ಅಮೃತಸರ (ಪಂಜಾಬ್) : ಜನರ ಮೃತದೇಹದ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ನೆರವೇರಿಸಲು ಸ್ಮಶಾನಗಳಿಗೆ ಭೇಟಿ ನೀಡುವುದು ಸಾಮಾನ್ಯ. ಸ್ಮಶಾನ ಅಂದರೆ ಮನಸ್ಸಿನಲ್ಲಿ ಬೇಸರದ ಭಾವನೆ ಮೂಡುತ್ತದೆ. ಹೀಗಾಗಿ, ಕೆಲವರಂತೂ ಸ್ಮಶಾನಗಳಿರುವ ಪ್ರದೇಶಗಳತ್ತ ಹಾದು ಹೋಗಲೂ ಇಷ್ಟಪಡುವುದಿಲ್ಲ. ಆದರೆ, ಇಲ್ಲೊಂದು ಘಟನೆ ಅಚ್ಚರಿ ಮೂಡಿಸುವಂಥದ್ದು.
ವಿವರ: ಪ್ರಕಾಶ್ ಕೌರ್ ಎಂಬ ವೃದ್ಧೆ ಮತ್ತು ಆಕೆಯ ಮೊಮ್ಮಗಳು ಅಮೃತಸರದ ಸ್ಮಶಾನದಲ್ಲಿ ವಾಸವಾಗಿದ್ದಾರೆ. ಇಲ್ಲಿನ ಸಣ್ಣದೊಂದು ಕೊಠಡಿಯಲ್ಲಿ ಇವರ ಬದುಕು ಸಾಗುತ್ತಿತ್ತು. ಈ ಅಜ್ಜಿ ತನ್ನ ಮೊಮ್ಮಗಳ ಮದುವೆಯನ್ನು ಇದೇ ಸ್ಮಶಾನದ ಆವರಣದಲ್ಲಿಯೇ ಮಾಡಿದ್ದಾರೆ. ಮದುವೆ ನಡೆದ ಈ ಸ್ಥಳ ಅಮೃತಸರದ ಮೊಹಕಂಪುರ ಪ್ರದೇಶ. ಸ್ಥಳೀಯರ ನೆರವಿನಿಂದ ಯುವತಿಯನ್ನು ಸ್ಥಳೀಯ ಹುಡುಗನೇ ವರಿಸಿದ್ದಾನೆ. ಈ ವೃದ್ಧೆ ಹಾಗು ಮೊಮ್ಮಗಳು ತಮ್ಮ ಪ್ರಾಮಾಣಿಕತೆ ಮತ್ತು ಮುಗ್ಧ ಸ್ವಭಾವದಿಂದಲೇ ಇಲ್ಲಿ ಚಿರಪರಿಚಿತರಂತೆ. ಸ್ಥಳೀಯರು ಸೇರಿಕೊಂಡು ಮದುವೆಗೆ ಏರ್ಪಾಡು ಮಾಡಿದ್ದರು. ಅವರೇ ಹುಡುಗನನ್ನೂ ಆರಿಸಿದ್ದರು.
ಪ್ರಕಾಶ್ ಕೌರ್ ಮಾತನಾಡಿ, ''ಸ್ಥಳೀಯರ ನೆರವಿನಿಂದ ಮೊಮ್ಮಗಳ ಮದುವೆ ನಡೆಯಿತು. ನನಗಂತೂ ತುಂಬಾ ಖುಷಿಯಾಗಿದೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದರು.
ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ಮದುವೆ: ರಾಮ್ಚರಣ್, ಕತ್ರಿನಾ ಸೇರಿ ಸೂಪರ್ ಸ್ಟಾರ್ಗಳಿಂದ ಶುಭಾಶಯ