ್ರಾಮಕ್ಕೂ ತೆರಳಿದಲ್ಲದೇ, ಅವರ ಮನೆಯ ಬಳಿಗೂ ಶನಿವಾರ ಬಂದಿದ್ದಾನೆ.

ಭಾನುವಾರ ಮುಂಜಾನೆ 4 ಗಂಟೆಗೆ ಪದ್ಮಾವತಿಗೆ ಕರೆ ಮಾಡಿದ್ದಾನೆ. ಆದರೆ ಕರೆಯನ್ನು ಆಕೆಯ ಪತಿ ಸ್ವೀಕರಿಸಿದ್ದಾರೆ ನಂತರ ತನ್ನ ಪತ್ನಿಗೂ ತಿಳಿಸಿದ್ದಾರೆ. ಇದಾದ ಬಳಿಕ ದಂಪತಿಗಳಿಬ್ಬರು ಸೇರಿ ಗಂಗಾ ಪ್ರಸಾದ್​ಗೆ ಥಳಿಸಿದ್ದು, ಕೊಡಲಿಯಿಂದ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಆತನ ಮೃತದೇಹವನ್ನು ರಸ್ತೆಯಲ್ಲಿ ಎಸೆಯಲಾಗಿತ್ತು. ಭಾನುವಾರ ರಸ್ತೆಯಲ್ಲಿ ಛಿದ್ರಗೊಂಡ ಶವ ಪತ್ತೆಯಾದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಬಳಿಕ ಸಿಒ ಪ್ರಶಾಂತ್​ ಕುಮಾರ್ ಮತ್ತು ಕೊತ್ವಾಲ್​ ರಾಘವೇಂದ್ರ ರಾವತ್​ ಘಟನಾ ಸ್ಥಳಕ್ಕೆ ತಲುಪಿದ್ದರು ಎಂದು ಪೊಲೀಸ್​ ವರಿಷ್ಠಾಧಿಕಾರಿ ಸೋಮನ್​ ವರ್ಮಾ ತಿಳಿಸಿದ್ದಾರೆ.

ಸ್ಥಳೀಯರೊಂದಿಗೆ ನಡೆಸಿದ ಮಾತುಕತೆಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿ ಪತಿ ಪತ್ನಿಯನ್ನು ಬಂಧಿಸಿದ್ದಾರೆ. ಇನ್ನು ಸುಲ್ತಾನ್‌ಪುರದ ಪೊಲೀಸ್ ಅಧೀಕ್ಷಕ ಸೋಮೆನ್ ಬರ್ಮಾ ಅವರು, ಆರೋಪಿ ಪ್ರದೀಪ್, ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಗಂಗಾ ಪ್ರಸಾದ್​ ಚೌಬೆ ತನ್ನ ಹೆಂಡತಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮೂರು ತಿಂಗಳ ಮಗು ಬಲಿ ಪಡೆದ ಬೀದಿ ನಾಯಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.